ಊರು ಕೊಳ್ಳೆ ಹೊಡೆದ ಮೇಲೆ ಎಂಟ್ರಿ ಕೊಟ್ಟ ವಿಶ್ವದ ‘ದೊಡ್ಡಣ್ಣ’ ಅಮೆರಿಕ!

ಅಮೆರಿಕದ ಪಾಲಿಗೆ ಪ್ರತಿಯೊಂದು ದೇಶವೂ ಬಳಸಿ ಬಿಸಾಡುವ ವಸ್ತು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನೆಮ್ಮದಿಯೇ ಇಲ್ಲದ ನರಕ ಅಫ್ಘಾನಿಸ್ತಾನದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಅಫ್ಘಾನಿಸ್ತಾನದ ಶೇ. 75ರಷ್ಟು ಪ್ರದೇಶಗಳು ಈಗಾಗಲೇ ತಾಲಿಬಾನ್ ಉಗ್ರರ ವಶವಾಗಿದ್ದು, ಅಫ್ಘಾನ್ ರಾಜಧಾನಿ ಮೇಲೂ ಉಗ್ರರ ಗ್ಯಾಂಗ್ ಹಿಡಿತ ಸಾಧಿಸುತ್ತಿದೆ. ಈಗಾಗಲೇ ಅಫ್ಘಾನ್‌ ರಾಜಧಾನಿಗೆ ಕಾಬೂಲ್‌ನಿಂದ 80 ಕಿ.ಮೀ. ದೂರಕ್ಕೆ ಈ ಪಾಪಿ ಉಗ್ರರ ಗ್ಯಾಂಗ್ ನುಗ್ಗಿ ಬಂದಿದೆ. ಆದ್ರೆ ಊರು ಕೊಳ್ಳೆ ಹೊಡೆದ ಮೇಲೆ ಅಲರ್ಟ್ ಆಗಿರುವ ಅಮೆರಿಕ ಮತ್ತಷ್ಟು ಪಡೆಗಳನ್ನು ಅಫ್ಘಾನಿಸ್ತಾನ ರಾಜಧಾನಿಗೆ ಕಳುಹಿಸಿದೆ.

ಈ ಮೂಲಕ ಕಾಬೂಲ್‌ನಲ್ಲಿ ಸಿಲುಕಿರುವ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನ ರಕ್ಷಿಸಲು 'ದೊಡ್ಡಣ್ಣ' ಅಮೆರಿಕ ಮುಂದಾಗಿದೆ. ದಿಢೀರ್ ಅಫ್ಘಾನ್‌ನಿಂದ ತನ್ನ ಮಿಲಿಟರಿಯನ್ನ ಹಿಂದೆ ಕರೆಸಿಕೊಳ್ಳಲು ಅಮೆರಿಕ ಮುಂದಾಗಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ. ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಮೊದಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೆ ದಿಢೀರ್ ನಿರ್ಧಾರ ಕೈಗೊಂಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎನ್ನುತ್ತಿದ್ದಾರೆ ತಜ್ಞರು. ಮತ್ತೊಂದ್ಕಡೆ ಒಂದೊಂದೇ ಜಿಲ್ಲೆಗಳು, ರಾಜ್ಯಗಳು, ರಾಜಧಾನಿಗಳು ತಾಲಿಬಾನ್ ಉಗ್ರರ ವಶವಾಗುತ್ತಿವೆ. ಇಲ್ಲಿಯವರೆಗೂ ಸುಮಾರು ಶೇ. 75ರಷ್ಟು ಅಫ್ಘಾನಿಸ್ತಾನ ತಾಲಿಬಾನ್‌ನ ವಶವಾಗಿದ್ದು, 20 ವರ್ಷಗಳ ಬಳಿಕ ಮತ್ತೊಮ್ಮೆ ತಾಲಿಬಾನ್ ಉಗ್ರರ ಸಾಮ್ರಾಜ್ಯ ರಕ್ತಪಾತಕ್ಕೆ ಸಜ್ಜಾಗಿದೆ.

ಅಲ್ಲಿ ಜೀವಕ್ಕೆ ಬೆಲೆಯೇ ಇಲ್ಲ

ಅಲ್ಲಿ ಜೀವಕ್ಕೆ ಬೆಲೆಯೇ ಇಲ್ಲ

ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನ ಒಂದಷ್ಟು ಬದಲಾಗಿತ್ತು. ಜೀವನವೇ ಮುಗಿದು ಹೋಯಿತು ಎನ್ನುತ್ತಿದ್ದ ಆ ದೇಶದ ಜನರಿಗೆ ಮತ್ತೆ ಬದುಕುವ ಆಸೆ ಚಿಗುರೊಡೆದಿತ್ತು. ಆದ್ರೆ ಅಮೆರಿಕ ಕೈಗೊಂಡ ಒಂದೇ ಒಂದು ತಪ್ಪು ನಿರ್ಧಾರ, ಮತ್ತೆ ಅಫ್ಘಾನಿಸ್ತಾನದ ಜನರನ್ನು ಬೀದಿಗೆ ತಳ್ಳಿದೆ. 'ಜೀವ ಉಳಿಸಿಕೊಂಡರೆ ಸಾಕಪ್ಪ' ಎಂಬ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ತಾಲಿಬಾನ್ ಗ್ಯಾಂಗ್ ಸಿಕ್ಕ ಸಿಕ್ಕವರನ್ನ ಗುಂಡಿಕ್ಕಿ ಹತ್ಯೆ ಮಾಡುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಜನರ ರಕ್ತ ಹರಿಸಿದ್ದಾರೆ ಉಗ್ರರು. ಇದನ್ನೆಲ್ಲಾ ಕಣ್ಣಾರೆ ಕಂಡು ಭಯಗೊಂಡ ಜನ ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ.

3000 ಸಾವಿರ ಪಡೆ ರವಾನೆ

3000 ಸಾವಿರ ಪಡೆ ರವಾನೆ

ತಾಲಿಬಾನ್ ಉಗ್ರರು ಅಫ್ಘಾನ್‌ ರಾಜಧಾನಿ ಕಾಬೂಲ್ ಸಮೀಪ ಬರುತ್ತಿದ್ದಂತೆ ಅಲರ್ಟ್ ಆಗಿರುವ ಅಮೆರಿಕ, ಹೊಸದಾಗಿ 3000 ಸಾವಿರ ಸೈನಿಕರನ್ನ ಕಾಬೂಲ್‌ಗೆ ಕಳುಹಿಸಿದೆ. ಯಾವುದೇ ಕಾರಣಕ್ಕೂ ಕಾಬೂಲ್ ಉಗ್ರರ ಕೈಗೆ ಸಿಗಬಾರದು ಎಂಬುದು ಇದರ ಹಿಂದಿನ ಲೆಕ್ಕಾಚಾರ. ಆದರೆ ಈಗಾಗಲೇ ಮುಕ್ಕಾಲು ಭಾಗ ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದ್ದು, ಊರು ಕೊಳ್ಳೆ ಹೊಡೆದಾಗಿದೆ. ಇಂತಹ ಹೊತ್ತಲ್ಲಿ ಅಮೆರಿಕ ಕಾಟಾಚಾರಕ್ಕೆ ಹಿಂದೆ ಕರೆಸಿಕೊಂಡಿದ್ದ ಸೇನೆಯನ್ನ ವಾಪಸ್ ಕಳುಹಿಸುತ್ತಿದೆ ಎಂಬ ಆಕ್ರೋಶವೂ ಅಫ್ಘಾನಿಸ್ತಾನದಲ್ಲಿ ವ್ಯಕ್ತವಾಗುತ್ತಿದೆ.

 2 ಲಕ್ಷ ಜನರಿಗೆ ಎಚ್ಚರಿಕೆ

2 ಲಕ್ಷ ಜನರಿಗೆ ಎಚ್ಚರಿಕೆ

ತಾಲಿಬಾನ್ ಉಗ್ರರು ಕಾಬೂಲ್ ಸಮೀಪ ಬರುತ್ತಿದ್ದಂತೆ ಸುಮಾರು 2 ಲಕ್ಷ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೂಡಲೇ ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗುವಂತೆ ಸೂಚನೆ ನೀಡಲಾಗಿದೆ. ನಾಗರಿಕರನ್ನ ಕೂಡಲೇ ಕಾಬೂಲ್‌ನಿಂದ ಹೊರ ಕಳುಹಿಸಲು ಅಮೆರಿಕ ಸಕಲ ಸಿದ್ಧತೆ ಕೈಗೊಂಡಿದೆ. ಇಷ್ಟೆಲ್ಲಾ ಮುಂಜಾಗ್ರತೆ ನಡುವೆ ತಾಲಿಬಾನ್ ಉಗ್ರರು ಮತ್ತಷ್ಟು ಮುನ್ನುಗ್ಗುತ್ತಿದ್ದಾರೆ. ಆಯಕಟ್ಟಿನ ಜಾಗಗಳನ್ನು ತಾಲಿಬಾನ್ ಉಗ್ರರ ಗ್ಯಾಂಗ್ ತನ್ನ ವಶಕ್ಕೆ ಪಡೆದಿದ್ದು, ಎಲ್ಲೆಲ್ಲೂ ಹಿಂಸಾಚಾರ ಭುಗಿಲೆದ್ದಿದೆ.

ಬಿಲದಲ್ಲಿ ಅಡಗಿದ್ದವರು ಮೇಲೆದ್ದರು..!

ಬಿಲದಲ್ಲಿ ಅಡಗಿದ್ದವರು ಮೇಲೆದ್ದರು..!

ಅಮೆರಿಕ ಮಾಡಿಕೊಂಡಿರುವ ಮಹಾ ಎಡವಟ್ಟು ಅಫ್ಘಾನ್‌ನ ಮತ್ತೆ ರಕ್ತದ ಮಡುವಿಗೆ ತಳ್ಳಿದಂತೆ ಕಾಣುತ್ತಿದೆ. ಏಕೆಂದರೆ ಇಷ್ಟು ದಿನ ಅಮೆರಿಕ ಸೇನೆ ಇದೆ ಅಂತಾ ತಾಲಿಬಾನ್ ಉಗ್ರರು ಒಂದಷ್ಟು ಬಾಲ ಮುದುರಿಕೊಂಡು ಬೆಟ್ಟ, ಗುಡ್ಡದಲ್ಲಿ ಅಡಗಿದ್ದರು. ಆದರೆ ಯಾವಾಗ ಅಮೆರಿಕ ಸೇನೆ ಸಮೇತ ಅಲ್ಲಿಂದ ಜಾಗ ಖಾಲಿ ಮಾಡೋಕೆ ಮುಂದಾಯ್ತೋ, ಅಂದಿನಿಂದ ಪಾಪಿ ಉಗ್ರರು ಬಾಲ ಬಿಚ್ಚುತ್ತಿದ್ದಾರೆ. ಒಂದೊಂದೇ ಊರುಗಳು ತಾಲಿಬಾನಿಗಳ ವಶವಾಗುತ್ತಿವೆ. ಉಗ್ರರ ಅಟ್ಟಹಾಸ ಎಷ್ಟಿದೆ ಎಂದರೆ, ಕೆಲವು ವಾರಗಳಿಂದ ಹಿಂಸಾಚಾರ 3-4 ಪಟ್ಟು ಹೆಚ್ಚಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕ ಒಂದಷ್ಟು ಬೆಟಾಲಿಯನ್‌ನ ವಾಪಸ್ ಕಳುಹಿಸಿದ್ದರೂ ಪ್ರಯೋಜನವೇ ಆಗುತ್ತಿಲ್ಲ. ಭವಿಷ್ಯದಲ್ಲಿ ಈ ನಿರ್ಧಾರ ಅಫ್ಘಾನ್ ಜೊತೆಗೆ ಅಮೆರಿಕಗೂ ಮುಳುವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+