• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನು ನಿನ್ನನ್ನು ಬಿಟ್ಟು ತಿನ್ನಲಾರೆ..'- ಆಮೆಗೆ ಚಿಂಪಾಂಜಿ ಹೇಳಿದ ಮಾತು

|
Google Oneindia Kannada News

ನಾನು ನಿನ್ನನ್ನು ಬಿಟ್ಟು ತಿನ್ನಲಾರೆ... ಹಂಚಿಕೊಂಡು ತಿನ್ನೋಣ ಬಾರೋ ಗೆಳೆಯ.. ಹಂಚಿಕೊಂಡು ತಿನ್ನೋದರಲ್ಲಿ ಸುಖವಿದೆ.. ಹೀಗೆ ಈ ಪ್ರಾಣಿಗಳನ್ನ ನೋಡ್ತಾಯಿದ್ದರೆ ಅವುಗಳ ಮನಸ್ಸಿನ ಮಾತನ್ನು ಹೇಳಬೇಕು ಅನಿಸದೇ ಇರದು. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಮನಸ್ಸಿಗೆ ಮುದ ನೀಡಿದೆ. ಇಲ್ಲೊಂದು ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಹಂಚಿಕೊಂಡು ತಿನ್ನುತ್ತದೆ. ಈ ಅದ್ಭುತ ದೃಶ್ಯವನ್ನು ನೋಡಿ ನೆಟ್ಟಿಗರು ಮನಸಾರೆ ಇಷ್ಟಪಟ್ಟಿದ್ದಾರೆ. ಜೊತೆಗೆ ಈ ಪ್ರಾಣಿಗಳಲ್ಲಿನ ನಿಷ್ಕಲ್ಮಶ ಪ್ರೀತಿಗೆ ಸೆಲ್ಯೂಟ್ ಹೇಳಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ಹಂಚಿಕೊಂಡು ತಿನ್ನೋದ್ರಲ್ಲಿರೋ ಖುಷಿ ಪ್ರಾಣಿಗಳಿಗೂ ಅರ್ಥ ಆದಂತೆ ಕಾಣುತ್ತದೆ.

ಪ್ರಾಣಿಗಳು ಮನುಷ್ಯರಂತೆ ಯೋಚನೆ ಮಾಡುತ್ತವೆ ಅನ್ನೋದಕ್ಕೆ ಈ ಒಂದು ವಿಡಿಯೋ ಸಾಕ್ಷಿ. ಜೊತೆಗೆ ಎಷ್ಟಿದ್ದರೂ ಸಾಕೆನದವರಿಗೆ ಇದೊಂದು ಮಾದರಿ ವಿಡಿಯೋ ಎನ್ನಬಹುದು. ಇಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಒಂದು ಚಿಂಪಾಂಜಿ ತನ್ನಲ್ಲಿರುವ ಸೇಬು ಹಣ್ಣನ್ನು ಆಮೆಯೊಂದಿಗೆ ಹಂಚಿಕೊಂಡು ತಿಂದಿದೆ. ತಾನೊಮ್ಮೆ ತಿನ್ನುವುದು ಆಮೆಗೊಮ್ಮೆ ತಿನಿಸುವುದು. ವಿಡಿಯೋ ನೋಡೋದಕ್ಕೆ ಮುದ್ದಾಗಿದೆ. ಬೇಕಾದ್ರೆ ನೀವೂ ಒಂದು ಬಾರಿ ಈ ವಿಡಿಯೋವನ್ನು ಆನಂದಿಸಬಹುದು.

ಸಾಮಾನ್ಯವಾಗಿ ಆಹಾರ ಸಿಕ್ಕರೆ ಕೂಗಿ ಕೂಗಿ ಕರೆಯುವ ಹಕ್ಕಿ ಅಂದರೆ ಅದು ಕಾಗೆ ಮಾತ್ರ. ಆದರೆ ಪ್ರಾಣಿಗಳ ವಿಚಾರಕ್ಕೆ ಬಂದರೆ ಇದು ಬಹುತೇಕ ವಿರುದ್ಧ ದಿಕ್ಕಿನಲ್ಲಿ ಹೋಗುತ್ತದೆ. ಪ್ರಾಣಿಗಳು ಆಹಾರ ಸಿಕ್ಕರೆ ಮತ್ತೊಂದು ಪ್ರಾಣಿಯೊಂದಿಗೆ ಹಂಚಿ ತಿನ್ನುವುದು ತುಂಬಾನೇ ವಿರಳ. ಹಾಗೊಂದು ವೇಳೆ ತಿಂದರೂ ಅದು ಅದರದ್ದೇ ಆದ ಸಂಗಾತಿ ಅಥವಾ ಮಕ್ಕಳೊಂದಿಗೆ ಹಂಚಿಕೊಳ್ಳಬಹುದೇನೋ. ಆದರೆ ಬೇರೆ ಪ್ರಾಣಿಗಳೊಂದಿಗೆ ಹಂಚಿಕೊಳ್ಳುವುದರಿಲಿ ಜಗಳವಾಡಿ ಕಿತ್ತುಕೊಂಡು ತಿನ್ನುವುದೇ ಹೆಚ್ಚು. ಹೀಗಿರುವಾಗ ಈ ಚಿಂಪಾಂಜಿ ಆಮೆಯೊಂದಿಗೆ ಹಣ್ಣನ್ನು ಶಾಂತವಾಗಿ ಹಂಚಿಕೊಂಡು ತಿಂದಿದೆ. ಈ ದೃಶ್ಯ ನೋಡಿ ಜನ ಸಂತೋಷಗೊಂಡಿದ್ದಾರೆ.

Recommended Video

   GST Hike On Daily Needs: ಏಕಾಏಕಿ ಬೆಲೆ ಏರಿಕೆ ಮಾಡಿದ ಸರ್ಕಾರ | *India | OneIndia Kannada

   ವಿಡಿಯೋದಲ್ಲಿ ಆಮೆಗೆ ಸೇಬು ಹಣ್ಣು ತಿನಿಸುವ ಚಿಂಪಾಂಜಿಯೊಂದಿಗೆ ಮತ್ತೊಂದು ಚಿಂಪಾಂಜಿ ಇರುವುದು ಕೂಡ ವಿಡಿಯೋದಲ್ಲಿ ನೋಡಬಹುದು. ಆದರೆ ಆ ಚಿಂಪಾಂಜಿ ಆಮೆಯೊಂದಿಗೆ ತಾನೂ ಹಣ್ಣು ತಿನ್ನಲು ಪ್ರಯತ್ನಿಸುತ್ತದೆಯಾದರೂ ಆಮೆ ಹಣ್ಣು ತಿನ್ನಲು ಅಡ್ಡಪಡಿಸುವುದಿಲ್ಲ. ಯಾವುದೇ ತೊಂದರೆ ಮಾಡುವುದಿಲ್ಲ. ಹೀಗಾಗಿ ಈ ವಿಡಿಯೋ ಜನರ ಮೆಚ್ಚುಗೆ ಪಡೆದುಕೊಂಡಿದೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಲಭ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ'Sharing is caring' ಎಂಬ ಶಿರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

   English summary
   A video of a chimpanzee sharing an apple with a turtle and eating it has gone viral on social media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X