ವಿಡಿಯೋ: 4,500 ರೂ. ಸೂಟ್‌ ಹಾಕಿಕೊಂಡು 350 ಅತಿಥಿಯೊಂದಿಗೆ ಜನ್ಮದಿನ ಆಚರಿಸಿಕೊಂಡ ನಾಯಿ

ನಿಯತ್ತು ಮತ್ತು ನಿಷ್ಠೆಗೆ ಹೆಸರು ಪಡೆದಿರುವ ಶ್ವಾನಗಳು ಹೆಚ್ಚಾಗಿ ಪ್ರತಿಯೊಂದು ಮನೆಗಳಲ್ಲಿ ಕಾಣಸಿಗುತ್ತವೆ. ಮನೆಯ ಸದಸ್ಯರಿಗಿಂತ ಹೆಚ್ಚಾಗಿ ಅವುಗಳನ್ನು ನೋಡಿಕೊಳ್ಳಲಾಗುತ್ತದೆ. ಮಾತ್ರವಲ್ಲದೆ ಅವುಗಳ ಜನ್ಮದಿನ ಹಾಗೂ ಸೀಮಂತ ಕಾರ್ಯಗಳನ್ನು ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡುತ್ತಲೇ ಇರುತ್ತೇವೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಜಾರ್ಖಂಡ್ ಕುಟುಂಬವೊಂದು 350 ಅತಿಥಿಗಳೊಂದಿಗೆ ಸಾಕು ನಾಯಿಯ ಜನ್ಮದಿನದ ಪಾರ್ಟಿಯನ್ನು ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಜಾರ್ಖಂಡ್‌ನ ಧನ್‌ಬಾದ್‌ನ ಲೋಯಾಬಾದ್ ಪ್ರದೇಶದಲ್ಲಿ ವಾಸಿಸುವ ಸುಮಿತ್ರಾ ಕುಮಾರಿ ಮತ್ತು ಸಂದೀಪ್ ದಂಪತಿ ತಮ್ಮ ಸಾಕುನಾಯಿ ಅಕ್ಸರ್‌ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅಕ್ಸರ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡಲು ಕುಟುಂಬ 350 ಅತಿಥಿಗಳಿಗಾಗಿ ಆಮಂತ್ರಣ ಪತ್ರಗಳನ್ನು ಮುದ್ರಿಸಿತ್ತು. ಮಾತ್ರವಲ್ಲದೆ ನಾಯಿಗೆ 4,500 ರೂ ಮೌಲ್ಯದ ಸೂಟ್‌ನಿಂದ ಅಲಂಕರಿಸಲಾಗಿತ್ತು.

ಹತ್ತಿರದ ಹಳ್ಳಿಯಿಂದ ಮಾತ್ರವಲ್ಲ, ಬಂಗಾಳದ ಶ್ರೀಪುರದಿಂದಲೂ ಅತಿಥಿಗಳು ನಾಯಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಧನ್‌ಬಾದ್‌ಗೆ ಬಂದಿದ್ದರು. ಮಗುವಿನ ಹುಟ್ಟುಹಬ್ಬದಂತೆಯೇ, ಅತಿಥಿಗಳು ನಾಯಿಗೆ ಉಡುಗೊರೆಗಳನ್ನು ತಂದಿದ್ದರು. ಅಕ್ಸರ್ ಮೂರು ಚಿನ್ನದ ಲಾಕೆಟ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾನೆ. ಕೇಕ್ ಕತ್ತರಿಸುವ ಮೊದಲು ನಾಯಿಗೆ ಆರತಿ ಮಾಡಲಾಗಿದೆ.

Video: Dog celebrated his birthday wearing a 4,500 Rs suit

ವೈರಲ್ ಕ್ಲಿಪ್‌ನಲ್ಲಿ, ಮೇಜಿನ ಮೇಲೆ ದೊಡ್ಡ ಕೇಕ್ ಅನ್ನು ಇರಿಸಿದಾಗ ಮಹಿಳೆಯೊಬ್ಬರು ನಾಯಿಗೆ ಮುತ್ತು ಕೊಡುವುದನ್ನು ನೋಡಬಹುದು. ಅತಿಥಿಗಳು ಸಾಕು ನಾಯಿಯ ಪಕ್ಕದಲ್ಲಿ ನಿಂತು ಕೇಕ್ ತಿನ್ನುವ ಮೊದಲು ಅವನ ಚಿತ್ರಗಳನ್ನು ಕ್ಲಿಕ್ಕಿಸಿದರು.

ಜಾರ್ಖಂಡ್‌ನಲ್ಲಿ ಸಾಕು ನಾಯಿಯ ಜನ್ಮದಿನದ ಆಚರಣೆಯ ವೈರಲ್ ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಸುಮಿತ್ರಾ ಕುಮಾರಿ ಮತ್ತು ಸಂದೀಪ್ ಅವರು ಅಕ್ಸರ್ ಜೊತೆ ಕುಟುಂಬದ ಸದಸ್ಯರಂತೆ ಇರುತ್ತಾರೆ. ಅದರೊಂದಿಗೆ ಊಟ ಮಾಡುತ್ತಾರೆ, ಅದರೊಂದಿಗೆ ಮಲಗುತ್ತಾರೆ. ಈ ಬಗ್ಗೆ ಮಾತನಾಡಿ "ನಾನು ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿ ಜನರು ನಾಯಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾವೂ ಪ್ರಾಣಿಗಳ ಜೊತೆ ಸಾಕಲು ಶುರು ಮಾಡಿದೆವು. ನಾವು ರಸ್ತೆಬದಿಯಲ್ಲಿ 20 ದಿನದ ನಾಯಿಮರಿಯನ್ನು ಕಂಡು ಮನೆಗೆ ತಂದಿದ್ದೇವೆ. ಅದು ನಮ್ಮ ಮನೆಯ ಸದಸ್ಯನಾಗಿ ಬೆಳದಿದೆ. ಇಂದು ನಾವು ಅದರ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದೇವೆ ಎಂದು ಸಂದೀಪ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+