• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕೆಲಸದ ವೇಳೆ ನಿದ್ದೆಗೆ ಜಾರಿದ ಅಪ್ಪ: ಕೋಟ್ ಹೊದಿಸಿದ ಮಗಳು

|
Google Oneindia Kannada News

ಹೆಣ್ಣು ಮಗು ಬೇಡ ಅನ್ನೋ ಅನೋಭಾವನೆ ನಮ್ಮ ದೇಶದಲ್ಲಿಂದು ಸಂಪೂರ್ಣವಾಗಿ ದೂರವಾಗಿಲ್ಲ. ಯಾಕೆಂದರೆ ಗಂಡು ಸಂತಾನವೇ ಶ್ರೇಷ್ಠ ಎಂದು ಯೋಚಿಸುವ ಕೀಳು ಮನಸ್ಥಿತಿ ಕೆಲವರಲ್ಲಿದೆ. ಆದ್ದರಿಂದಲೇ ಹೆಣ್ಣು ಭ್ರೂಣ ಹತ್ಯೆಕ್ಕೆ ಮುಂದಾಗುತ್ತಾರೆ. ಹೀಗಿರುವಾಗ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಕೆಲ ಭಾವನಾತ್ಮಕ ವಿಡಿಯೋಗಳು ನೋಡುಗರನ್ನು ಸೆಳೆಯುತ್ತವೆ. ಪೋಷಕರ ಮೇಲೆ ಹೆಣ್ಣು ಮಗುವಿನ ಆಳವಾದ ಪ್ರೀತಿ ಎಂಥದ್ದು ಎನ್ನುವುದನ್ನು ಕಾಣಲು ಇದೊಂದು ವಿಡಿಯೋ ಸಾಕು. ಕೆಲಸದ ವೇಳೆ ನಿದ್ದೆಗೆ ಜಾರಿದ ತಂದೆಗೆ ಈ ಪುಟ್ಟ ಮಗು ಹೊದಿಕೆಯನ್ನು ಹೊದಿಸಿದ ವಿಡಿಯೋ ನೋಡುಗರ ಹೃದಯವನ್ನು ಮುಟ್ಟಿದೆ.

ಮಗಳು ಎಂಬುವುದೇ ಹಾಗೇ.... ಅವಳು ತೋರುವ ಪ್ರೀತಿ, ಆರೈಕೆ ನಿಮಗೆ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋದರೂ ತನ್ನ ಅಪ್ಪ-ಅಮ್ಮನಿಗೆ ಸ್ವಲ್ಪ ಏನಾದರೂ ಆಯ್ತು ಎಂದು ತಿಳಿದರೆ ಅವಳು ಚಡಪಡಿಸುವ ರೀತಿ ಯಾರೂ ಪಡಲ್ಲ. ಎಷ್ಟೋ ಜನರಿಗೆ ಕೊನೆಗಾಲದಲ್ಲಿ ಆಸರೆಯಾಗಿರುವವಳು ಮಗಳೇ ಆಗಿರುತ್ತಾಳೆ. ಹೀಗಾಗಿ ಹೆಣ್ಣನ್ನು ತುಚ್ಛವಾಗಿ ಕಾಣುವ ಮನಸ್ಥಿತಿ ಕಡಿಮೆಯಾಗುತ್ತಿದೆ. ಮಗನ್ನಷ್ಟೇ ಮಗಳನ್ನೂ ಕೂಡ ಪ್ರೀತಿಯಿಂದ, ಸಮಾನತೆಯಿಂದ ನೋಡಿಕೊಳ್ಳುವ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿವೆ. ಮಗಳು ಹುಟ್ಟಿದಾಗ ತುಂಬಾ ಸಂಭ್ರಮಿಸುವವರೂ ನಮ್ಮ ನಡುವೆ ಇದ್ದಾರೆ. ಏಕೆಂದರೆ ಅವರಿಗೆ ಮಗಳ ಮಹತ್ವ ತಿಳಿದಿರುತ್ತದೆ. ಹಾಗಾಗಿ ಮನೆಗೆ ಲಕ್ಷ್ಮಿಯೇ ಬಂದಳು ಎಂದು ಭಾವಿಸುತ್ತಾರೆ.

ಅಪ್ಪ ಮಗಳ ವೈರಲ್ ವಿಡಿಯೋ

ಅಪ್ಪ ಮಗಳ ವೈರಲ್ ವಿಡಿಯೋ

ಇನ್ನೂ ತಂದೆ ಮಗಳ ಬಾಂಧವ್ಯ ತುಂಬಾ ವಿಶೇಷ. ಮಗಳಿಗೆ ತಂದೆ ವಿಶ್ವದ ಅತ್ಯುತ್ತಮ ದೊಡ್ಡ ವ್ಯಕ್ತಿ ಮತ್ತು ಮಗಳಿಗೆ ಉತ್ತಮ ಸ್ನೇಹಿತ. ಪ್ರತಿಯೊಬ್ಬ ತಂದೆಯು ತನ್ನ ಮಗಳ ಮುಖದಲ್ಲಿ ಸಂತೋಷವನ್ನು ನೋಡಲು ಬಯಸುತ್ತಾನೆ. ಹೀಗೆ ಅಪ್ಪ-ಮಗಳ ಬಾಂಧ್ಯವ್ಯವನ್ನು ಪದಗಳಲ್ಲಿ ಹೇಳಲಾಗದು. ಇದನ್ನು ತೋರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಪುಟ್ಟ ಮಗಳು ತಂದೆಯನ್ನು ನೋಡಿಕೊಳ್ಳುವ ರೀತಿ ನೋಡುಗರ ಮನಗೆದ್ದಿದೆ. ಎಲ್ಲರೂ ಈ ವೀಡಿಯೋ ನೋಡಿ ಭಾವುಕರಾಗಿದ್ದಾರೆ. ಈ ಮುಗ್ಧ ಹುಡುಗಿಯ ಮೇಲೆ ಪ್ರೀತಿಯ ಸುರಿ ಮಳೆ ಸುರಿಸುತ್ತಿದ್ದಾರೆ.

ತಂದೆಗೆ ಕೋಟ್ ಹೊದಿಸಿದ ಮಗಳು

ತಂದೆಗೆ ಕೋಟ್ ಹೊದಿಸಿದ ಮಗಳು

ಈ ವೈರಲ್ ವಿಡಿಯೋದಲ್ಲಿ ತಂದೆ ಮಗಳ ವಿರುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೊ ಕ್ಲಿಪ್ ಅನ್ನು ನೋಡಿದ ನಂತರ ನೆಟ್ಟಿಗರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ.

ಪೀಪಲ್ ಎಂಬ ಹೆಸರಿನ ಬಳಕೆದಾರರು ಈ ವಿಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಿಚನ್ ಕೌಂಟರ್‌ನಲ್ಲಿ ಸ್ಟೂಲ್ ಮೇಲೆ ಕುಳಿತ ವ್ಯಕ್ತಿಯೊಬ್ಬರು ಟೇಬಲ್‌ಗೆ ತಲೆಬಾಗಿ ಮಲಗಿರುವುದು ಕಂಡುಬರುತ್ತದೆ. ಪೋಸ್ಟ್ ಪ್ರಕಾರ, ಚೀನಾದ ಈ ವ್ಯಕ್ತಿ ವಾಂಗ್ ತನ್ನ ರೆಸ್ಟೋರೆಂಟ್‌ನ ಮೆನುವನ್ನು ಯೋಜಿಸುವಾಗ ನಿದ್ರೆಗೆ ಜಾರಿದ್ದರು. ಆಗ ಅಡುಗೆಮನೆಯಲ್ಲಿ ಅವನ 4 ವರ್ಷದ ಪುಟ್ಟ ಮಗಳು ಅಲ್ಲಿಗೆ ಬರುತ್ತಾಳೆ ಮತ್ತು ತನ್ನ ತಂದೆ ಮಲಗಿದ್ದನ್ನು ನೋಡಿದ ಅವಳು ತನ್ನ ತಂದೆಯನ್ನು ಚಳಿಯಿಂದ ರಕ್ಷಿಸಲು ತನ್ನ ಕೋಟ್ ಅನ್ನು ತೆಗೆದು ತನ್ನ ತಂದೆಗೆ ಹೊದಿಸುತ್ತಾಳೆ.

ಮಗಳ ಪ್ರೀತಿಗೆ ಭಾವುಕರಾದ ತಂದೆ

ಮಗಳ ಪ್ರೀತಿಗೆ ಭಾವುಕರಾದ ತಂದೆ

ಮಗಳು ಅಡುಗೆ ಮನೆಯಿಂದ ಹೊರಬಂದ ತಕ್ಷಣ ಪಾಪಾ ವಾಂಗ್ ಎಚ್ಚರಗೊಂಡು ಮಗಳ ಜಾಕೆಟ್ ಅನ್ನು ನೋಡಿ ಭಾವನಾತ್ಮಕವಾಗಿ ಅಳಲು ಪ್ರಾರಂಭಿಸುತ್ತಾನೆ. ವಿಡಿಯೋವನ್ನು ಶೇರ್ ಮಾಡಿದ ಅವರು, ಸಾಂಕ್ರಾಮಿಕ ಸಮಯದಲ್ಲಿ ರೆಸ್ಟೋರೆಂಟ್ ನಡೆಸುವ ಕಷ್ಟದ ಕೆಲಸದ ಬಗ್ಗೆ ಹಂಚಿಕೊಂಡರು. ಅವರು ತುಂಬಾ ಭಾವುಕರಾದರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

blockquote class="instagram-media" data-instgrm-captioned data-instgrm-permalink="https://www.instagram.com/reel/Clh9kZhDwsz/?utm_source=ig_embed&utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);">

ಜನ ಕಾಮೆಂಟ್ ಮಾಡಿದ್ದು ಹೀಗೆ..

ವೈರಲ್ ವಿಡಿಯೊ ಅಂತರ್ಜಾಲದಲ್ಲಿ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆಯುತ್ತಿವೆ. ಅಪ್ಪನನ್ನು ನೋಡಿಕೊಳ್ಳುತ್ತಿರುವ ಮುಗ್ಧ ಹುಡುಗಿಯನ್ನು ನೋಡಿ ಜನ ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, 'ಒಂದು ಬಲವಾದ ಕುಟುಂಬವು ಪರಸ್ಪರ ಕಾಳಜಿ ವಹಿಸುತ್ತದೆ'. ಮತ್ತೊಬ್ಬರು "ಮಗಳ ಪ್ರೀತಿ" ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಪದಗಳಿಗೆ ನಿಲುಕದ ಶುದ್ಧವಾಗಿದೆ. ಮತ್ತೊಬ್ಬ ಬಳಕೆದಾರರು ವಿಡಿಯೊವನ್ನು ಇಷ್ಟಪಟ್ಟಿದ್ದಾರೆ, 'ತಂದೆಯು ಅವಳ ಅತ್ಯುತ್ತಮ ಸ್ನೇಹಿತ, ವಿಶ್ವಾಸಾರ್ಹ ಮತ್ತು ರಕ್ಷಕ' ಎಂದು ಬರೆದಿದ್ದಾರೆ.

English summary
A video of a little daughter putting a coat on her father, who fell asleep at work, has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X