ವಿಡಿಯೋ: ನಾಗಾಲ್ಯಾಂಡ್ ಸಿಎಂ ಮಗಳ ಮದುವೆಯಲ್ಲಿ ಸಚಿವ ಸಖತ್ ಡ್ಯಾನ್ಸ್

ನಾಗಾಲ್ಯಾಂಡ್ ಸಿಎಂ ಮಗಳ ಮದುವೆಯಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರು ನೃತ್ಯ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತೆಮ್ಜೆನ್ ಇಮ್ನಾ ಅಲಾಂಗ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿರುವ ವ್ಯಕ್ತಿ. ಕೆಲವೊಮ್ಮೆ ಅವರು ಆಸಕ್ತಿದಾಯಕ ಆಹಾರದ ವಿಡಿಯೋಗಳನ್ನು ಇನ್ನೂ ಕೆಲವೊಮ್ಮೆ ಕೊರಿಯನ್ ಪಾಪ್ ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಈ ಬಾರಿ ಅವರು ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ. ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ (Neiphiu Rio) ಅವರ ಮಗಳ ಮದುವೆಯಲ್ಲಿ ನಾಗಾಲ್ಯಾಂಡ್ ಸರ್ಕಾರದ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಈ ವಿಡಿಯೋವನ್ನು ಅವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ತೆಮ್ಜೆನ್ ಇಮ್ನಾ ಅಲಾಂಗ್ ರಾಜಕೀಯದಲ್ಲಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ವಿಶಿಷ್ಟ ಹಾಸ್ಯಪ್ರಜ್ಞೆ ಜನಪ್ರಿಯವಾಗಿದೆ. ಅವರ ಸಾಮಾಜಿಕ ಮಾಧ್ಯಮ ಪೋಸ್ಟಗಳು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯಗಳಾಗಿವೆ. ಯಾವಾಗಲು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುವ ಅಲಾಂಗ್ ಅವರು ಸ್ವತ: ನೃತ್ಯ ಮಾಡುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

Video: Minister dances at Nagaland CMs daughters wedding

ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗೌರವಾನ್ವಿತ ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ ಅವರ ಮಗಳ ಮದುವೆಯಲ್ಲಿ ನಾನು ಎರಡು ಸ್ಟೆಪ್ ಹಾಕಿದೆ ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋವನ್ನು 1.83 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ವಿಡಿಯೋ ಇಲ್ಲಿ ವೀಕ್ಷಿಸಿ-

ವಿಡಿಯೋದಲ್ಲಿ ಅಲಾಂಗ್ ಅವರು ಕುರ್ತಾ ಪೈಜಾಮ್ ಧರಿಸಿರುವುದನ್ನು ಕಾಣಬಹುದು. ಅತಿಥಿಗಳೂ ಅದ್ದೂರಿಯಾಗಿ ನೃತ್ಯ ಮಾಡುತ್ತಿರುವುದನ್ನೂ ಕಾಣಬಹುದು. ಈಶಾನ್ಯ ಭಾರತದ ಜನಪ್ರಿಯ ಸಚಿವರ ಈ ನೃತ್ಯ ಪ್ರದರ್ಶನಕ್ಕೆ 13.5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ರೀಟ್ವಿಟ್ ಮಾಡಿದ್ದಾರೆ.

ಅನೇಕರು ಅಲಾಂಗ್ ನೃತ್ಯಕ್ಕೆ ಪ್ರತಿಕ್ರಿಯಿಸಿ, "ಅದ್ಭುತ ಮುಂದಿನ ಬಾರಿ ದಯವಿಟ್ಟು ಮೂನ್‌ವಾಕ್ ಅನ್ನು ಪ್ರಯತ್ನಿಸಿ" ಎಂದು ಬರೆದಿದ್ದಾರೆ. ''ನಿಮ್ಮ ನೃತ್ಯವು ಅನೇಕರ ಹೃದಯಗಳನ್ನು ಮುಟ್ಟಿದೆ" ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+