'ಯಾರೇ ಕೂಗಾಡಲಿ.. ಊರೇ ಹೋರಾಡಲಿ..' ಎಮ್ಮೆ ಮೇಲೆ ನಾಯಿ ಸವಾರಿ!
ನಾವೆಲ್ಲರೂ ಪ್ರಾಣಿಗಳ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತೇವೆ. ಹೀಗಾಗಿ ಪ್ರಾಣಿಗಳ ತಮಾಷೆಯ ಕ್ಲಿಪ್‌ಗಳಿಂದ ಇಂಟರ್ನೆಟ್ ತುಂಬಿರುತ್ತದೆ ಹೋಗಿ. ಇತ್ತೇಚೆಗೆ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.
ಹಾಗಾದರೆ ಏನಮ್ಮ ಅದು ವಿಡಿಯೋ ಅಂತೀರಾ. ಈ ವಿಡಿಯೋದಲ್ಲಿ ನಾಯಿಯೊಂದು ಎಮ್ಮೆ ಮೇಲೆ ನಿಂತುಕೊಂಡು ಸವಾರಿ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಎರಡು ಎಮ್ಮೆಗಳು ನಡೆದುಕೊಂಡು ಹೋಗುವಾಗ ನಾಯಿಯೊಂದು ಅದರ ಮೇಲೆ ನಿಂತಿದೆ. ಅಂಜದೆ, ಅಳುಕದೆ, ಗಾಂಭೀರ್ಯದಿಂದ ನಾಯಿ ಎಮ್ಮೆ ಮೇಲೆ ನಿಂತುಕೊಂಡಿದೆ.

ದಾರಿಯುದ್ದಕ್ಕೂ ತನ್ನನ್ನು ತಾನು ಬ್ಯಾಲೆನ್ಸ್ ಮಾಡಿಕೊಳ್ಳುವುದನ್ನು ಯಾರಿಗೂ ಗೊತ್ತಾಗದಂತೆ ಕೊಂಚವೂ ಅಲುಗಾಡದೆ ನಿಂತಿದೆ. ವಿಡಿಯೋದಲ್ಲಿ ನಾಯಿ ಎಮ್ಮೆ ಮೇಲೆ ವಿಶ್ವಾಸದಿಂದ ನಿಂತುರುವುದನ್ನು ಕಂಡರೆ ಈ ಹಿಂದೆಯೂ ನಾಯಿ ಅದರ ಮೇಲೆ ನಿಂತು ರೂಢಿ ಮಾಡಿಕೊಂಡಂತೆ ತೋರುತ್ತದೆ. ಇದನ್ನು ಕಂಡು ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
ನಾಯಿ ಮಾತ್ರವಲ್ಲದೆ ಎಮ್ಮೆ ಕೂಡ ಯಾವುದೇ ಪ್ರತಿಕ್ರಿಯೆ ಇಲ್ಲದೆ ಸಹಜವಾಗಿ ನಡೆದುಕೊಂಡು ಹೋಗುತ್ತಿದೆ. ಇದರೊಂದಿಗೆ ಮತ್ತೊಂದು ಎಮ್ಮೆ ಕೂಡ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಂತರ್ಜಾಲದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಹಲವಾರು ವೀಡಿಯೊಗಳಲ್ಲಿ, ಮನುಷ್ಯರು ನಾಯಿಗಳೊಂದಿಗೆ ಆಟವಾಡುವುದು ಅಥವಾ ಜಾನುವಾರುಗಳಿಗೆ ಆಹಾರವನ್ನು ನೀಡುವುದು ಸೇರಿದಂತೆ ಹಲವಾರು ಬಗೆಯ ವಿಡಿಯೋಗಳು ಕಂಡು ಬರುತ್ತವೆ. ಆದರೆ ಈ ಕ್ಲಿಪ್‌ನಲ್ಲಿ ಎಮ್ಮೆ ಮೇಲೆ ನಾಯಿ ಸವಾರಿ ಮಾಡುವುದನ್ನು ಆನಂದಿಸಿದೆ.
ಒಂದು ರೀತಿಯ ಕ್ಲಿಪ್ ಅನ್ನು ಇಲ್ಲಿ ವೀಕ್ಷಿಸಿ
ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ @ ಹೆಸರಿನ ಬಳಕೆದಾರರಿಂದ ಹಂಚಿಕೊಳ್ಳಳಾಗಿದೆ. "ಕುತ್ತೇ ಕಾ ದಿನ್ ಆತ ಹೈ ಯೇ ಸುನಾ ಥಾ ಆಜ್ ದೇಖ್ ಭಿ ಲಿಯಾ" (ಪ್ರತಿಯೊಂದು ನಾಯಿಗೂ ಅದರ ದಿನವಿದೆ ಎಂದು ನಾನು ಕೇಳಿದ್ದೆ. ಇವತ್ತೂ ನೋಡಿದೆ.) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
हर कुत्ते का दिन आता है ये सुना था
— 🦋.𝐒𝐡𝐚𝐳𝐢𝐲𝐚 𝐂𝐡𝐚𝐮𝐝𝐡𝐚𝐫𝐲.🦋 (@PChaudhry_) July 26, 2023
आज देख भी लिया😂😂😂 pic.twitter.com/9gkjq54vsn
ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 8,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಂತಹ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿ ಅದು 16 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ ಸಾಕಷ್ಟು ಕಾಮೆಂಟ್‌ಗಳು ವಿಡಿಯೋಕ್ಕೆ ಬಂದಿವೆ.
ಕೆಲವು ಆಸಕ್ತಿಕರ ಕಾಮೆಂಟ್‌ಗಳು ಇಲ್ಲಿವೆ
"ಈ ವೈರಲ್ ವಿಡಿಯೋ ಯಾವ ಚಿತ್ರದ ಶೂಟಿಂಗ್?" ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.
"ಸಭಾಷ್!" ಎರಡನೇ ಟ್ವಿಟರ್ ಬಳಕೆದಾರರು ನಾಯಿ ಮತ್ತು ಎಮ್ಮೆಯನ್ನು ಹೊಗಳಿದರು.
"ಅಜಯ್ ದೇವಗನ್," ಮೂರನೆಯವರು ನಗುವಿನ ಎಮೋಜೊಯೊಂದಿಗೆ ಕಾಮೆಂಟ್ ಮಾಡಿದ್ದಾರೆ.
"ಪ್ರತಿಯೊಂದು ನಾಯಿಗೂ ಅದರ ದಿನವಿರುತ್ತದೆ ಮತ್ತು ಈ ನಾಯಿಯು ಅದಕ್ಕೆ ಉದಾಹರಣೆಯಾಗಿದೆ" ಎಂದು ಇನ್ನೊಬ್ಬರು ಹೇಳಿದರು.
"ವಾಹ್, ಶಭಾಷ್ ನಾಯಿ, ಆನೆಗಳ ಮೇಲೆ ಸವಾರಿ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಇದು ಅಜಯ್ ದೇವಗನ್ ಅವರಿಂದ ತರಬೇತಿ ಪಡೆದೆ" ಎಂದು ಟ್ವಿಟ್ಟರ್ ಬಳಕೆದಾರರು ತಮಾಷೆ ಮಾಡಿದ್ದಾರೆ.
"ಗೋಲ್ಮಾಲ್ 1 ನೇ ಡ್ರಾಫ್ಟ್," ಎಂದು ಇನ್ನೊಬ್ಬರು ಹೇಳಿದರು.
"ನಾನು ಈ ವೀಡಿಯೊವನ್ನು ಒಪ್ಪಿದೆ ಭಲೆ ಭೇಶ್" ಎಂದು ಇನ್ನೊಬ್ಬರು ಹೇಳಿದರು.












Click it and Unblock the Notifications