Video Viral: ರಸ್ತೆಗಳಂತೆ ಬೆಂಗಳೂರು ಏರ್‌ಪೋರ್ಟ್‌ ರನ್‌ವೇನಲ್ಲೂ ಟ್ರಾಫಿಕ್, ಸಾಲುಗಟ್ಟಿ ನಿಂತ ವಿಮಾನಗಳು

ಬೆಂಗಳೂರು, ನವೆಂಬರ್ 12: ಸಂಚಾರ ದಟ್ಟಣೆಯಲ್ಲಿ ದೇಶದಲ್ಲೇ ಭಾರೀ ಹೆಸರು ಮಾಡಿರುವ ಬೆಂಗಳೂರಿನ ಈ ಸಮಸ್ಯೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವ್ಯಾಪಿಸಿದಂತಿದೆ. ವಿಮಾನ ಬಂದಿಳಿಯು ಹಾಗೂ ನಿಲ್ದಾಣದಿಂದ ತೆರಳುವಾಗ ಬಳಕೆಯಾಗುವ ರನ್‌ವೇ ನಲ್ಲಿ ವಿಮಾನಗಳ ಸಂಚಾರದಟ್ಟಣೆ ಕಂಡು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊನ್ನೆಯಷ್ಟೇ ಭಾನುವಾರ ಅತ್ಯಧಿಕ ಮಂಜು ಕವಿದ ವಾತಾವರಣ ದಿಂದಾಗಿ ಒಟ್ಟು 10 ವಿಮಾನಗಳ ಸಂಚಾರ ವಿಳಂಬವಾಗಿತ್ತು. ಆರು ವಿಮಾನಗಳು ಮಾರ್ಗ ಬದಲಾವಣೆ ಆಗಿತ್ತು. ಅದರ ಬೆನ್ನಲ್ಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ದಟ್ಟಣೆಯಿಂದ ಒಂದಷ್ಟು ವಿಳಂಬವಾಯಿತು ಎನ್ನಲಾಗಿದೆ.

Video Viral of Huge Taffic in Runway of Bengaluru International Airport

ಬೆಂಗಳೂರಲ್ಲಿ ಪೀಕ್ ಸಮಯದಲ್ಲಿ ಕೇವಲ ರಸ್ತೆಗಳು ಮಾತ್ರವಲ್ಲದೇ, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ರನ್‌ವೇ ಸಹ ಟ್ರಾಫಿಕ್ ನಿಂದ ಕೂಡಿರಲಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಹೀಗೆ ರನ್‌ವೇನಲ್ಲಿ ಟ್ರಾಫಿಕ್ ಜಾಮ್ ಆಗಿರುವ ದಿನಾಂಕ, ಸಮಯದ ಬಗ್ಗೆ ನಿಖರ ಮಾಹಿತಿ ಇಲ್ಲವಾಗಿದೆ. ಕೆಲವರು ಇದು ಇತ್ತೀಚಿನ ವಿಡಿಯೋ ಅಲ್ಲ ಎನ್ನುತ್ತಿದ್ದಾರೆ. ಜೊತೆಗೆ ಏರ್‌ಪೋರ್ಟ್ ನಿರ್ವಹಣೆಗೆ ಬಗ್ಗೆ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಏಕೆ ಒಂದೇ ರನ್‌ವೇ ಬಳಕೆ ಮಾಡುತ್ತಿದ್ದಾರೆ ಅಂತಲೂ ಪ್ರಶ್ನಿಸಿದ್ದಾರೆ.

ಪೀಕ್ ಸಮಯದಲ್ಲಿ ಹಲವಾರು ವಿಮಾನಗಳು ನಿಲ್ದಾಣದಿಂದ ಬೇರೆ ಬೇರೆ ಕಡೆಗೆ ತೆರಳಬೇಕಾಗಿರುವ ಕಾರಣ ಹೀಗೆ ಟೇಕ್ ಆಫ್ ವೇಳೆ ದಟ್ಟಣ ಎದುರಾಗಿದೆ. ವಿಮಾನಗಳ ದಟ್ಟಣೆ ಆಗುವುದು ಸಮಾನ್ಯವಾಗಿ ತೀರಾ ವಿರಳ. ಆದರೆ ಇಂದಿನ ವಿಡಿಯೋದಲ್ಲಿರುವ ಟ್ರಾಫಿಕ್ ಅಚ್ಚರಿ ತಂದಿದೆ ಕೆಲವರು ಕಾಮೆಂಟ್ ಹಾಕಿದ್ದಾರೆ.

ನೆಟ್ಟಿಗರ ಪೈಕಿ ಕೆಲವರು, ರಾಜಧಾನಿ ಬೆಂಗಳೂರು ತನ್ನ ರಸ್ತೆ ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿದೆ. ಇದೀಗ ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇ ಕೂಡ ಸಂಚಾರ ದಟ್ಟಣೆಯಿಂದ ಮತ್ತೊಂದು ಹಂತಕ್ಕೆ ಹೆಸರು ಮಾಡಲಿದೆ ಎಂದು ಅಲ್ಲಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿಸದ್ದಾರೆ.

ಒಂದೇ ರನ್‌ವೇ ನಲ್ಲಿ ಗಮನಾರ್ಹ ಸಂಖ್ಯೆಯ ವಿಮಾನಗಳು ಟೇಕ್ ಆಫ್ ಆಗಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ಕಾಣಬಹುದಾಗಿದೆ. ಇದೊಂದು ರೀತಿಯ ಅಪರೂಪದ ದೃಶ್ಯ. ಇಂತಹ ಟ್ರಾಫಿಕ್ ಮರುಕಳಿಸಿದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಕೆಲವು ಸಲಹೆ ನೀಡಿದ್ದಾರೆ.

ಇದು ತ್ವರಿತವಾಗಿ ಬೆಳವಣಿಗೆ ಹೊಂದುತ್ತಿರುವ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಶೋಭೆಯಲ್ಲ. ಕರ್ನಾಟಕದ ಸಮರ್ಥನೀಯ ನಗರಲ್ಲಿ ಇದೊಂದು ಯೋಜಿತವಲ್ಲದ ಬೆಳವಣಿಗೆ ಆಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನೊಬ್ಬರು ಈ ಬಗ್ಗೆ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ರಸ್ತೆಗಳಲ್ಲಿ ಗುಂಡಿ ಕಾಣಿಸುತ್ತವೆ. ವಿಮಾನಗಳ ಟ್ರಾಪಿಕ್ ರನ್‌ವೇ ರಸ್ತೆಯಲ್ಲಿ ಗುಂಡಿಗಳು ಕಾಣುತ್ತಿಲ್ಲ ಎಂದರೆ ಇದು ಬಹುಶಃ ಬೆಂಗಳೂರು ಅಲ್ಲ ಎಂಬುದು ನನ್ನ ಭಾವನೆ ಎಂದು ನಗರ ರಸ್ತೆಗುಂಡಿ ಸಮಸ್ಯೆ ಹಾಗೂ ಟ್ರಾಫಿಕ್‌ ಕುರಿತು ವ್ಯಂಗ್ಯವಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+