BJP Leader Wife: ಬಿಜೆಪಿ ನಾಯಕನ ಪತ್ನಿ ಪೊಲೀಸ್ ಕಾನ್‌ಸ್ಟೆಬಲ್ ಜೊತೆ ಪರಾರಿ
ಬಿಜೆಪಿ ನಾಯಕನ ಪತ್ನಿ ತನಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಪರಾರಿಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಭದೋಹಿಯ ಗೋಪಿಗಂಜ್ ನಗರದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ನಾಯಕ ಸ್ಥಳೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರು. ಈತನ ಪತ್ನಿ ಕೂಡ ಬಿಜೆಪಿ ಸದಸ್ಯೆಯಾಗಿದ್ದು, ಈ ಹಿಂದೆ ಸ್ಥಳೀಯ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
45 ವರ್ಷದ ಬಿಜೆಪಿ ನಾಯಕನ ಪತ್ನಿ ತನಗಿಂತ 15 ವರ್ಷ ಕಿರಿಯ ಪೊಲೀಸ್ ಸಿಬ್ಬಂದಿಯೊಂದಿಗೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಜೆಪಿ ಮುಖಂಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ಗೊಂಡಾ ಮೂಲದ ವಿನಯ್ ತಿವಾರಿ (ಅಲಿಯಾಸ್ ರಾಜ್ ತಿವಾರಿ) ಎನ್ನುವಾತ ನನ್ನ ಮನೆಯ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದನ್ನು. ನನ್ನಿಂದಲೇ ಸಹಾಯ ಪಡೆದ ಆತ ನನಗೆ ಗೊತ್ತಿಲ್ಲದೇ ನನ್ನ ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಮೊದಲು ಸ್ನೇಹ ಬಳಿಕ ಪ್ರೀತಿಯೆಂದು ಯಾಮಾರಿಸಿ ನನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದನ್ನು.
ಪ್ರೀತಿ ಹಾಗೂ ಸುಳ್ಳಿ ಭರವಸೆಗಳನ್ನು ಆಕೆ ನೀಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದನ್ನು. ಬಳಿಕ ಆಕೆಯ ಜೊತೆ ಸಲುಗೆಯಿಂದಿರುವ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನ್ನು. ತನ್ನ ಜೊತೆಗಿನ ಸಂಬಂಧವನ್ನು ಎಲ್ಲರಿಗೆ ತಿಳಿಸುವುದಾಗಿ ಆಕೆಯನ್ನು ಬೆದರಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.
ಮನೆಯಲ್ಲಿದ್ದ ₹2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ನಗದು ಹಣವನ್ನು ಪತ್ನಿ ಹಾಗೂ ಕಾನ್‌ಸ್ಟೆಬಲ್ ತೆಗೆದುಕೊಂಡು ಹೋಗಿದ್ದಾರೆ. ಆತ ಹಣಕ್ಕಾಗಿ ನನ್ನ ಹೆಂಡತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಆತನೊಂದಿಗಿರುವ ನನ್ನ ಹೆಂಡತಿಯ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಹಿಂದೆ ಇವರ ಸಂಬಂಧದ ಬಗ್ಗೆ ತಿಳಿದು ಬರುತ್ತಿದ್ದಂತೆ ಆತನಿಗೆ ಮನೆಯನ್ನು ಖಾಲಿ ಮಾಡುವಂತೆ ಹೇಳಿ ನನ್ನ ಹೆಂಡತಿಗೆ ಬುದ್ಧಿ ಹೇಳಿದ್ದೆ. ಆದರೆ ಅದು ಪ್ರಯೋಜನವಾಗಲಿಲ್ಲ. ಈ ಬಳಿಕ ಇಬ್ಬರು ಸ್ವಲ್ಪ ಸಮಯ ತೆಗೆದುಕೊಂಡು ಸಂಚು ರೂಪಿಸಿ ಮನೆಯಿಂದ ಹಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಇಬ್ಬರು ನಾಪತ್ತೆಯಾಗಲು ಸ್ಥಳೀಯರು ಕೂಡ ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಮಹಿಳೆ ಮತ್ತು ಕಾನ್‌ಸ್ಟೆಬಲ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications