Walking in the summer: ಬೇಸಿಗೆಯ ಋತುವಿನಲ್ಲಿ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
ವಾಕಿಂಗ್ ಯಾವುದೇ ಋತುಮಾನದಲ್ಲೂ ಮಾಡಬಹುದಾದ ಸುಲಭ ವ್ಯಾಯಾಮ. ವಾತಾವರಣಕ್ಕೆ ತಕ್ಕಂತೆ ದೇಹವನ್ನು ನೋಡಿಕೊಂಡು, ಬೆಳಗ್ಗಿನ ಜಾವ ವಾಕ್ ಮಾಡಿದರೆ ಮನುಷ್ಯನ ಆರೋಗ್ಯ ಸ್ಥಿರವಾಗಿರುತ್ತದೆ. ಅಲ್ಲದೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಹೀಗಾಗಿ ಬೆಳಗ್ಗೆ ಅಥವಾ ಸಾಯಾಂಕಾಲ ವಾಕ್ ಮಾಡುವುದು ಅತ್ಯವಶ್ಯ.
ಬೇಸಿಗೆಯಲ್ಲಿ, ದಿನವು ತುಂಬಾ ಬೇಗ ಆಗುತ್ತದೆ. ಸೂರ್ಯ ಈ ಋತುವಿನಲ್ಲಿ ಬೇಗ ತನ್ನ ಕೆಲಸವನ್ನು ಆರಂಭಿಸುತ್ತಾನೆ. ಬಿಸಿ ಹೆಚ್ಚಾದಾಗ ಜನರು ವಾಕಿಂಗ್ ಮಾಡಲು ಇಷ್ಟ ಪಡುವುದಿಲ್ಲ. ಇದರ ಬಲದಿಗೆ ಬೇರೆ ತಾಲೀಮು ಮಾಡುತ್ತಾರೆ. ಅಂದರೆ ಜಿಮ್ ಹೋಗುವುದು, ಯೋಗಾ ಮಾಡುವುದು, ಮನೆಯಲ್ಲಿಯೇ ಚಿಕ್ಕ ಪುಟ್ಟ ವ್ಯಾಯಾಮ ಮಾಡುವುದನ್ನು ಮಾಡುತ್ತಾರೆ. ಆದರೆ ಬೆಸಿಗೆಯ ಬಿಸಿಲು ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಯಾವ ಸಮಯದಲ್ಲಿ ಮತ್ತು ಎಷ್ಟು ನಿಮಿಷಗಳ ಕಾಲ ನೀವು ಈ ನಡಿಗೆಯನ್ನು ಮಾಡಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಲಾಭ?
ಬೆಸಿಗೆಯಲ್ಲಿ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ ಹೆಚ್ಚಿನ ಬೆವರನ್ನು ಹರಿಸಬಹುದು. ಆದರೆ ಮಾಡುವ ಕ್ರಮ ಸರಿಯಾಗಿರಬೇಕು. ವಾಕಿಂಗ್ ಮಾಡುವ ಸ್ಥಳದಲ್ಲಿ ಸೂರ್ಯನ ಚುಮು ಚುಮು ಬೆಳಕು ನಿಮ್ಮ ಮೇಲೆ ಬೀಳುವಂತೆ ಇರಬೇಕು. ಇದರಿಂದ ದೇಹಕ್ಕೆ ತುಂಬ ಒಳ್ಳೆಯದು. ನೀವು ಸಮುದ್ರವನ್ನು ನೋಡಿದ್ದರೆ, ಅದರ ತಪ್ಪಲಿನಲ್ಲಿ ಜನ ಮಲಗಿರುವುದನ್ನು ನೋಡಬಹುದು. ಅದರ ಲಾಭವನ್ನೇ ನೀವು ಸಹ ವಾಕ್ ಮಾಡುವಾಗ ಪಡೆಯಬಹುದು. ಹಾಗಿದ್ದರೆ ಬೆಸಿಗೆಯ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಬನ್ನಿ ನೋಡೋಣ.
ವಿಟಮಿನ್ ಡಿ ಕೊರತೆ ಕಡಿಮೆ ಆಗಿಸುತ್ತದೆ
- ವಿಟಮಿನ್ ಡಿ ಕೊರತೆಯು ಮೂಳೆಗಳು ಮತ್ತು ಕೀಲುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅವುಗಳನ್ನು ಬಲಪಡಿಸಲು ವಿಟಮಿನ್ ಡಿ ಅಗತ್ಯವಾಗಿರುತ್ತದೆ ಮತ್ತು ನೀವು ಅದನ್ನು ಸೂರ್ಯನ ಬೆಳಕಿನಿಂದ ಪಡೆಯಬಹುದು. ಇದು ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾದಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ಬೆಸಿಗೆಯಲ್ಲಿ ವಾಕ್ ಮಾಡುವುದು ತುಂಬ ಅವಶ್ಯಕ.
- ಸೂರ್ಯನ ಬೆಳಕು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿದಿನ ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಖಿನ್ನತೆ ಮತ್ತು ಆತಂಕವನ್ನು ನಿವಾರಿಸುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ
- ಬೇಸಿಗೆಯ ಋತುವಿನಲ್ಲಿ ವಾಕ್ ಮಾಡುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ನೀವು ಕಾಲೋಚಿತ ಕಾಯಿಲೆಗಳಿಗೆ ಗುರಿಯಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ನಡೆಯಿರಿ, ಇದು ನಿಮ್ಮ ದುರ್ಬಲ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ, ನೀವು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವುದಿಲ್ಲ ಎಂದು ಅಧ್ಯಯನ ತಿಳಿಸುತ್ತದೆ.
ವೇಟ್ ಲಾಸ್‌ಗೂ ಉತ್ತಮ
-ಬಿಸಿಲಿನಲ್ಲಿ ನಡೆಯುವುದು ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ಆದ್ದರಿಂದ ಬೇಸಿಗೆಯ ಋತುವಿನಲ್ಲಿ ಸಹ, ನೀವು ಖಂಡಿತವಾಗಿಯೂ ಬೆಳಿಗ್ಗೆ ಸೂರ್ಯನ ಬೆಳಕನ್ನು ಪಡೆಯಬೇಕು.
- ಇನ್ನು ಬೇಸಿಗಿಯ ಋತುವಿನಲ್ಲಿ ಯಾವ ಸಮಯದಲ್ಲಿ ವಾಕ್ ಮಾಡಿದರೆ ಬೆಸ್ಟ್?
ಬೆಳಿಗ್ಗೆ 7 ರಿಂದ 8 ರವರೆಗೆ ಸೂರ್ಯನ ಬೆಳಕು ದೇಹದ ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೀಗಾಗಿ ಬೇಸಿಗೆಯ ಸಮಯದಲ್ಲೂ ವಾಕ್ ಮಾಡುವುದನ್ನು ನಿಲ್ಲಿಸಬಾರದು.












Click it and Unblock the Notifications