ನಕುಲ್ ನಾಥ್ 17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದ

ನವದೆಹಲಿ, ಮೇ 26: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಅವರು 17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ.

660 ಕೋಟಿ ರೂಪಾಯಿ ಒಡೆಯರಾಗಿರುವ ನಕುಲ್ ನಾಥ್ ಅವರು 4ನೇ ಹಂತದ ಚುನಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು ಶ್ರೀಮಂತ ಅಭ್ಯರ್ಥಿಯಾಗಿದ್ದರು. ಟಾಪ್ 10 ಶ್ರೀಮಂತ ಅಭ್ಯರ್ಥಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು.

ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿರುವ ಅಂಕಿ ಅಂಶಗಳನ್ನು ಕಲೆ ಹಾಕಿ ಆಸ್ತಿ ವಿವರಗಳ ಲೆಕ್ಕವನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರು. ಆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ. ಪಾಟಲೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ರಮೇಶ್ ಆಸ್ತಿ 1,107 ಕೋಟಿ ರು, ಚರಾಸ್ತಿ ಮೌಲ್ಯ 7,08,33,190 ರು ಹಾಗೂ ಸ್ಥಿರಾಸ್ತಿ ಮೌಲ್ಯ 11,00,50,00,000 ರು.

ನಕುಲ್ ನಾಥ್ -ಛಿಂದ್ವಾರ ಕ್ಷೇತ್ರದ ಸಂಸದ

ನಕುಲ್ ನಾಥ್ -ಛಿಂದ್ವಾರ ಕ್ಷೇತ್ರದ ಸಂಸದ

ಅತ್ಯಂತ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ ಅವರು ಈಗ ಈ ಬಾರಿಯ ಅತ್ಯಂತ ಶ್ರೀಮಂತ ಸಂಸದರೆನಿಸಿದ್ದಾರೆ. ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇವರ ಆಸ್ತಿ ಮೌಲ್ಯ 6,60,19,46,757 ರು ( 660 ಕೋಟಿ ರು). ಚರಾಸ್ತಿ : 6,18,41,72,757 ರು ಹಾಗೂ ಸ್ಥಿರಾಸ್ತಿ : 41,77,74,000ರು.

ವಸಂತಕುಮಾರ್ ಎಚ್ -ಕನ್ಯಾಕುಮಾರಿ ಸಂಸದ

ವಸಂತಕುಮಾರ್ ಎಚ್ -ಕನ್ಯಾಕುಮಾರಿ ಸಂಸದ

ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್ ಸಂಸದ ಎಚ್ ವಸಂತಕುಮಾರ್ ರವರು 4,17,49,30,444 ರು ಮೌಲ್ಯ ಆಸ್ತಿ ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಚರಾಸ್ತಿ ಮೌಲ್ಯ 1,87,00,00,000. ಸ್ಥಿರಾಸ್ತಿ ಮೌಲ್ಯ 2,30,49,30,444 ರು

ಡಿಕೆ ಸುರೇಶ್ -ಬೆಂಗಳೂರು ಗ್ರಾಮಾಂತರ

ಡಿಕೆ ಸುರೇಶ್ -ಬೆಂಗಳೂರು ಗ್ರಾಮಾಂತರ

ಕರ್ನಾಟಕದ ಸಿರಿವಂತ ಅಭ್ಯರ್ಥಿಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರು ಸಂಸದರಾಗಿ ಆಯ್ಕೆಯಾಗಿದ್ದು, 338.89 ಕೋಟಿ ರು ಆಸ್ತಿ ಹೊಂದಿದ್ದಾರೆ. ಡಿ.ಕೆ.ಸುರೇಶ್ ಅವರ ಚರಾಸ್ತಿ 33.06 ಕೋಟಿ ಮೌಲ್ಯದ್ದಾಗಿದೆ. ಅವರ ಸ್ಥಿರಾಸ್ತಿ ಬರೋಬ್ಬರಿ 305.59 ಕೋಟಿ ಇದೆ. ಅವರ ಮೇಲೆ ಇರುವ ಸಾಲ ಹಾಗೂ ಪಡೆದಿರುವ ಮುಂಗಡ 51.93 ಕೋಟಿ ಇದೆ. ಅವರ ಈ ವರ್ಷದ ಆದಾಯವನ್ನು ಸೇರಿಸಿ ಸುರೇಶ್ ಅವರ ಒಟ್ಟು ಆಸ್ತಿಯ ಮೌಲ್ಯ 342.65 ಕೋಟಿ ಆಗುತ್ತದೆ

ಶ್ರೀಮಂತ ಪಕ್ಷವಾರು ಲೆಕ್ಕಾಚಾರ

ಶ್ರೀಮಂತ ಪಕ್ಷವಾರು ಲೆಕ್ಕಾಚಾರ

ಒಟ್ಟಾರೆ, 539 ಗೆದ್ದವರ ಲೆಕ್ಕದಲ್ಲಿ 475(88%) ಮಂದಿ ಕೋಟ್ಯಧಿಪತಿಗಳಿದ್ದಾರೆ. 2014ರಲ್ಲಿ 443(82%) ಹಾಗೂ 2009ರಲ್ಲಿ 315(58%) ಮಂದಿ ಕೋಟ್ಯಧಿಪತಿಗಳಿದ್ದರು. ಬಿಜೆಪಿಯ 301 ಮಂದಿ, ಕಾಂಗ್ರೆಸ್ಸಿನ 51ರಲ್ಲಿ 43(84%) ಮಂದಿ, ಡಿಎಂಕೆಯ 23ರಲ್ಲಿ 22(96%), ಎಐಟಿಸಿ 22 ಗೆದ್ದವರ ಪೈಕಿ 20(91%), ವೈಎಸ್ಸಾರ್ ಸಿಪಿಯ22 ಮಂದಿ ಪೈಕಿ 19(86%) ಮಂದಿ, ಎಸ್ಎಚ್ಎಸ್ ನ 18 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.

ಪಕ್ಷವಾರು ಸರಾಸರಿ ಆಸ್ತಿ

ಪಕ್ಷವಾರು ಸರಾಸರಿ ಆಸ್ತಿ

301 ಬಿಜೆಪಿ ಸಂಸದರ ಆಸ್ತಿ ಸರಾಸರಿ ಮೌಲ್ಯ 14.52 ಕೋಟಿ ರು , ಕಾಂಗ್ರೆಸ್ಸಿನ ಸಂಸದರ ಸರಾಸರಿ 38.71 ಕೋಟಿ ರು, ಡಿಎಂಕೆ 23 ಸಂಸದರ ಸರಾಸರಿ ಆಸ್ತಿ 24.51 ಕೋಟಿ ರು, ವೈಎಸ್ಸಾರ್ಸಿಪಿ 54.85 ಕೋಟಿ ರು, ಎಐಟಿಸಿ ಗೆದ್ದವರ ಸರಾಸರಿ 6.15 ಕೋಟಿ ರು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+