Pastry Maggi: ಕೇಕ್‌ನೊಂದಿಗೆ ಮ್ಯಾಗಿ ತಯಾರಿಸುವ ವಿಡಿಯೋ ವೈರಲ್
ಇತ್ತೀಚೆಗೆ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ತಯಾರಿಸುವ ಬಗೆ ಬಗೆಯ ಆಹಾರಗಳು ನೋಡುಗರನ್ನು ಸೆಳೆಯುತ್ತಿವೆ. ಬೀದಿ ಬದಿ ವ್ಯಾಪಾರಿಗಳಂತೂ ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು ತಯಾರಿಸದೇ ಇರದ ಖಾದ್ಯವೇ ಇಲ್ಲ. ಕೇವಲ ವಿಧವಾದ ಆಹಾರವನ್ನು ತಯಾರಿಸುವುದು ಮಾತ್ರವಲ್ಲದೇ ಒಂದರೊಂದಿಗೆ ಮತ್ತೊಂದು ಆಹಾರ ಮಿಕ್ಸ್ ಮಾಡಿ ತಯಾರಿಸವುದು ಇತ್ತೀಚೆಗೆ ಟ್ರೆಂಡ್ ಆಗಿದೆ.
ಬಣ್ಣಗಳನ್ನು ಜೋಡಿಸಿ ಮತ್ತೊಂದು ಬಣ್ಣ ತಯಾರಿಸುವಂತೆ ಆಹಾರ ತಯಾರಕರು ಒಂದು ಆಹಾರವನ್ನು ಮತ್ತೊಂದಕ್ಕೆ ಮಿಕ್ಸ್ ಮಾಡುವ ಮೂಲಕ ವಿಭಿನ್ನ ರುಚಿಯನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಮಿಕ್ಸ ಮಾಡಿ ಮತ್ತೊಂದು ಆಹಾರದ ತಯಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿರುತ್ತವೆ.

ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡುಗರ ಮುಖ ತಿರುಗಿಸುವಂತೆ ಮಾಡಿದೆ. ಈ ವಿಡಿಯೋವನ್ನು ನೋಡಿದರೆ ನೀವು ಕೂಡ ಮುಖ ಕಿವುಚುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ವೈರಲ್ ವಿಡಿಯೋದಲ್ಲಿ ಅಂಥಹದ್ದೇನಿದೆ ಅಂದ್ರಾ...? ಅದನ್ನ ಹೆಳುವುದಕ್ಕಿಂತ ನೀವು ಒಂದು ಬಾರಿ ನೋಡಿ ಬಿಡಿ.
ವಿಡಿಯೋದಲ್ಲಿ ಪೇಸ್ಟ್ರಿಯೊಂದಿಗೆ ಮ್ಯಾಗಿ ಮಾಡುವುದನ್ನು ತೋರಿಸಲಾಗಿದೆ. ಸಾಮಾನ್ಯವಾಗಿ ಹುಟ್ಟುಹಬ್ಬ ಇನ್ನಿತರ ಶುಭ ಕಾರ್ಯಗಳನ್ನು ಆಚರಿಸಲು ನಾವು ಕೇಕ್ ಹಂಚಿಕೊಂಡು ತಿನ್ನುತ್ತೇವೆ. ಅದಕ್ಕೆ ತುಂಬಾ ಜನ ಫ್ಯಾನ್ಸ್ ಕೂಡ ಇದ್ದಾರೆ. ಇನ್ನೂ ಮ್ಯಾಗಿ ಬಗ್ಗೆ ಹೇಳಲೇಬೇಕಿಲ್ಲ. ಬಹುಬೇಗ ತಯಾರಿಸಲು ಸಹಾಯ ಆಗುವ ಈ ಮ್ಯಾಗಿಗೆ ಏಕಾಂಗಿಯಾಗಿರುವವರೇ ಹೆಚ್ಚು ಫ್ಯಾನ್ಸ್. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಈ ಮ್ಯಾಗಿ ರುಚಿ ನೋಡಿರುತ್ತಾರೆ. ಜೊತೆಗೆ ಇಷ್ಟಪಟ್ಟು ತಿಂದಿರುತ್ತಾರೆ.
this is the way the world ends, not with a bang but with a pastry in the maggi 😭 pic.twitter.com/2tRwmS7suH
— Cow Momma (@Cow__Momma) December 10, 2023
ಈ ಮ್ಯಾಗಿಯಲ್ಲೇ ಅನೇಕ ಬಗೆಯ ಮ್ಯಾಗಿ ಇದ್ದರೂ ಇದನ್ನು ಕೇಕ್‌ನೊಂದಿಗೆ ಬೆರೆಸಿ ಮಾಡುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಹಲವಾರು ಜನ ಮುಖ ಕಿವುಚಿಕೊಂಡಿದ್ದಾರೆ.
X ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊವು ಈ ಖಾದ್ಯವನ್ನು ತಯಾರಿಸುವ ಬೀದಿ ವ್ಯಾಪಾರಿಗಳ ಅಸಾಂಪ್ರದಾಯಿಕ ವಿಧಾನವನ್ನು ತೋರಿಸುತ್ತದೆ. ಈ ವಿಡಿಯೋ ಮಾರಾಟಗಾರನು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ.
ನಂತರ ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಅದಕ್ಕೆ ಸೇರಿಸಲಾಗುತ್ತದೆ. ಬಳಿಕ ಅದರಲ್ಲಿ ಪೇಸ್ಟ್ರಿ ಕೇಕ್ ಹಾಕಲಾಗುತ್ತದೆ. ನಂತರ ಅದಕ್ಕೆ ನೀರು ಬೆರಸಲಾಗುತ್ತದೆ. ಅದನ್ನು ಚೆನ್ನಾಗಿ ಕದಡಿ, ಆ ನೀರು ಕುದಿ ಬಂದ ಬಳಿಕ ಮ್ಯಾಗಿಯನ್ನು ಅದಕ್ಕೆ ಸೇರಿಸಲಾಗುತ್ತದೆ. ನಂತರ ಅದಕ್ಕೆ ಮ್ಯಾಗಿ ಮಸಾಲ, ಉಪ್ಪು ಹಾಕಿ ನೀರು ಆವಿಯಾದ ಮೇಲೆ ತಟ್ಟೆಗೆ ಬಡಿಸಲಾಗುತ್ತದೆ. ಚಾಕೊಲೇಟ್‌ನಿಂದಾಗಿ ಅದು ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ನಿಜಕ್ಕೂ ವಿಚಿತ್ರವಾಗಿ ಕಾಣಿಸುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಈ ವಿಡಿಯೋ ಹಳೆಯ ವಿಡಿಯೋ ಎನ್ನಲಾಗುತ್ತಿದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಪುನ: ವೈರಲ್ ಆಗಿದ್ದು ಮ್ಯಾಗಿ ಹಾಗೂ ಕೇಕ್ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಜೊತೆಗೆ ವಿಡಿಯೋಕ್ಕೆ ಸಾಕಷ್ಟು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
*'ಓ ದೇವರೇ ಹೀಗೂ ಮಾಡಬಹುದಾ?' ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
* 'ಈ ವಿಡಿಯೋ ನೋಡಿ ನನಗೆ ಮ್ಯಾಗಿ ತಿನ್ನುವ ಮನಸ್ಸು ಹೋಯ್ತು' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
* 'ನಾನೆಮದು ಕೇಕ್ ಮುಟ್ಟಲ್ಲ' ಮೂರನೇಯವರ ಪ್ರತಿಕ್ರಿಯೆ..
*'ನನ್ನ ಮದುವೆಗೆ ನೀವೇ ಬಾಣಸಿಗರು. ನಿಮ್ಮ ಅಡ್ರೆಸ್ ಕೊಡಿ'
*'ತಿಂದವನು ಏನಾದಾ? ನನಗೆ ತಲೆ ತಿರುಗುತ್ತಿದೆ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications