ಬಜೆಟ್‌ನಲ್ಲಿ ಮಂಡಿಸಲಾಗುವ ಸುಖ, ದುಃಖ ಕಾರ್ಯರೂಪಕ್ಕೆ ಬರುವ ಪದ್ದತಿ ಹೀಗೆ
ಕೇಂದ್ರದ 2022-23 ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ಒಂದರಂದು ಮಂಡಿಸಲಿದ್ದಾರೆ. ಈ ಹಿಂದೆ ರೈಲ್ವೆ ಮತ್ತು ಸಾಮಾನ್ಯ ಬಜೆಟ್ ಅನ್ನು ಪ್ರತ್ಯೇಕ, ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಈ ಪರಿಪಾಠಕ್ಕೆ ತಿಲಾಂಜಲಿ ಇಡಲಾಯಿತು.
ಪ್ರತೀ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತದೆಯಾದರೂ, ವಿವಿಧ ತೆರಿಗೆ ಮತ್ತು ಸುಂಕಗಳು ಬಹುಪಾಲು ಕೇಂದ್ರ ಸರಕಾರದ ಸುಪರ್ದಿಗೆ ಬರುವುದರಿಂದ ಯೂನಿಯನ್ ಬಜೆಟ್ ಪ್ರಮುಖವಾಗುತ್ತದೆ ಮತ್ತು ಎಲ್ಲರ ಕಣ್ಣು ಅದರ ಮೇಲೆ ನೆಟ್ಟಿರುತ್ತದೆ.
ಸಾಮಾನ್ಯವಾಗಿ ವಿಲಾಸಿ ಪದಾರ್ಥಗಳು/ತಂಬಾಕು ಉತ್ಪನ್ನಗಳ ಮೇಲೆ ಪ್ರತೀ ಬಜೆಟಿನಲ್ಲಿ ತೆರಿಗೆ ಕಮ್ಮಿಯಾದ ಉದಾಹರಣೆಗಳಿಲ್ಲ. ಹಾಗಾಗಿ, ಜನವರಿ ಕೊನೆಯ ವಾರದಿಂದಲೇ, ಇದರ ಫ್ರಾಂಚೈಸಿ/ಡಿಸ್ಟಿಬ್ಯೂಟರ್‌ಗಳು ಕೃತಕ ಅಭಾವವನ್ನು ಸೃಷ್ಟಿಸಿ ಪದಾರ್ಥಗಳ ಬೆಲೆಯನ್ನು MRPಗಿಂತ ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುವುದು ವಾಡಿಕೆಯಂತೆ ಈಗಲೂ ನಡೆದುಕೊಂಡು ಬರುತ್ತಿದೆ.
ಫೆಬ್ರವರಿ ಒಂದರಂದು ಬಜೆಟ್ ಮಂಡನೆಯಾಗುತ್ತದೆಯಾದರೂ, ಅದರ ಏರಿಳಿತದ ಎಫೆಕ್ಟ್ ಕಾರ್ಯರೂಪಕ್ಕೆ ಬರುವುದು ಯಾವಾಗ? ಬಜೆಟ್ ಅನುಮೋದನೆಯಾಗಲು ಇರುವ ನಿಯಮಗಳೇನು? ದೇಶದ ಹಣಕಾಸು ಕಾನೂನು ಏನು ಹೇಳುತ್ತದೆ? ಮುಂದೆ ಓದಿ..

ರಾಷ್ಟ್ರಪತಿಗಳು ಉಭಯ ಸದನವನ್ನು ಉದ್ದೇಶಿಸಿ ಭಾಷಣ
ಕೊರೊನಾ ಎಫೆಕ್ಟ್ ನಂತರ ಮಂಡಿಸಲಾಗುತ್ತಿರುವ ಎರಡನೇ ಬಜೆಟ್ ಇದಾಗಿದೆ. ಲಾಕ್ಡೌನ್/ಕರ್ಫ್ಯೂ/ವರ್ಕ್ ಫ್ರಂ ಹೋಂನಿಂದಾಗಿ ಜರ್ಝರಿತಗೊಂಡಿರುವ ಆರ್ಥಿಕತೆಯಿಂದಾಗಿ, ಕಾರ್ಪೋರೇಟರ್ ಕಂಪೆನಿಗಳಿಂದ ಹಿಡಿದು, ಜನಸಾಮಾನ್ಯರ ವರೆಗೆ ಈ ಬಾರಿಯ ಬಜೆಟ್ ಆಶಾದಾಯಕವಾಗಿ ಇರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಬಜೆಟ್ ಅಧಿವೇಶನ ಆರಂಭದ ಒಂದು ದಿನದ ಮುನ್ನ ರಾಷ್ಟ್ರಪತಿಗಳು ಉಭಯ ಸದನವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇದು, ಕೇಂದ್ರ ಸರಕಾರ ಬರೆದುಕೊಡುವ ಕಾಪಿಯನ್ನು ರಾಷ್ಟ್ರಪತಿಗಳು ಓದುವುದರಿಂದ, ಕೇಂದ್ರ ಸರಕಾರ ಏನು ಹೇಳಲು ಬಯಸುತ್ತೋ, ಅದರ ಪ್ರತಿರೂಪದಂತೆ ಈ ಭಾಷಣ ಸಾಮಾನ್ಯವಾಗಿ ಇರುತ್ತದೆ.

ಬಿಗಿ ಭದ್ರತೆಯೊಂದಿಗೆ ಬಜೆಟ್ ಮಂಡಿಸುವ ಕೆಲವು ದಿನಗಳ ಮುನ್ನ ಮುದ್ರಣಕ್ಕೆ
ಕೇಂದ್ರ ಸರಕಾರದ ವಾರ್ಷಿಕ ಹಣಕಾಸು ವರದಿಯೇ ಸಾಮಾನ್ಯ ಬಜೆಟ್ ಮತ್ತು ಈ ಪದ್ದತಿಗೆ ಸುಮಾರು 160 ವರ್ಷಗಳ ಇತಿಹಾಸವಿದೆ. ಯೋಜನಾ ಆಯೋಗ, ಕಂಟ್ರೋಲರ್ ಜನರಲ್, ಲೆಕ್ಕಪರಿಶೋಧಕ ಜನರಲ್, ಆಡಳಿತ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಮತ್ತು ಇದಕ್ಕೆ ಸಂಬಂಧಪಟ್ಟ ಏಜೆನ್ಸಿಗಳು ಸೇರಿ ಬಜೆಟ್ ರೂಪಿಸುತ್ತವೆ. ಬಜೆಟ್ ಕಾಪಿಯನ್ನು ಅತ್ಯಂತ ಬಿಗಿ ಭದ್ರತೆಯೊಂದಿಗೆ ಬಜೆಟ್ ಮಂಡಿಸುವ ಕೆಲವು ದಿನಗಳ ಮುನ್ನ ಮುದ್ರಣಕ್ಕೆ ಕಳುಹಿಸಲಾಗುತ್ತದೆ.

ಹಲ್ವಾ ಕಾರ್ಯಕ್ರಮವೂ ನಡೆಯುತ್ತದೆ
ಬಜೆಟ್ ಪ್ರತಿ ಲೀಕ್ ಆಗಬಾರದು ಎನ್ನುವ ಕಾರಣಕ್ಕಾಗಿ ಬಜೆಟ್ ಮಂಡನೆಯಾಗುವ ತನಕ ಸಂಬಂಧಪಟ್ಟ ಅಧಿಕಾರಿಗಳು ಕಚೇರಿಯಲ್ಲೇ ಉಳಿದುಕೊಳ್ಳಬೇಕಾಗುತ್ತದೆ, ಕುಟುಂಬದವರ ಜೊತೆಗೆ ಮಾತನಾಡಲು ಅವಕಾಶವಿರುವುದಿಲ್ಲ. ಇದಕ್ಕೂ ಮುನ್ನ ಹಲ್ವಾ ಕಾರ್ಯಕ್ರಮವೂ ನಡೆಯುತ್ತದೆ. ಬಜೆಟಿನಲ್ಲಿ ಭಾಗಿಯಾಗುವ ಅಧಿಕಾರಿಗಳಿಗಾಗಿ ಹಲ್ವಾ ತಯಾರಿಸಿ, ಹಂಚಲಾಗುತ್ತದೆ. ಸಾಮಾನ್ಯವಾಗಿ ಕೇಂದ್ರ ಹಣಕಾಸು ಸಚಿವರೇ ಇದರಲ್ಲಿ ನೇರವಾಗಿ ಭಾಗಿಯಾಗುತ್ತಾರೆ.

ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಬೇಕಾಗುತ್ತದೆ
ಬಜೆಟಿನ ಮೊದಲ ಪ್ರತಿ ಕೇಂದ್ರ ಹಣಕಾಸು ಸಚಿವರಿಗೆ ಹೋಗುತ್ತದೆ, ಅದು ಪರಿಶೀಲನೆಗೊಂಡ ನಂತರ ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಬೇಕಾಗುತ್ತದೆ. ಇದಾದ ನಂತರ ಕ್ಯಾಬಿನೆಟಿನಲ್ಲಿ ಅನುಮೋದನೆ ಪಡೆದುಕೊಂಡ ನಂತರ, ಮೊದಲು ಲೋಕಸಭೆಯಲ್ಲಿ ನಂತರ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಆಯ-ವ್ಯಯದ ಮೂರು ಪ್ರತ್ಯೇಕ ಅಂಕಿಅಂಶಗಳನ್ನು ಸದನದಲ್ಲಿ ಹಣಕಾಸು ಸಚಿವರು ನೀಡಬೇಕಾಗುತ್ತದೆ. ಈ ಬಾರಿಯ ಬಜೆಟ್ ಕೂಡಾ ಪೇಪರ್ ಲೆಸ್ ಬಜೆಟ್ ಆಗಿರಲಿದೆ.

ಸಂಸತ್ತಿನಲ್ಲಿ ಬಜೆಟ್ ಮಂಡನೆ
ಸಂಸತ್ತಿನಲ್ಲಿ ಮಂಡನೆಯಾದ ನಂತರ, ವಿವಿಧ ಇಲಾಖೆಗಳ ಖರ್ಚುವೆಚ್ಚಗಳ ಮೇಲಿನ ಚರ್ಚೆಗೆ ಆಸ್ಪದ ನೀಡಲಾಗುತ್ತದೆ. ಚರ್ಚೆಯ ನಂತರ ಅವಶ್ಯಕತೆ ಬಿದ್ದಲ್ಲಿ (ಸಂಖ್ಯಾಬಲದ ಕೊರತೆಯಿದ್ದರೆ) ಬಜೆಟ್ ಅನುಮೋದನೆ ವೋಟಿಂಗ್‌ಗೆ ಹೋಗುತ್ತದೆ. ಸಂಸತ್ತಿನಲ್ಲಿ (ಮೊದಲು ಲೋಕಸಭೆ, ನಂತರ ರಾಜ್ಯಸಭೆ) ಅನುಮೋದನೆ ಸಿಕ್ಕಿದ ನಂತರ ರಾಷ್ಟಪತಿಯವರ ಅಂತಿಮ ಸಹಿಗೆ ಬಜೆಟ್ ಕಾಪಿ ಹೋಗುತ್ತದೆ. ಇಲ್ಲಿಗೆ ಒಂದು ಹಂತದ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.

ಬಜೆಟ್‌ನಲ್ಲಿ ಮಂಡಿಸಲಾಗುವ ಸುಖ, ದುಃಖ ಕಾರ್ಯರೂಪಕ್ಕೆ ಬರುವ ಪದ್ದತಿ ಹೇಗೆ?
ಇಲ್ಲಿಂದ, ಬಜೆಟಿನಲ್ಲಿ ಮಂಡಿಸಲಾದ ಘೋಷಣೆಗಳು ಕಾರ್ಯರೂಪಕ್ಕೆ ತರುವುದು ಸಂಬಂಧಪಟ್ಟ ಇಲಾಖೆಗೆ ಸೇರಿದ್ದು. ಆಯಾಯ ಇಲಾಖೆಗಳಿಗೆ ಘೋಷಿಲಾಗಿರುವ ಹಣಕಾಸು ಪ್ರಮಾಣ, ಹೊಸದಾಗಿ ಕ್ರೋಢೀಕರಿಸಬೇಕಾಗಿರುವ ಆರ್ಥಿಕ ಮೂಲಗಳು, ಅದನ್ನು ಜಾರಿಗೆ ತರುವುದು ಇದನ್ನು ಆಧರಿಸಿ ಬಜೆಟ್ ಘೋಷಣೆ ಕಾರ್ಯರೂಪಕ್ಕೆ ಬರುತ್ತದೆ. ಬಹುತೇಕವಾಗಿ ಹೊಸ ಹಣಕಾಸು ವರ್ಷದಿಂದ ಅನ್ವಯವಾಗುವಂತೆ, ಬಜೆಟಿನ ಲಾಭನಷ್ಟಗಳ ಎಫೆಕ್ಟ್ ಜನಸಾಮಾನ್ಯರಿಗೆ ತಟ್ಟುತ್ತದೆ.
Recommended Video
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications