Video Viral: ಮೈಮೇಲೆ ಹೆಬ್ಬಾವು ಹರಿದಾಡಿದರೂ ಅಲುಗಾಡದ ಲಾರಿ ಚಾಲಕ
ಹಾವುಗಳು ಎಲ್ಲೆ ಕಂಡರೂ ಮಾರುದ್ದ ಛಂಗನೆ ದೂರಕ್ಕೆ ಓಡಿ ಹೋಗವವರೇ ಹೆಚ್ಚು. ಹಾವು ಹಿಡಿಯುವ ಕೌಶಲ್ಯ ಇರುವವರನ್ನು ಬಿಟ್ಟು ಉಳಿದೆಲ್ಲರು ಸರಿಸೃಪಗಳಿಗೆ ಭಯಪಡುತ್ತಾರೆ. ಆದರೆ ಯಾವುದೇ ಕೌಶಲ್ಯವೇ ಇಲ್ಲದ ವ್ಯಕ್ತಿಯೊಬ್ಬ ತನ್ನ ಮೈಮೇಲೆ ಬೃಹತ್ ಹೆಬ್ಬಾವು ಏರಿದರೂ ಆಕ್ಷೇಪಿಸದೇ, ಎದ್ದು ಓಡದೇ ಕಟ್ಟೆಯೇ ಮೇಲೆ ಕುಳಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ವ್ಯಾಪ್ತಿಯ ಗ್ರಾಮಗೊಂದರಲ್ಲಿ ನಡೆದಿದೆ. ಇಲ್ಲಿ ದೈತ್ಯ ಹೆಬ್ಬಾವೊಂದು ಮೈಮೇಲೆ ಏರಿದರೂ ಸಹಿತ ಏನು ಆಗಿಯೇ ಇಲ್ಲವೆಂಬಂತೆ ವ್ಯಕ್ತಿ ಕುಳಿತದ್ದನ್ನು ಕಂಡು ಗ್ರಾಮಸ್ಥರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಅಸಲಿಗೆ ಈತ ಲಾರಿ ಚಾಲಕ. ಹಾವು ಹಿಡಿಯುವ, ಅದಕ್ಕೆ ಸಂಬಂಧಿಸಿದ ಯಾವೊಂದು ಕೌಶಲ್ಯ ಈತನ ಬಳಿ ಇಲ್ಲ. ಈತನ ಬಳಿ ಇದ್ದದ್ದು ಒಂದೇ ಅದು ನಶೆ. ಹೌದು, ಗಡತ್ತಾಗಿ ಮದ್ಯ ಕುಡಿದು ಬಂದಿದ್ದ ಈ ಲಾರಿ ಚಾಲಕ ಮನೆ ಮುಂದಿನ ಕಟ್ಟೆ ಮೇಲೆ ಕುಳಿತಿರುವಾಗ ಮೈ ಮೇಲೆ ಬೃಹತ್ ಗಾತ್ರದ ಹೆಬ್ಬಾವು ಏರಿದೆ.
ಆದರೂ ಅಲುಗಾಡದೇ ಕುಳಿತಿದ್ದ ವ್ಯಕ್ತಿಯ ಪೂರ್ತಿ ನಶೆಯಲ್ಲಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವೀಕ್ಷಣೆ ಪಡೆದಿದೆ. ಈ ಪಾನಮತ್ತ ಲಾರಿ ಚಾಲಕನ ಸುತ್ತ ಹಾವು ಸುತ್ತುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಚಾಲಕ ಸಿಂಗನಪಲ್ಲಿ ಗ್ರಾಮದವರಾಗಿದ್ದು, ಲಾರಿ ಕೆಲಸ ಮುಗಿಸಿ ಕಡಿದು ಬಂದಿದ್ದ ಎನ್ನಲಾಗಿದೆ.
మద్యం మత్తులో ఉన్న వ్యక్తిపైకి ఎక్కిన కొండచిలువ.. కాపాడిన స్థానికులు
— Telugu Scribe (@TeluguScribe) October 15, 2024
కర్నూలు - అవుకు మండలం సింగనపల్లికి చెందిన లారీ డ్రైవర్ డ్యూటీ దిగి ఫుల్లుగా మద్యం సేవించాడు.
మద్యం బాగా ఎక్కడంతో ఇంటికి వెళ్లలేక.. ఓ చోట అరుగుపై కూర్చున్నాడు. మద్యం మత్తులో తూగుతూ ఉండిపోయాడు.
అయితే పక్కనే… pic.twitter.com/0oYLcrwnXU
ಮನೆ ಹೊರಗೆ ಕಟ್ಟೆಯ ಮೇಲೆ ಕುಳಿತ ವೇಳೆ ನಶೆಯಲ್ಲಿಯೇ ನಿದ್ದೆ ಬಂದವನಂತೆ ಆಡುತ್ತಿದ್ದ. ಈ ವೇಳೆ ಹೆಬ್ಬಾವು ಆತಮ ಮೈ ಮೇಲೆ ಏರಿದ್ದನ್ನು ಸ್ಥಳೀಯರು ನೋಡಿ ಒಂದು ಕ್ಷಣ ಹೌಹಾರಿದ್ದಾರೆ. ಬಳಿಕ ಚೀರಾಡಿ, ಕೋಲಿನಿಂದ ಹಾವನ್ನು ತಿವಿದು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಅನ್ನು @TeluguScribe ನಿಂದ ಹಂಚಿಕೊಳ್ಳಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ 26,06,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಒಂದೊಮ್ಮೆ ಆಘಾತ ವ್ಯಕ್ತಪಡಿಸಿದ್ದಾರೆ. ವಿಧ ವಿಧವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಹಾವಿನಲ್ಲಿ ವಿಷ ಇರುವುದಿಲ್ಲ, ಇದು ಹೆಬ್ಬಾವು ಆತನನ್ನು ನುಂಗಲು ನೆಲಕ್ಕೆ ಉರುಳಿಸಬಹುದು. ಈ ಹಾವು ಅನಗತ್ಯವಾಗಿ ಏನು ಮಾಡುವುದಿಲ್ಲ. ಹೀಗಾಗಿ ಅಪಾಯ ಕಡಿಮೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, ಆತ ಕುಡಿದಿರುವ ಮದ್ಯದ ಬ್ರಾಂಡ್ ಯಾವುದೆಂದು ಕಂಡು ಹಿಡಿಯಬೇಕು ಎಂದಿದ್ದಾರೆ. ತಿಂಗಳ ಹಿಂದಷ್ಟೇ 16 ಅಡಿ ಹೆಬ್ಬಾವು ಥಾಯ್ ಮಹಿಳೆಯ ಸುತ್ತ ಸುತ್ತುವ ವೀಡಿಯೊ ಇಂಟರ್‌ನೆಟ್‌ನಲ್ಲಿ ಭಾರಿ ವೈಲ್ ಆಗಿತ್ತು. ಅದಾದ ಬಳಿಕ ಇದೀಗ ಮನುಷ್ಯನ ಮೇಲೆಹೆಬ್ಬಾವು ಹರಿದಾಡಿದ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications