Video Viral: ಸೈಕಲ್‌ನಲ್ಲಿ ಲೇಟಾಗಿ ಬಂದು ಪಾರ್ಸೆಲ್ ಕೊಟ್ಟ ಡೆಲಿವರಿ ಬಾಯ್: ಗ್ರಾಹಕನ ಮಾನವೀಯ ನಡೆಗೆ ನೆಟ್ಟಿಗರ ಪ್ರಶಂಸೆ

ಇಂದಿನ ಧಾವಂತ ಬದುಕಿನಲ್ಲಿ ಮನುಷ್ಯ ಮಾನವೀಯತೆಯನ್ನು ಮರೆತಿದ್ದಾನೆ. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾನವೀಯ ಘಟನೆಗಳು ನಡೆದಾಗ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಟ್ರೆಂಡ್ ಸೃಷ್ಟಿಯಾಗಿದೆ. ಅದೇ ರೀತಿ ಇಲ್ಲೊಬ್ಬ ಸ್ವಿಗ್ಗಿ ಡೆಲಿವರಿ ಬಾಯ್ ಜೊತೆಗೆ ಗ್ರಾಹಕರೊಬ್ಬರು ನಡೆದುಕೊಂಡ ರೀತಿ ಆನ್‌ಲೈನ್‌ನಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಮನುಷ್ಯನಾದವನು ಮತ್ತೊಬ್ಬರ ಕಷ್ಟದಲ್ಲಿ ಸಹಾಯ ಮಾಡಬೇಕು ಎಂಬುದು ಗೊತ್ತಿದ್ದರೂ ಸಹ, ಹಾಗೆ ಸಹಾಯ ಮಾಡುವವರು ತೀರಾ ಕಡಿಮೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ನಿಗದಿತ ಸಮಯಕ್ಕಿಂತಲೂ ತಡವಾಗಿ ಬಂದರೂ ಸಹಿತ ಆತನೊಂದಿಗೆ ಗ್ರಾಹಕ ನಡೆದುಕೊಂಡಿರುವ ರೀತಿ, ಒಳ್ಳೆಯ ಸಂದೇಶವಿರುವ ವಿಡಿಯೋ ಹರಿದಾಡುತ್ತಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಅನೇಕರು ಬರೆದುಕೊಂಡಿದ್ದಾರೆ, ಕೆಲವರು ಕಾಮೆಂಟ್ ಮಾಡಿದ್ದಾರೆ.

Video Viral of Swiggy Boy Food Delivery on Cycle Customer give Rs 500 Tip Netizens react

ವೈರಲ್ ವಿಡಿಯೋದಲ್ಲಿ ಏನಿದೆ? ನೆಟ್ಟಿಗರ ಸಲಹೆ ಏನು?

ಈ ಡೆಲಿವರಿ ಬಾಯ್ ಯುವಕ ಇತರರಂತೆ ಬೈಕ್‌ ಮೇಲೆ ಬಾರದೇ ಸೈಕಲ್ ಮೇಲೆ ಆಹಾರ ಸರಬರಾಜು ಮಾಡುತ್ತಾನೆ. ಊಟ ಆರ್ಡರ್ ಮಾಡಿದ ಗ್ರಾಹಕರ ಮನೆ ಮೂರನೆ ಮಹಡಿಯಲ್ಲಿರುವುದರಿಂದ ಜೊತೆಗೆ ಯುವಕ ಸೈಕಲ್ ಮೇಲೆ ಬಂದ ಹಿನ್ನೆಲೆಯಲ್ಲಿ ಡೆಲಿವರಿ ಮಾಡುವುದು ತುಸು ತಡವಾಗುತ್ತದೆ.

ಈ ಕಾರಣದಿಂದ ಮ್ಯಾಪ್ ನೋಡಿಕೊಂಡು ಕೈಲಿ ಫುಡ್ ಆರ್ಡರ್ ಹಿಡಿದು ಮೆಟ್ಟಿಲು ಹತ್ತಿ ಬರುವ ಯುವಕನನ್ನು ಗ್ರಾಹಕ ಪ್ರಶ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯಾಕೆ ತಡವಾಯ್ತು? ಎಂದು ಗ್ರಾಹಕರು ಕೇಳುತ್ತಾರೆ. ಅದಕ್ಕೆ ತುಂಬಾ ಭಯದಿಂದ ಯುವಕ ಉತ್ತರಿಸುತ್ತಾನೆ. ಆಗ ಗ್ರಾಹಕ ಹೆದರಬೇಡ, ನೀನು ಸೈಕಲ್‌ನಲ್ಲಿ ಬಂದಿದ್ದನ್ನು ನಾನು ನೋಡಿದೆ. ಕುಡಿಯಲು ನೀರು ಬೇಕಾ? ಎಷ್ಟು ದಿನಗಳಿಂದ ಈ ಡೆಲಿವರಿ ಕೆಲಸ ಮಾಡಿಕೊಂಡಿದ್ದೀಯಾ? ಎಂದು ಗ್ರಾಹಕ ಪ್ರಶ್ನಿಸುತ್ತಾರೆ.

ಅದಕ್ಕೆ ಯುವಕ ನೀರು ಏನು ಬೇಡಾ ಸಾರ್. ಎರಡು ಮೂರು ತಿಂಗಳಿಂದ ಡೆಲಿವರಿ ಕೆಲಸ ಮಾಡುತ್ತೇನೆ ಎಂದು ಭಯದಿಂದ ಮುಗ್ಧವಾಗಿ ತಿಳಿಸುತ್ತಾನೆ. ಆತನ ಮುಗ್ಧತೆಗೆ ನೆಟ್ಟಿಗರು ಒಂದು ಕ್ಷಣ ಭಾವುಕರಾಗಿದ್ದಾರೆ. ನಂತರ ಫುಡ್ ಪಡೆದ ಗ್ರಾಹಕರ 500 ರೂ. ಅನ್ನು ಟಿಪ್ ಆಗಿ ಯುವಕನಿಗೆ ನೀಡುತ್ತಾರೆ. ಆಗ ಯುವಕ ಇಷ್ಟು ದೊಡ್ಡ ಮೊತ್ತದ ಟಿಪ್ ಇದೇ ಮೊದಲ ಬಾರಿಗೆ ಪಡೆದಿದ್ದೇನೆ ಎಂದು ಖಷಿಯಿಂದ ಧನ್ಯವಾದ ತಿಳಿಸಿ ಸೈಕಲ್ ಏರಿ ಹೊರಡುತ್ತಾನೆ.

ನೆಟ್ಟಿಗರ ಸಲಹೆ ಏನು?

ಯುವಕನ ಕಾರ್ಯಶ್ರಮ, ದುಡಿದು ತಿನ್ನುವ ಗುಣಕ್ಕೆ, ಆತನ ಮುಗ್ಧತೆಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಹೀಗಾಗಿ ವ್ಲಾಗರ್ ಪ್ರತಿಕ್ ಎಂಬುವವರು ಹಂಚಿಕೊಂಡ ಈ ವಿಡಿಯೋ ತುಣಕನ್ನೂ ನೆಟ್ಟಿಗರು ಸಾಕಷ್ಟು ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ ಮತ್ತು ಗ್ರಾಹಕನ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ವಿಡಿಯೋದಲ್ಲಿ ಡೆಲಿವರಿ ಬಾಯ್ ಯುವಕನ ಮುಖ ಬ್ಲರ್ ಮಾಡಬೇಕಿತ್ತು. ಏಕೆಂದರೆ ಆತನ ಸ್ವಾಭಿಮಾನಕ್ಕೆ ಈ ವಿಡಿಯೋ ಅಥವಾ ಹೆಚ್ಚುವರಿ ಟಿಪ್ ವಿಚಾರ ಧಕ್ಕೆ ತರಬಹುದು ಎಂದು ಕೆಲವು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+