Valentine's Week List 2022: ಪ್ರೇಮಿಗಳ ವಾರ: ಯಾವ್ಯಾವ ದಿನ ಏನೆಲ್ಲಾ ವಿಶೇಷ
ಫೆಬ್ರವರಿಯಲ್ಲಿ ಪ್ರೇಮಿಗಳ ದಿನಗಳು ಆರಂಭವಾಗಿದೆ. ಯಾರನ್ನಾದರೂ ಪ್ರೀತಿಸಿದರೆ ಅದನ್ನು ಹಂಚಿಕೊಳ್ಳಲು ಬಹುತೇಕ ಜನ ಇದೇ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಫೆಬ್ರವರಿ 14 ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳ ದಿನ ಒಂದು ವಾರಕ್ಕೂ ಮುಂಚೆ ಆರಂಭಗೊಳ್ಳುತ್ತದೆ. ಒಂದು ವಾರಕ್ಕೂ ಮಂಚೆಯಿಂದಲೂ ಪ್ರತೀ ದಿನ ಪ್ರೇಮಿಗಳು ತಮ್ಮ ಪ್ರೇಮದ ವಿಚಾರವನ್ನು ತಮ್ಮ ಪ್ರೇಮಿಗೆ ತಿಳಿಸುತ್ತಾರೆ. ಈ ಒಂದೊಂದು ದಿನಕ್ಕೂ ವಿಶೇಷ ಮಹತ್ವವಿದೆ. ಈ 8 ದಿನಗಳನ್ನು ಪ್ರೇಮಿಗಳು ಪರಸ್ಪರ ಪ್ರತಿ ಕ್ಷಣವನ್ನು ಮರೆಯಲಾಗದಂತೆ ಕಳೆಯುತ್ತಾರೆ. ಪ್ರೇಮಿಗಳ ದಿನದ ಮೊದಲು ದಿನದ ಪಟ್ಟಿಯನ್ನು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದರೆ, ಇಲ್ಲಿದೆ ಮಾಹಿತಿ.
ವ್ಯಾಲೆಂಟೈನ್ಸ್ ಡೇ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಯಾವ ದಿನಾಂಕದಂದು ಯಾವ ಸಂದರ್ಭ ಬರುತ್ತದೆ ಮಾತ್ರ ತಿಳಿದಿರುವುದಿಲ್ಲ. ಹಾಗಾದ್ರೆ 8 ದಿನಗಳ ಕಾಲ ಯಾವ ದಿನಾಂಕದಂದು ಗುಲಾಬಿ ನೀಡುವ ದಿನ, ಪ್ರೀತಿ ಪ್ರಸ್ತಾಪಿಸುವ ದಿನವಾಗಿ ಪ್ರತಿ ದಿನವೂ ಒಂದೊಂದು ದಿನ ಆಚರಿಸಲಾಗುತ್ತದೆ. ಇದನ್ನು ತಿಳಿಯಲು ನೀವು ಉತ್ಸುಕರಾಗಿದ್ದರೆ ಈ ಪುಟಯನ್ನು ತಿಳಿಯಿರಿ. 2022 ರ ಸಂಪೂರ್ಣ ಪ್ರೇಮಿಗಳ ವಾರದ ಪಟ್ಟಿ ಇಲ್ಲಿದೆ.

ದಿನ 1 - ಗುಲಾಬಿ ದಿನ
ಪ್ರೇಮಿಗಳ ದಿನ ಫೆಬ್ರವರಿ 7 ರಂದು ಆರಂಭಗೊಳ್ಳುತ್ತದೆ. ಈ ದಿನ ಗುಲಾಬಿ ದಿನವಾಗಿ ಆಚರಿಸಲಾಗುತ್ತದೆ. ಗುಲಾಬಿಗಳನ್ನು ಪ್ರೀತಿಯ ಸಂಕೇತವಾಗಿ ನೀಡಲಾಗುತ್ತದೆ.

ದಿನ 2 - ಪ್ರೇಮದ ಪ್ರಸ್ತಾಪ
ಪ್ರೇಮಿಗಳ ವಾರದ ಎರಡನೇ ದಿನವನ್ನು ಪ್ರೀತಿಯ ವಾರ ಎನ್ನಲಾಗುತ್ತದೆ. ಅಂದರೆ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡುವ ದಿನವೆಂದು ಹೇಳಲಾಗುತ್ತದೆ. ಇದು ಅತ್ಯಂತ ರೋಮ್ಯಾಂಟಿಕ್ ದಿನವಾಗಿದೆ. ಏಕೆಂದರೆ ಪ್ರೇಮಿಗಳು ತಮ್ಮ ಪ್ರೇಮಿಯ ಮುಂದೆ ಪ್ರೀತಿಯನ್ನು ಒಪ್ಪಿಕೊಳ್ಳುವ ದಿನವಾಗಿರುತ್ತದೆ.

ದಿನ 3 - ಚಾಕೊಲೇಟ್ ದಿನ
ಚಾಕೊಲೇಟ್ ದಿನವನ್ನು ಪ್ರೇಮಿಗಳ ವಾರದ ಮೂರನೇ ದಿನದಲ್ಲಿ ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳ ಬಂಧ ವಿಶೇಷವಾಗಿಸುತ್ತದೆ. ಅದು ಚಾಕೊಲೇಟ್‌ಗಳನ್ನು ಪ್ರೀತಿಸುವುದಕ್ಕಿಂತ ಸಿಹಿಯಾಗಿರುತ್ತದೆ. ಈ ದಿನ ಪ್ರೇಮಿಗಳ ಸಂಬಂಧದಲ್ಲಿ ಸಿಹಿಯೂ ಇರುತ್ತದೆ.

ದಿನ 4- ಟೆಡ್ಡಿ ಡೇ
ಇದು ಪ್ರೇಮಿಗಳ ವಾರದ ನಾಲ್ಕನೇ ದಿನ. ಇದನ್ನು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಟೆಡ್ಡಿಗಳು ಮೋಹಕವಾದ ಮತ್ತು ಅತ್ಯಂತ ಪ್ರಸಿದ್ಧವಾದ ಮೃದುವಾದ ಆಟಿಕೆಗಳಾಗಿವೆ. ಇವುಗಳನ್ನು ಪ್ರತಿ ಹುಡುಗಿಯೂ ಪ್ರೀತಿಸುತ್ತಾಳೆ. ಹುಡುಗಿಗೆ ಮೃದುವಾದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದರಿಂದ ಅದು ಯಾವಾಗಲೂ ನಿಮ್ಮನ್ನು ನೆನಪಿಸುತ್ತದೆ.

ದಿನ 5- ಪ್ರಾಮಿಸ್ ಡೇ
ಪ್ರೇಮಿಗಳ ವಾರದ ಐದನೇ ದಿನ ಪ್ರಾಮಿಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು ಅವರು ಯಾವಾಗಲೂ ಕಷ್ಟು ಸುಖದಲ್ಲಿ ಪರಸ್ಪರ ಒಟ್ಟಿಗೆ ಇರುವುದಾಗಿ ಭರವಸೆ ನೀಡುತ್ತಾರೆ. ದಿನದ ಹೆಸರೇ ಎಲ್ಲವನ್ನೂ ಹೇಳುವಂತೆ ಪರಸ್ಪರ ಪ್ರೀತಿ ಪ್ರಸ್ತಾಪವನ್ನು ಮಾಡಿಕೊಂಡು ಜೀವನದಲ್ಲಿ ಒಟ್ಟಿಗೆ ನಡೆಯುವ ಭರವಸೆ ನೀಡುತ್ತಾರೆ.

ದಿನ 6- ಅಪ್ಪುಗೆಯ ದಿನ
ಅಪ್ಪುಗೆಯ ದಿನವು ಪ್ರೇಮಿಗಳ ವಾರದ ಆರನೇ ದಿನವಾಗಿದೆ. ಇದನ್ನು ಫೆಬ್ರವರಿ 12 ರಂದು ಆಚರಿಸಲಾಗುತ್ತದೆ. ಆರಾಮದಾಯಕವಾದ ಅಪ್ಪುಗೆಯು ಪದಗಳಿಗಿಂತ ಹೆಚ್ಚು ಮಾತನಾಡುತ್ತದೆ. ಹೀಗಾಗಿ ಪ್ರೀತಿಪಾತ್ರರಿಗೆ ಕೋಮಲವಾದ ಅಪ್ಪುಗೆ ಮನಸ್ಸಿಗೆ ಮುದನೀಡುತ್ತದೆ. ಅಪ್ಪುಗೆಯ ಮೂಲಕ ಶಾಶ್ವತವಾಗಿ ಪ್ರೀತಿಸುತ್ತಾರೆ ಎಂದು ಅವನಿಗೆ ಅಥವಾ ಅವಳಿಗೆ ತಿಳಿಸುತ್ತದೆ.

ದಿನ 7- ಕಿಸ್ ಡೇ
ಪ್ರೇಮಿಗಳ ವಾರದ ಏಳನೇ ದಿನವನ್ನು ಕಿಸ್ ಡೇ ಎಂದು ಆಚರಿಸಲಾಗುತ್ತದೆ. ಕಿಸ್ ಡೇ ಎಂದರೆ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಕಿಸ್ ನೀಡುವುದು. ಪ್ರೇಮಿಗಳು ಚುಂಬಿಸುವ ಮೂಲಕ ಪರಸ್ಪರ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಪ್ರೇಮಿಗಳು ಚುಂಬನದೊಂದಿಗೆ ತಮ್ಮ ಸಂಬಂಧ ಗಟ್ಟಿಗೊಳಿಸಿಕೊಳ್ಳುತ್ತಾರೆ.

ದಿನ 8- ಪ್ರೇಮಿಗಳ ದಿನ
ಅಂತಿಮವಾಗಿ ವಾರದ ಕೊನೆಯ ದಿನವನ್ನು ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನವು ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಇದನ್ನು 3 ನೇ ಶತಮಾನದ ರೋಮನ್ ಸಂತ ವ್ಯಾಲೆಂಟೈನ್ ನೆನಪಿಗಾಗಿ ಆಚರಿಸಲಾಗುತ್ತದೆ. ಇದು ಸಂತೋಷದ ದಿನ, ಪ್ರೀತಿ ಮತ್ತು ಬದ್ಧತೆಯ ಆಚರಣೆ, ಪರಿಪೂರ್ಣ ಸಂಗಾತಿಯನ್ನು ಹುಡುಕುವ ಆನಂದದಾಯಕ ಉತ್ಸಾಹದ ದಿನ. ಈ 8 ದಿನಗಳಲ್ಲಿ ಪರಸ್ಪರರೊಂದಿಗಿನ ಪ್ರತಿ ಕ್ಷಣವನ್ನು ಮರೆಯಲಾಗದಂತೆ ಆಚರಿಸಲಾಗುತ್ತದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications