'ನಿಧಾನಕ್ಕೆ ಮಾತಾಡಮ್ಮ ಬೇರೆಯವರು ಕೇಳಿಸಿಕೊಂಡರೆ ಮರ್ಯಾದೆ ಹೋಗುತ್ತೆ' ಎಂದ ಪುಟ್ಟ ಕಂದ : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಪುಟ್ಟ ಮಕ್ಕಳ ವಿಡಿಯೋಗಳಂತೋ ಬಹುಬೇಗ ಜನರ ಗಮನ ಸೆಳೆಯುತ್ತವೆ. ಹೀಗೊಂದು ಪುಟ್ಟ ಮಗು ಮುದ್ದು ಮುದ್ದಾಗಿ 'ಮರ್ಯಾದೆ ಪ್ರಶ್ನೆ' ಅಂದಿರುವುದು ಕೇಳಿ ಜನ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

ಅಷ್ಟಕ್ಕೂ ಆ ಪುಟ್ಟ ಮಗು 'ಮರ್ಯಾದೆ ಪ್ರಶ್ನೆ' ಅಂದಿದ್ದು ಯಾಕೆ ಗೊತ್ತಾ. ವೈರಲ್ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ನಾವು ಹೇಳ್ತೀವಿ ನೋಡಿ. ವಿಡಿಯೋದ ಆರಂಭದಲ್ಲಿ ತಾಯಿ ಸೈಕಲ್ ಓಡಿಸುತ್ತಿದ್ದ ಮಗುವಿಗೆ 'ರಕ್ಷಾ ಬಾ ಇಲ್ಲಿ... ವಾಶ್‌ರೂಮ್‌ಗೆ ಹೋಗಿದ್ದಲ್ಲಾ ಟಾಯ್ಲೆಟ್ ಹೋಗಿದ್ಮೆಲೆ ನೀರು ಹಾಕಿ ಬಂದಿಯಾ?' ಎಂದು ಪ್ರಶ್ನೆ ಮಾಡ್ತಾರೆ. ಅದಕ್ಕೆ ಆ ಪುಟ್ಟ ಮಗು ಕೊಟ್ಟ ಉತ್ತರ ಏನು ಗೊತ್ತಾ? ಅದನ್ನು ಕೇಳಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..

Video of a little child saying Politeness Question has gone viral

ಅಯ್ಯೋ.. ಅಂತ ಮುಖದ ಮೇಲೆ ಕೈ ಹಿಡಿದು ಮುಖ ಮೇಲಕ್ಕೆ ಎತ್ತಿ 'ಮರತೆಬಂದುಬಿಟ್ಟೆ' ಎಂದು ಮಗು ಮುದ್ದು ಮುದ್ದಾಗಿ ಉತ್ತರ ನೀಡುತ್ತದೆ. ನಂತರ 'ಅಕ್ಕ-ಪಕ್ಕದವರೆಲ್ಲಾ ಕೇಳಿಸಿಕೊಳ್ತಾರೆ ನನ್ನ ಮರ್ಯಾದೆ ಕಳಿಬೇಡಕಣಮ್ಮ ನೀನು..... ನಿಧಾನಕ್ಕೆ ಮಾತಾಡು' ಅಂತ ಹೇಳುವಾಗ ಅವನ ಮುಖದ ಭಾವ ನೋಡಿದರೆ ಎಂಥವರಿಗೂ ನಗು ಬರೆದೆ ಇರದು.

ತಕ್ಷಣ ಅವರಮ್ಮ 'ಹೌದಾ... ನಿಂಗೆ ಮರ್ಯಾದೆ ಬೇರೆ ಇದಿಯಾ...? ಬಾರೋ ಇಲ್ಲಿ.. ಬಾಶ್‌ರೂಮ್‌ಗೆ ಹೋದ್ಮೇಲೆ ನೀರಾಕ್ಬೇಕು ಅಂತ ಗೊತ್ತಾಗಲ್ವಾ?' ಎಂದು ಗದರಿಸುತ್ತಾರೆ. ಮತ್ತೆ ಮಗು ಸೈಕಲ್ ಮೇಲಿಂದ ಎದ್ದು, 'ನಿಧಾನಕ್ಕೆ ಮಾತಾಡಮ್ಮ.... ಇರು ನೀರಾಕಿ ಬರ್ತೀನಿ' ಅಂತ ಹೇಳ್ತಾ ಓಡಿ ಹೋಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೋಡುಗರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಇಷ್ಟು ಪುಟ್ಟು ಹುಡುಗ 'ಮರ್ಯಾದೆ ಪ್ರಶ್ನೆ' ಎಂದು ಹೇಳುವುದು ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋ ಇಲ್ಲಿ ವೀಕ್ಷಿಸಿ:-

blockquote class="instagram-media" data-instgrm-captioned data-instgrm-permalink="https://www.instagram.com/reel/C1CvTuJv8-x/?utm_source=ig_embed&utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);">

ಮತ್ತೊಂದು ವಿಡಿಯೋ ವೈರಲ್:-

ಇತ್ತೀಚೆಗೆ ಸಾಕಷ್ಟು ರೀಲ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗುತ್ತವೆ. ಹೀಗೊಂದು ಮಹಿಳೆಯರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರ ನಡುವೆ ಬಿಗ್‌ಬಾಸ್ ಜಗಳ ತರಲು ಪ್ರಯತ್ನಿಸುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಆಗ ಬಿಗ್‌ಬಾಸ್ ಮಾಡಿದ್ದೇನು? ಅನ್ನೋದೇ ಆಸಕ್ತಿದಾಯಕ ವಿಷಯ.

ಅದೆಂದರೆ ಮನೆಯಲ್ಲಿ ಹೆಣ್ಣುಮಕ್ಕಳ ನಡುವೆ ಜಗಳ ತರಲು ಬಿಗ್‌ಬಾಸ್ ಪ್ರಯತ್ನಿಸುತ್ತಾರೆ ಎನ್ನುವಂತೆ ಇದರಲ್ಲಿ ಹೆಣ್ಣುಮಕ್ಕಳು ನಟಿಸುತ್ತಾರೆ. ಬಿಗ್‌ಬಾಸ್ ಎಷ್ಟೇ ಪ್ರಯತ್ನಿಸಿದರೂ ಹೆಣ್ಣುಮಕ್ಕಳ ನಡುವೆ ಜಗಳ ಬರುವುದಿಲ್ಲ. ಯಾರನ್ನ ಮನೆಯಿಂದ ಹೊರಹಾಕಬೇಕು ಎಂದು ಬಿಗ್‌ಬಾಸ್ ಕೇಳಿದಾಗಲೂ ಹೆಣ್ಣುಮಕ್ಕಳು ಯಾರ ಹೆಸರನ್ನೂ ಹೇಳದೆ ತಮ್ಮ ತಮ್ಮ ಹೆಸರು ಹೇಳುತ್ತಾರೆ. ಕೊನೆ ಬಿಗ್‌ಬಾಸ್ ಮಾಡಿದ ಐಡಿಯಾಕ್ಕೆ ಎಲ್ಲರೂ ಕಿತ್ತಾಡಿಕೊಳ್ಳುತ್ತಾರೆ. ಅದು ಯಾಕೆ ಎಂದು ನೀವೇ ವಿಡಿಯೋ ನೋಡಿ ಬಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+