Video Viral: ವಿಮಾನದ ವಿಂಡ್‌ಶಿಲ್ಡ್ ಒರೆಸಿದ ಪೈಲಟ್: ಇವರೇನು ಲಾರಿ ಕಂಡಕ್ಟರಾ? ಎಂದ ನೆಟ್ಟಿಗರು
ಸಾಮಾನ್ಯವಾಗಿ ನೀವು ಕಾರು, ಲಾರಿ, ಟಾಟಾ ಏಸ್ ನಂತಹ ಮೂರು, ನಾಲ್ಕು ಚಕ್ರಗಳ ವಾಹನಗಳ ಮುಂದಿನ ಗಾಜನ್ನು ಚಾಲಕರು ಬಟ್ಟೆಯಿಂದ ಒರೆಸುವುದನ್ನು ನೋಡಿರುತ್ತೀರಿ. ಆದರೆ ಪಾಕಿಸ್ತಾನದಲ್ಲಿ ಪೈಲೆಟ್ ವಿಮಾನದ ಮುಂದಿನ ಗ್ಲಾಜನ್ನು (ವಿಂಡ್‌ಸ್ಕ್ರೀನ್) ಒರೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನೋಡಲು ಹಾಸ್ಯ ಅನ್ನಿಸಿದರೆ, ಇದರ ಹಿಂದೆ ಗಂಭೀರ ವಿಷಯವೊಂದು ಚರ್ಚೆಯಾಗುತ್ತಿದೆ.
ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಹೊರಡುತ್ತಿದ್ದ ಏರ್‌ಲೈನ್ ಪೈಲಟ್ ಅಚ್ಚರಿಯ ಕೆಲಸವೊಂದು ವೈರಲ್ ಆಗುತ್ತಿದೆ.

ವಿಮಾನ ಟೇಕಾಫ್ ಆಗುವ ಕೆಲವೇ ಕ್ಷಣಗಳ ಮುನ್ನ ಪಾಕಿಸ್ತಾನಿ ಏರ್‌ಲೈನ್ ಪೈಲಟ್ ವಿಮಾನದ ವಿಂಡ್‌ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಿದ್ದಾರೆ. ಕಿಟಕಿ ಬದಿಯಲ್ಲಿ ತಲೆ ಹೊರ ಹಾಕಿ ನಾಲ್ಕು ಚಕ್ರದ ವಾಹನದಂತೆ ವಿಮಾನ ಗ್ಲಾಜು ಒರೆಸಿದ್ದಾರೆ.
ವಿಮಾನ ಟೇಕಾಪ್ ಆಗುವ ಮುನ್ನದ ಘಟನೆ
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಸೀನ್ ಏರ್ ಪೈಲಟ್ ಏರ್‌ಬಸ್ 330-200 ವಿಮಾನ ಇದಾಗಿದೆ. ಇದು ಪಾಕಿಸ್ತಾನದಿಂದ ಸೌದಿ ಅರೇಬಿಯಾದ ಜೆಡ್ಡಾ ತೆರಳಬೇಕಿದ್ದ ವಿಮಾನವಾಗಿದೆ. ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ಮೊದಲು ಪೈಲಟ್ ಕಿಟಕಿಯಿಂದ ಹೊರಗೆ ಒರಗಿ ಗ್ಲಾಜು ಒರೆಸಿದ ವಿಡಿಯೋದಿಂದಾಗಿ ಏರ್‌ಲೈನ್ ಸುರಕ್ಷತಾ ಪ್ರೋಟೋಕಾಲ್ ಹಾಗೂ ಸಿಬ್ಬಂದಿ ಜವಾಬ್ದಾರಿಯನ್ನು ಪ್ರಶ್ನಿಸುವಂತೆ ಮಾಡಿದೆ.
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ವಿಡಿಯೋ ನೋಡಿದವರು ಪ್ರೋಟೋಕಾಲ್ ಪಾಲನೆ ಆಗುವುದಿಲ್ಲ ಅಂತಲೂ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗರು ಈ ದೃಶ್ಯವು ಹಾಸ್ಯಮಯ ಅನ್ನಿಸಿದೆ. ಇಂತಹ ಘಟನೆ ಪಾಕಿಸ್ತಾನದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದಿದ್ದಾರೆ.
ಮತ್ತೊಬ್ಬರು ವಿಡಿಯೋದಲ್ಲಿ ಕಾಣುವವರು 'ಪೈಲಟ್ ಹ ಯಾ ಬಸ್ ಕಾ ಕಂಡಕ್ಟರ್? (ಅವರು ಪೈಲಟ್ ಅಥವಾ ಬಸ್ ಕಂಡಕ್ಟರ್?) ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಕೆಲಸವನ್ನು ಇವರು ವಿಮಾನ ಹಾರಾಟದ ಸಮಯದಲ್ಲಿ ಮಾಡಿಲ್ಲ ಎಂದು ಲೇವಡಿ ಸಹ ಮಾಡಿದ್ದಾರೆ.
ನೋಡಲು ಸಾಮಾನ್ಯ ವಿಡಿಯೋ ಅನ್ನಿಸಿದರೂ ಸಹ ಒಬ್ಬ ಪೈಲಟ್ ಸ್ವತಃ ವಿಂಡ್‌ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತಾರೆ ಎಂದರೆ ಹೇಗೆ? ಇದಕ್ಕೆ ಅದರದ್ದೆ ಆದ ನಿಯಮ ಇಲ್ಲವೇ ಎಂದಿದ್ದಾರೆ. ಪೈಲಟ್‌ಗಳು ವಿಂಡ್‌ಸ್ಕ್ರೀನ್‌ಗಳನ್ನು ಸ್ವಚ್ಛಗೊಳಿಸುತ್ತಾರೆ. ಅದರಲ್ಲಿ ತಪ್ಪೇನಿದೆ. ಪೈಲಟ್‌ಗಳಿಗೆ ಈ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕೆ ಅವರೇ ಸ್ವಚ್ಛಗೊಳಿಸಿದ್ದಾರೆ ಎಂದು ವಿಡಿಯೋ ನೋಡಿ ಮಿಶ್ರವಾಗಿ ಪ್ರತಿಕ್ರಿಯಿಸಿದ್ದಾರೆ.
Pilots in Pakistan are Cleaning the glass of Plane😭
— Ghar Ke Kalesh (@gharkekalesh) September 2, 2024
pic.twitter.com/FMkQ8ugI2g
ಏರ್‌ಪೋರ್ಟ್ ಸಿಬ್ಬಂದಿ ಕರೆಯಬೇಕಿತ್ತು?
ಪೈಲಟ್‌ಗಳು ವಿಂಡ್‌ಸ್ಕ್ರೀನ್ ಸ್ವಚ್ಛಗೊಳಿಸುವುದು ತಪ್ಪಲ್ಲ. ಆದರೆ ಇದಕ್ಕೆ ಸಹಾಯಕ್ಕೆ ಸಿಬ್ಬಂದಿ ಕರೆಯಬಹುದಿತ್ತು. ಇಲ್ಲವೇ ಪ್ರೋಟೋಕಾಲ್ ಪ್ರಕಾರ ಸಿಬ್ಬಂದಿಯು ಸ್ವಚ್ಛಗೊಳಿಸುವಂತೆ ಕೇಳಬಹುದಿತ್ತು ಎಂದು ಬಳಕೆದಾರರು ಸಲಹೆ ನೀಡಲಿದ್ದಾರೆ. ಕೆಲವರಂತೂ ಬೇರೆ ಬೇರೆ ವಿಮಾನಗಳ ಸ್ವಚ್ಛಗೊಳಿಸುವ ಫೋಟೋ ಹಂಚಿಕೊಂಡಿದ್ದಾರೆ.
ತಾವು ಚಾಲನೆ ಮಾಡುವ ಯಾವುದೇ ವಾಹನಗಳ ಗಾಜನ್ನು ಸ್ವಚ್ಛಗೊಳಿಸಲು ಇದು ಅವಹೇಳನಕಾರಿಯಲ್ಲ. ನಾವೆಲ್ಲರೂ ಅದೇ ರೀತಿ ನಮ್ಮ ನಮ್ಮ ವಾಹನ ಶುಚಿಗೊಳಿಸುತ್ತೇವೆ ಎಂದು ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ತಿಳಿಸಿದ್ದಾರೆ.
ಪಾಕಿಸ್ತಾನ ಹಣದುಬ್ಬರದಿಂದ ದಿವಾಳಿ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಈ ವಿಡಿಯೋವೊಂದು ವೈರಲ್ ಆಗಿದೆ. ಹಿಂದಿನ ಆರ್ಥಿಕ ದುರುಪಯೋಗ, ರಾಜಕೀಯ ಅವ್ಯವಸ್ಥೆ ಮತ್ತು ವಿನಾಶಕಾರಿ ಮಾನ್ಸೂನ್ ಪ್ರವಾಹಗಳಿಂದಾಗಿ ಪಾಕಿಸ್ತಾನ ಸಾಕಷ್ಟು ಸಂಕಷ್ಟ ಎದುರಿಸಿತ್ತು.












Click it and Unblock the Notifications