Valentines Day Wishes 2025: ಪ್ರೇಮಿಗಳ ದಿನ 25+ ಶುಭಾಶಯ ಮತ್ತು ಸ್ಟೇಟಸ್ ಸಾಲು ಇಲ್ಲಿವೆ!
Happy Valentines Day Wishes 2025: ಪ್ರತಿ ಜೀವಕ್ಕೂ ಇಲ್ಲಿ ಇನ್ನೊಂದು ಜೀವದ ಆಸರೆ. ನೋವು - ನಲಿವುಗಳನ್ನು ಹಂಚಿಕೊಳ್ಳುವುದಕ್ಕೆ ಪ್ರೇಮಿಗಳ ದಿನವೊಂದು ಸಂಕೇತ. ಮಲ್ಲಿಗೆ ಮೊಗ್ಗು ಅರಳಿ ತನ್ನ ಸುಗಂಧವನ್ನು ಸೂಸುವಂತೆ ತಿಳಿ ಬಿಳಿ ಬಣ್ಣದಿಂದ ಕಣ್ ಸೆಳೆಯುವಂತೆ ಪ್ರೇಮಿಗಳಿಗಿಂದು ವಿಶೇಷ ದಿನ. ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸುವುದಕ್ಕೆ ಸುಂದರ ಸಾಲುಗಳು ಇಲ್ಲಿವೆ.
ಯಾರಿಗೂ ಹೇಳೋಣು ಬ್ಯಾಡ.. ಹಾರಗುದರೀ ಬೆನ್ನ ಏರಿ ಸ್ವಾರರಾಗಿ ಕೂತು ಹಾಂಗ ದೂರ ದೂರಾ ಹೋಗೋಣಂತ | ಯಾರಿಗೂ ಹೇಳೋಣ ಬ್ಯಾಡ... ದ ರಾ ಬೇಂದ್ರೆ. ಪ್ರತಿ ಪ್ರೇಮಿಯೂ ಕವಿಯೇ ಪ್ರತಿ ಪ್ರೇಮವೂ ಕಾವ್ಯವೇ. ಇಂದು ಪ್ರೇಮಿಗಳ ದಿನ. ನಿಮ್ಮ ಮಧುರ ಪ್ರೇಮವನ್ನು ಹಂಚಿಕೊಳ್ಳುವ ಸಮಯ. ಪ್ರೇಮಿಗಳ ದಿನ ಫೆಬ್ರವರಿ 14ರ ದಿನವನ್ನು ಇನ್ನಷ್ಟು ವರ್ಣರಂಜಿತವಾಗಿಸುವುದಕ್ಕೆ ವ್ಯಾಲೆಂಟೈನ್ಸ್ ಡೇ ಶುಭಾಶಯ ಸಾಲುಗಳು ಇಲ್ಲಿವೆ.

* ನಾನು ಪ್ರೀತಿಯನ್ನು ನಂಬುವುದಕ್ಕೆ ಕಾರಣವೇ ನೀನು. ಪ್ರೇಮಿಗಳ ದಿನಾಚರಣೆಯ ಶುಭಾಶಯ.
* ನಿನ್ನನ್ನು ನನ್ನ ಜೀವನದಲ್ಲಿ ಪಡೆದಿರುವ ನಾನು ಅದೃಷ್ಟವಂತ. ಪ್ರೇಮಿಗಳ ದಿನದ ಶುಭಾಶಯ ಚಿನ್ನ!
* ನನಗಾಗಿ ನೀನು, ನಿನಗಾಗಿ ನಾನು ಇರಲು ಇನ್ನೇನು ಬೇಕು ಹೇಳು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಬಂಗಾರ!
* ನಾನೊಂದು ನದಿ ನೀನೊಂದು ನದಿ ಸೇರುವ ಕಡಲಾಗಿ, ಜೊತೆಯಾಗಿರುವ ಅಲೆಯಾಗಿ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
* ಆಕಾಶದ ಅಂಗಳದಲ್ಲಿ ಕೋಟಿ.. ಕೋಟಿ ನಕ್ಷತ್ರ ತಾರೆ ನಾ ನಿನ್ನ ಎಂದೆಂದೂ ಬಿಡಲಾರೆ! ಪ್ರೇಮಿಗಳ ದಿನಾಚರಣೆಯ ಶುಭಾಶಯ.
* ಪ್ರೇಮಿಗಳ ದಿನದ ಶುಭಾಶಯಗಳು ಎಂದೆಂದಿಗೂ ಇರುವ ಜೊತೆಯಾಗಿ.

* ಪ್ರೇಮವೆಂದರೇನು ಎಂದು ಕೇಳಿದರು, ನಾ ನಿನ್ನ ತೋರಿಸಿದೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಆ ಕಣ್ಸನ್ನೆಯಲ್ಲಿ ನಿನ್ನ ಮೌನದ ಕವನವನ್ನೂ ನಾ ಓದಬಲ್ಲೇ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಚಿನ್ನ!
* ಕೈಬೆರಳ ಕುಂಚವಿಡಿದು ರಸ್ತೆ ದಾಟಿದಂತೆ ನೋವುಗಳನ್ನೂ ದಾಟೋಣ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
* ಕಣ್ಣ ಕಂಬನಿ ಜಾರದಿರಲಿ... ನನ್ನ ಕಣ್ಣು ತಾಳಲಾರದು ಕರುಳಂತೂ ಮಾತು ಕೇಳದು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
* ನಿನ್ನನ್ನು ಭೇಟಿಯಾಗುವ ವರೆಗೂ ಬದುಕು ಇಷ್ಟೊಂದು ಸುಂದರವೆಂದು ನನಗೆ ತಿಳಿದೇ ಇರಲಿಲ್ಲ. ಪ್ರೇಮಿಗಳ ದಿನಾಚರಣೆ ಶುಭಾಶಯಗಳು!

* ಹೂವು, ಮಲ್ಲಿಗೆ ಚಾಕೊಲೇಟ್ ಅಷ್ಟೇ ಅಲ್ಲ ಮುಂದೆ ಉಪ್ಪು - ಹುಳಿ - ಖಾರವನ್ನೂ ತರ್ತೀನಿ! ಪ್ರೇಮಿಗಳ ದಿನಾಚರಣೆ ಶುಭಾಶಯಗಳು
* ನಿನ್ನ ಮುಡಿಗೆ ಘಮಘಮ ಮಲ್ಲಿಗೆ ಹೂ ತರುವ ಜೀವನದ ಚಂದಾದಾರಿಕೆ ನನಗೇ ಕೊಡು! ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
* ಜೀವನ ಸುಖ - ದುಃಖಗಳಲ್ಲಿ ಒಂದೇ ದೋಣಿಯಲ್ಲಿ ಸಾಗೋಣ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
* ಮೊದಲು ಕೆಂಪು.. ಆ ಮೇಲೆ ಹಳದಿ ಎಲ್ಲಾ ಸಿಗ್ನಲ್‌ಗಳನ್ನು ದಾಟಿ ಬದುಕಿನ ಹಸಿರಿಗೆ ತುಸು ತಡವಾದರೂ ಕಾಯೋಣ. ಪ್ರೇಮಿಗಳ ದಿನಾಚರಣೆ ಶುಭಾಶಯಗಳು!
* ದೀರ್ಘಕಾಲದ ಪಯಣವೆಂದರೆ ಪ್ರೀತಿ - ನಲಿವಿನೊಂದಿಗೆ ನೋವು, ಜಗಳ, ಮುನಿಸು, ಕೋಪವೆಲ್ಲವೂ ಉಂಟು... ಎಲ್ಲದರಲ್ಲೂ ಜೊತೆಯಾಗಿ ಸಾಗೋಣ ಪ್ರೇಮಿಗಳ ದಿನಾಚರಣೆ ಶುಭಾಶಯಗಳು!
* ನೀ ನನ್ನ ಬಾಳಲ್ಲಿ ಬಂದಾಗಲೇ ಹೊಸ ಸೂರ್ಯೋದಯವಾಯ್ತು.. ನಿನ್ನ ಹಿಂದೆ ನಾನು ಸೂರ್ಯಕಾಂತಿಯಾದೆ. ಪ್ರೇಮಿಗಳ ದಿನಾಚರಣೆ ಶುಭಾಶಯಗಳು!

* ಬಣ್ಣ ಖಾಲಿಯಾದ ನನ್ನ ಜೀವನಕ್ಕೆ ಏಳು ಬಣ್ಣ ತುಂಬಿದ ನಿನಗೆ ಪ್ರೇಮಿಗಳ ದಿನಾಚರಣೆ ಶುಭಾಶಯಗಳು.
* ನೀ ನನ್ನ ಬಾಳಿನಲ್ಲಿ ಬಂದ ಮೇಲೆ ಪ್ರತಿ ದಿನವೂ ಪ್ರೇಮಿಗಳ ದಿನವೇ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಮ್ಯಾಜಿಕ್ ಬಗ್ಗೆ ತುಂಬಾ ಕೇಳಿದ್ದೆ ನಿನ್ನ ನೋಡಿದ ಮೇಲೆಯೇ ನಿಜವೆಂದು ನಂಬಿದೆ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಚಿಗುರಿದ ಈ ಪ್ರೇಮ ಸದಾ ಹಸಿರಾಗಿರಲಿ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಗೆಳಯನಾಗಿ, ಪ್ರಿಯತಮನಾಗಿ ನನ್ನೊಂದಿಗಿರುವುದಕ್ಕೆ ಥ್ಯಾಂಕ್ಸ್. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಗೆಳತಿಯಾಗಿ, ಪ್ರಿಯತಮೆಯಾಗಿ ನನ್ನೊಂದಿಗಿರುವುದಕ್ಕೆ ಥ್ಯಾಂಕ್ಸ್. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಕಷ್ಟ - ಸುಖದ ಸಮಯದಲ್ಲಿ ಸರಿಸಮನಾಗಿ ನನ್ನೊಂದಿಗಿರುವ ಜೀವ ನೀನು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ತಪ್ಪಾಗಿದ್ದರೆ ಮನ್ನಿಸು ಬಾ ಹೊಸ ಅಧ್ಯಾಯ ಶುರು ಮಾಡೋಣ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
* ಪ್ರತಿ ಪ್ರೇಮಿಯೂ ಕವಿಯೇ ಪ್ರತಿ ಪ್ರೇಮವೂ ಕಾವ್ಯವೇ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
* ಇಂದು ಪ್ರೇಮಿಗಳ ದಿನ ನಮಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ ಹ್ಯಾಪಿ ವ್ಯಾಲೆಂಟೆನ್ಸ್ ಡೇ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
* ಹ್ಯಾಪಿ ವ್ಯಾಲೆಂಟೆನ್ಸ್ ಡೇ.. ಜೀವನ ಪೂರ್ತಿ ಜೊತೆಯಾಗಿರೋಣ!
-
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ನೈರುತ್ಯ ರೈಲ್ವೆ: 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆ; ಕನ್ನಡಿಗರಿಗೆ ಅನ್ಯಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು -
Bengaluru: ಬೆಂಗಳೂರಲ್ಲಿ ಟೀ ಶಾಪ್ನಲ್ಲಿ 10 ಭಾಷೆ ಮಾತನಾಡುವವರು ಸಿಗ್ತಾರೆ: ನಾರ್ಥಿ ಯುವತಿ ವೈರಲ್ ಪೋಸ್ಟ್ -
ಸಿನಿಮಾಗಳಲ್ಲಿ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕಿ: ಪ್ರೇಮ್ ವಿವಾದದ ಬೆನ್ನಲ್ಲೇ ಫಿಲ್ಮ್ ಚೇಂಬರ್ಗೆ ಮಹಿಳಾ ಆಯೋಗ ಪತ್ರ -
Prem: ಸರ್ಸೆ ಸೆರಗ ಹಾಡನ್ನ ಎಲ್ರೂ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದಾರೆ, ನನ್ನ ಉದ್ದೇಶ ಅದಾಗಿರಲಿಲ್ಲ: ಪ್ರೇಮ್ -
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್ ವಿರುದ್ಧ ದೂರು, ನೋಟಿಸ್ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications