ತಾಲಿಬಾನ್ ಸರ್ಕಾರಕ್ಕೆ ಶಾಕ್ ಕೊಟ್ಟ ಅಮೆರಿಕ! $70 ಸಾವಿರ ಕೋಟಿ ಬಿಗ್ ಲಾಸ್!
ಸೇಡಿಗೆ ಸೇಡು, ರಕ್ತಕ್ಕೆ ರಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ.
ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್ ಅಜ್ಮಲ್ ಅಹ್ಮದಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಗೋಳಾಡಿದ್ದಾರೆ. ಆಂತರಿಕ ಯುದ್ಧ, ಗಲಭೆ, ಅಶಾಂತಿ ಪರಿಣಾಮ ಅಫ್ಘಾನ್‌ನ ಆರ್ಥಿಕ ಸ್ಥಿತಿ ಬೀದಿಗೆ ಬಂದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲೇ ತಾಲಿಬಾನ್ ಅಧಿಕಾರ ಹಿಡಿದಿದೆ. ಆದರೆ ಇಷ್ಟುದಿನ ಪಾಶ್ಚಿಮಾತ್ಯ ರಾಷ್ಟ್ರಗಳ ಮಾತು ಕೇಳುವ ಸರ್ಕಾರ ಅಫ್ಘಾನ್‌ನಲ್ಲಿ ಅಸ್ತಿತ್ವದಲ್ಲಿತ್ತು. ಆಗ ಅಫ್ಘಾನ್‌ಗೆ ಸಾವಿರಾರು ಕೋಟಿ ಹಣವನ್ನು ಅಮೆರಿಕ ಮತ್ತಿತರ ರಾಷ್ಟ್ರಗಳು ದಾನ ಮಾಡಿದ್ದವು. ಈಗ ಪಾಶ್ಚಿಮಾತ್ಯರ ಮಾತು ಕೇಳಲು ತಾಲಿಬಾನ್ ಪಡೆಗಳು ಸಿದ್ಧವಿಲ್ಲ. ಇದೇ ಕಾರಣಕ್ಕೆ ಅಫ್ಘಾನಿಸ್ತಾನಕ್ಕೆ ಸೇರಿದ ಭಾರಿ ಪ್ರಮಾಣದ ಹಣವನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ತಾಲಿಬಾನ್ ವಿರುದ್ಧ ರಣಕಹಳೆ
ಅಫ್ಘಾನಿಸ್ತಾನದಲ್ಲಿ ತಾನು ಕಂಡ ಸೋಲನ್ನು ಅಮೆರಿಕ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇಡೀ ಜಗತ್ತಿನ ಎದುರು ಅಮೆರಿಕ ಸೋತ ಹುಲಿಯಾಗಿದೆ. ಅದು ತಾಲಿಬಾನ್ ರೀತಿಯ ಸಣ್ಣ ಪಡೆಗಳ ವಿರುದ್ಧ ಹೀನಾಯ ಸೋಲು ಕಂಡು, ಅಫ್ಘಾನ್ ಬಿಟ್ಟು ಹೊರಬರುವಂತಾಗಿದೆ. ಹೀಗಂತ ಮತ್ತೆ ಯುದ್ಧ ಮುಂದುವರಿಸಲು ಅಲ್ಲಿ ದುಡ್ಡಿಲ್ಲ. ಅಮೆರಿಕ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ತನ್ನ ಮಾನ ತೆಗೆದ ತಾಲಿಬಾನ್‌ಗೆ ಆರ್ಥಿಕವಾಗಿ ಶಾಕ್ ನೀಡಲು ಅಮೆರಿಕ ಮುಂದಾಗಿದೆ. ಈಗ ತಾನೆ ಅಧಿಕಾರ ಹಿಡಿದಿರುವ ತಾಲಿಬಾನ್ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ನರಳುವಂತೆ ಮಾಡುವುದು ಅಮೆರಿಕದ ಪ್ಲ್ಯಾನ್ ಎಂಬ ಆರೋಪವೂ ಕೇಳಿಬಂದಿದೆ.
Recommended Video

ತಾಲಿಬಾನ್ ಏನು ಮಾಡಬಹುದು..?
ಮೊದಲನೆಯದಾಗಿ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ವಿಚಾರದಲ್ಲಿ ಜಗತ್ತು ಈಗ ಒಡೆದ ಮನೆಯಾಗಿಬಿಟ್ಟಿದೆ. ತಾಲಿಬಾನ್ ಪರ ಚೀನಾ ಮತ್ತು ರಷ್ಯಾ ಬ್ಯಾಟಿಂಗ್ ಮಾಡಿದರೆ, ತಾಲಿಬಾನ್ ವಿರುದ್ಧ ಅಮೆರಿಕದ ಮಿತ್ರಕೂಟ ನಿಂತಿದೆ. ಹೀಗಾಗಿ ತಾಲಿಬಾನ್ ನ್ಯಾಯಕ್ಕಾಗಿ ಮೊರೆಯಿಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಮೆರಿಕ ಅಫ್ಘಾನಿಸ್ತಾನಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣ ಬ್ಲಾಕ್ ಮಾಡಿರೋದು ಅಲ್ಲಿನ ಪ್ರಜೆಗಳಿಗೆ ಪೆಟ್ಟು ನೀಡಲಿದೆ. ಅಲ್ಲಿನ ಲಕ್ಷಾಂತರ ಬಡವರ ಪರಿಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿ ತಲುಪಲಿದೆ. ಜೊತೆಗೆ ನಿರಾಶ್ರಿತರ ಪಾಡು ಮತ್ತಷ್ಟು ಭೀಕರವಾಗಲಿದೆ. ಹೀಗಾಗಿ ಅಮೆರಿಕ ತನ್ನ ನಿರ್ಧಾರ ಮರುಪರಿಶೀಲಿಸಲಿ ಎನ್ನುತ್ತಿದೆ ಅಫ್ಘಾನಿಸ್ತಾನ.

3 ಟ್ರಿಲಿಯನ್ ಲಾಸ್ ಆಯ್ತು..!
2001ರಲ್ಲಿ ತಾಲಿಬಾನ್ ವಿರುದ್ಧ ಗುಡುಗಿದ್ದ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನಕ್ಕೆ ಸೇನೆ ಕಳುಹಿಸಿಬಿಟ್ಟಿದ್ದರು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ನಂತರದ ಬೆಳವಣಿಗೆ ಅಮೆರಿಕ ಮತ್ತು ತಾಲಿಬಾನ್ ವಿರುದ್ಧ ಘರ್ಷಣೆಗೆ ಕಾರಣವಾಗಿತ್ತು. ಅಲ್‌ಖೈದ ಉಗ್ರರ ಪರವಾಗಿ ಮಾತನಾಡಿದ್ದ ತಪ್ಪಿಗೆ ತಾಲಿಬಾನ್ ಬೆಲೆ ತೆರಬೇಕು ಎಂದು ಘರ್ಜಿಸಿದ್ದ ಬುಷ್ ಏಕಾಏಕಿ ಸೇನೆ ನುಗ್ಗಿಸಿದ್ದರು. ಹೀಗೆ 2001ರಲ್ಲಿ ಸೇನೆ ಅಫ್ಘಾನ್ ತಲುಪಿ, ತಾಲಿಬಾನ್ ಸರ್ಕಾರವನ್ನ ಅಮೆರಿಕ ಕೆಳಗಿಳಿಸಿತ್ತು. 20 ವರ್ಷ ನಡೆದ ತಿಕ್ಕಾಟ ಬರೋಬ್ಬರಿ 3 ಟ್ರಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿದೆ. ಅಮೆರಿಕ ಇಷ್ಟೊಂದು ದೊಡ್ಡಮೊತ್ತದ ಹಣ ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದೆ.

1 ಲಕ್ಷ ಜನರ ಸಾವು
2001ರಲ್ಲಿ ಅಮೆರಿಕ ಹಾಗೂ ತಾಲಿಬಾನ್ ನಡುವೆ ಅಫ್ಘಾನಿಸ್ತಾನದಲ್ಲಿ ಆರಂಭವಾದ ಘರ್ಷಣೆಗೆ ಈವರೆಗೂ 1 ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮೃತಪಟ್ಟವರ ಪೈಕಿ ಹೆಚ್ಚಿನವರು ಅಮಾಯಕರು ಹಾಗೂ ನಾಗರಿಕರು ಎಂಬುದೇ ದುರಂತ. ಇನ್ನು ಸಾವಿರಾರು ತಾಲಿಬಾನ್ ಸದಸ್ಯರನ್ನೂ ಅಮೆರಿಕ ಸೇನೆ ಹತ್ಯೆ ಮಾಡಿದೆ. ಜೊತೆಗೆ ಸಾವಿರಾರು ಸೈನಿಕರನ್ನೂ ಈ ಘರ್ಷಣೆಯಲ್ಲಿ ಅಮೆರಿಕ ಕಳೆದುಕೊಂಡಿದೆ. ಒಟ್ಟಾರೆ ತಾಲಿಬಾನ್ ವಿರುದ್ಧದ ಈ ಹೋರಾಟದಲ್ಲಿ ಅಮೆರಿಕ ಪಡೆದಿದ್ದು ಸಾಸಿವೆಯಷ್ಟು, ಆದರೆ ಕಳೆದುಕೊಂಡಿದ್ದು ಬೆಟ್ಟದಷ್ಟು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications