ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅಬ್ಬಾ.. ಹೀಗಾಗಬಹುದಾ.. ಚಿನ್ನದ ಸರ ಹೊತ್ತೊಯ್ದ ಇರುವೆಗಳು

|
Google Oneindia Kannada News

ಸಾಮಾನ್ಯವಾಗಿ ಇರುವೆಗಳು ಸಕ್ಕರೆ, ಬೆಲ್ಲ, ಸಿಹಿ ಅಥವ ಕೆಲ ಖಾರದ ಆಹಾರವನ್ನು ಸಾಗಿಸುವುದು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಇರುವೆ ಸಮೂಹ ಚಿನ್ನದ ಸರವನ್ನೇ ಹೊತ್ತೊಯ್ಯುತ್ತಿದೆ. ಇರುವೆಗಳು ಸಕ್ಕರೆ ಮತ್ತು ಬೆಲ್ಲದ ಆಹಾರವನ್ನು ಸಾಗಿಸುವಂತೆ ಈ ಇರುವೆಗಳು ಚಿನ್ನದ ಸರವನ್ನು ಒಯ್ಯುತ್ತಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಕ್ಕರೆ, ಎಣ್ಣೆ ಉತ್ಪನ್ನಗಳು, ಬೆಲ್ಲ, ಜೇನುತುಪ್ಪಕ್ಕೆ ಇರುವೆಗಳು ಹತ್ತುತ್ತವೆ. ಇದನ್ನು ತೆಗೆದುಕೊಂಡು ಹೋಗಿ ಮಳೆಗಾಲದಲ್ಲಿ ಆಹಾರವನ್ನು ಸಂಗ್ರಹಿಸಲು ಪ್ರಾರಂಭಿಸುತ್ತವೆ.

ವಿಡಿಯೋ : ಬೆಳ್ತಂಗಡಿಯ ಈ ಬಾಲಕಿ ಕಣ್ಣಿಂದ ಇರುವೆಗಳು ಬರುತ್ತಿವೆ !ವಿಡಿಯೋ : ಬೆಳ್ತಂಗಡಿಯ ಈ ಬಾಲಕಿ ಕಣ್ಣಿಂದ ಇರುವೆಗಳು ಬರುತ್ತಿವೆ !

ಈ ಉದ್ದೇಶಕ್ಕಾಗಿ ಅವು ಸಾಮೂಹಿಕವಾಗಿ ತಮಗೆ ಸಿಗುವ ಆಹಾರವನ್ನು ಎಲ್ಲೋ ಒಂದೆಡೆ ಸಂಗ್ರಹಿಸುತ್ತವೆ. ಸಂಗ್ರಹಿಸಿದ ಆಹಾರವನ್ನು ಮಳೆಗಾಲದಲ್ಲಿ ಸೇವಿಸುತ್ತವೆ. ಸಕ್ಕರೆಯೊಳಗೆ ಇರುವೆಗಳು ಬರದಂತೆ ಏನು ಮಾಡಬೇಕು ಎಂದು ಕೇಳಿದಾಗ ಸಕ್ಕರೆ ಡಬ್ಬದ ಮೇಲೆ ಉಪ್ಪನ್ನು ಹಾಕಿ ಎಂಬ ಹಾಸ್ಯದ ಮಾತಿದೆ. ಆದರೆ ಈ ವಿಡಿಯೋದಲ್ಲಿ ಇರುವುಗಳು ಚಿನ್ನವನ್ನೇ ಹೊತ್ತು ಹೊಯ್ಯುತ್ತಿವೆ. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು ನೆಟ್ಟಿಗರು ಹಾಸ್ಯಾಸ್ಪದ ಪ್ರಶ್ನೆಗಳನ್ನು ಕೆಳಿದ್ದಾರೆ.

Video: Ants carrying gold chain

ಸರೀಸೃಪಗಳು ಇತ್ಯಾದಿಗಳ ಬಗ್ಗೆ ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ವಿಡಿಯೋದಲ್ಲಿ ಮಾಹಿತಿ ಬಿಡುಗಡೆ ಮಾಡುತ್ತಾರೆ. ಆಗಾಗ್ಗೆ ಅವರು ಪ್ರಕಟಿಸುವ ಸಂಗತಿಗಳು ಆಶ್ಚರ್ಯಕರ ಮತ್ತು ತಮಾಷೆಯಾಗಿರುತ್ತವೆ. ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಇರುವೆಗಳು ಚಿನ್ನದ ಸರವನ್ನು ಒಯ್ಯುತ್ತಿವೆ.

ವಿಡಿಯೋದೊಂದಿಗೆ "ಪುಟ್ಟ ದಂಧೆಕೋರರೇ ನಿಮಗೆ ಯಾವ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂಬುದು ನನ್ನ ಪ್ರಶ್ನೆ?" ಎಂದು ಅವರು ಕೇಳಿದಿದ್ದಾರೆ.

Video: Ants carrying gold chain

ಇದಕ್ಕೆ ನೆಟ್ಟಿಗರು ಹಾಸ್ಯಾಸ್ಪದ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ದಂಧೆಕೋರರನ್ನು ಜೈಲಿಗಟ್ಟುವುದು ಕಷ್ಟ. ಅವರಿಗಾಗಿ ಏನಾದರೂ ಕಾನೂನುಗಳಿವೆಯೇ ಎಂದು ನೆಟಿಜನ್‌ಗಳು ಕೇಳಿದ್ದಾರೆ. ಈ ಇರುವೆಗಳು ಒಟ್ಟಾಗಿ ಕೆಲಸ ಮಾಡುವ ಶಕ್ತಿಯನ್ನು ಸಾಬೀತುಪಡಿಸಿವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Recommended Video

ಶಿವಸೇನೆ ಉರುಳಿಸಲು ಒಂದಾದ ಶಿಂದೆ ಬಣ ಮತ್ತು BJP ಈಗ ಖಾತೆ ಕ್ಯಾತೆಯಿಂದ ದೂರವಾಗ್ತಾರಾ? | Oneindia Kannada

English summary
A video carrying a gold chain of ants has gone viral on a social networking site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X