ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಹೊಸತೊಡಕು: ರಾಜ್ಯದಲ್ಲಿ ಮಟನ್‌, ಚಿಕನ್‌ ದರ ಹೇಗಿದೆ?

|
Google Oneindia Kannada News

ಬೆಂಗಳೂರು, ಏಪ್ರಿಲ್‌ 1: ರಾಜ್ಯದ ಜನರು ಯುಗಾದಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಸರ್ವೇ-ಸಾಮಾನ್ಯವಾಗಿ ಬೇವು-ಬೆಲ್ಲ ಕಂಡು ಬರಲಿದೆ. ಇನ್ನು ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಕೂಡಾ ಸೇವನೆ ಮಾಡಲಾಗುತ್ತದೆ.

ಯುಗಾದಿಯ ದಿನದಂದು ಹೋಳಿಗೆ, ಒಬ್ಬಟ್ಟು ವಿಶೇಷ ಆಹಾರವಾಗಿದೆ. ಜನರು ಯುಗಾದಿ ಹಬ್ಬ ಆಚರಣೆ ಮಾಡಿ ಬೇವು, ಬೆಲ್ಲ, ಒಬ್ಬಟ್ಟು ತಿಂದು ಸಂಭ್ರಮಿಸಿದ ಮರುದಿನವೇ ಹೊಸತೊಡಕು ಆಚರಣೆ ಮಾಡಲು ಸಿದ್ಧವಾಗುತ್ತಾರೆ. ಯುಗಾದಿ ಹಬ್ಬದ ಮಾರನೇ ದಿನ ಅಂದರೆ, ಚೈತ್ರ ಶುದ್ಧ ದ್ವಿತೀಯದಂದು ಹೊಸತೊಡಕು ಎಂದು ಆಚರಿಸುತ್ತೇವೆ. ಹೊಸದನ್ನು ಆ ವರ್ಷ ದಲ್ಲೀ ತೊಡಗಿಸಿಕೊಳ್ಳುವುದು ಎಂದು ಅರ್ಥ. ಇದನ್ನು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ new year resolution ಎಂದು ಹೇಳಬಹುದು.

Ugadi Bhavishya 2022: ಯುಗಾದಿಯ ದ್ವಾದಶ ರಾಶಿ ಫಲUgadi Bhavishya 2022: ಯುಗಾದಿಯ ದ್ವಾದಶ ರಾಶಿ ಫಲ

ಭಾರತೀಯರಿಗೆ ಇದು ಹೊಸ ವರ್ಷಾಚರಣೆ ಆಗಿರುವುದರಿಂದ , ಮೊದಲು ದೇವರ ಪೂಜೆ ಮತ್ತು ಹಬ್ಬವನ್ನು ನೆರವೇರಿಸಿ. ನಂತರ ಹೊಸ ವರ್ಷದ ಬಗ್ಗೆ ನಿರ್ಣಯ ಕೈಗೊಳ್ಳಲು , ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ವಿನಿಮಯ ಮಾಡಿಕೊಳ್ಳುವುದು ಈ ಹೊಸ ತೊಡಕಾಗಿದೆ. ಹೊಸದನ್ನು ಖರೀಡಿಸುವುದಕ್ಕೆ ಮತ್ತು ಹೊಸ ನಿರ್ಣಯ ಕೈಗೊಳ್ಳುವ ದಕ್ಕೆ ಈ ದಿನ ಶುಭ ಪ್ರಾರಂಭವಾಗಿದೆ.

Ugadi 2022: Mutton And Chicken Price in Karnataka Today 1 April, 2022

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ನಿರ್ಬಂಧಗಳ ನಡುವೆಯೂ ಸರತಿ ಸಾಲಿನಲ್ಲಿ ನಿಂತು ಮಟನ್‌, ಚಿಕನ್‌ ಖರೀದಿ ಮಾಡಿದ್ದ ಜನರು ಈ ವರ್ಷವೂ ಕೂಡಾ ಹಬ್ಬಕ್ಕಾಗಿ ಸಿದ್ಧತೆ ಮಾಡುತ್ತಿದ್ದಾರೆ. ಹೊಸ ಚಿಗುರಿನ ಸಂವತ್ಸರದ ಹೊಸ ವಸಂತ ಕಾಲದಲ್ಲಿ ಹೊಸ ಉಡುಪು ತೊಟ್ಟು ಖುಷಿಪಟ್ಟ ಮಾರನೇಯ ದಿನವೇ ಮಾಂಸಹಾರ ಸೇವನೆ ಮಾಡುವವರು ಮನೆಯಲ್ಲಿ ಮಾಂಸದ ಭರ್ಜರಿ ಊಟವನ್ನು ಮಾಡಿ ಸಂಭ್ರಮಿಸುತ್ತಾರೆ. ಮನೆಯವರೆಲ್ಲಾ ಜೊತೆಯಾಗಿ ಕೂತು ಮಾಂಸದೂಟ ಮಾಡಿ ಕಾಲ ಕಳೆಯುತ್ತಾರೆ. ಈ ಯುಗಾದಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮಟನ್‌, ಚಿಕನ್‌ ದರ ಹೇಗಿದೆ ಎಂಬುವುದು ಇಲ್ಲಿದೆ ಮುಂದೆ ಓದಿ....

ಚಿಕನ್‌ ಫಾರಂ ಧಾರಣೆ (ರಿಟೇಲ್‌)

ಫಾರಂ ಧಾರಣೆ ಮಾರಾಟದ ಪ್ರತಿ ಕೆಜಿಗೆ ಸಲಹೆಯ ಬೆಲೆ: 130 ರೂಪಾಯಿ
ರೀಟೇಲ್‌ ಮಾರಾಟದ ದರ ಪ್ರತಿ ಕೆಜಿಗೆ 168 ರೂಪಾಯಿ
ವಿಥ್‌ ಸ್ಕಿನ್‌ 236 ರೂಪಾಯಿ, ವಿಥೌಟ್‌ ಸ್ಕಿನ್‌ 270 ರೂಪಾಯಿ

Ugadi 2022: Mutton And Chicken Price in Karnataka Today 1 April, 2022

ಚಿಕನ್‌, ಮೊಟ್ಟೆ ಹೋಲ್‌ಸೆಲ್‌ ಬೆಲೆ

ಬ್ರಾಯ್ಲರ್‌ ಹೋಲ್‌ಸೆಲ್‌ ದರ: 144 ರೂಪಾಯಿ
ಫಾರಂ ಕೋಳಿ ಹೋಲ್‌ಸೆಲ್‌ ದರ: 95 ರೂಪಾಯಿ (ಕನಿಷ್ಠ 500 ಕೆಜಿಗೆ)
ಗಿರಿರಾಜ ಕೋಳಿ ಹೋಲ್‌ಸೆಲ್‌ ದರ: 105 ರೂಪಾಯಿ (ಕನಿಷ್ಠ 500 ಕೆಜಿಗೆ)
ಬ್ರಾಯ್ಲರ್‌ ರೀಟೇಲ್‌ ಮಾರಾಟದ ದರ: 185 ರೂಪಾಯಿ
ವಿತ್‌ ಸ್ಕಿನ್‌ ರೂಪಾಯಿ 258, ವಿತೌಟ್‌ ಸ್ಕಿನ್‌ 284 ರೂಪಾಯಿ
ಮೊಟ್ಟೆಗಳು: 100ಕ್ಕೆ 420 ರೂಪಾಯಿ

 ಗಮನಿಸಿ: ಏಪ್ರಿಲ್‌ 1ರಿಂದ ಯಾವುದು ಅಗ್ಗ, ಯಾವುದು ದುಬಾರಿ? ಗಮನಿಸಿ: ಏಪ್ರಿಲ್‌ 1ರಿಂದ ಯಾವುದು ಅಗ್ಗ, ಯಾವುದು ದುಬಾರಿ?

ಬೆಂಗಳೂರಿನಲ್ಲಿ ಎಷ್ಟಿದೆ ಚಿಕನ್‌, ಮಟನ್‌ ಬೆಲೆ?

ಚಿಕನ್‌ (ವಿತ್‌ಸ್ಕಿನ್‌) 245 ರೂಪಾಯಿ
ಚಿಕನ್‌ (ವಿತೌಟ್‌ ಸ್ಕಿನ್‌) 245 ರೂಪಾಯಿ
ಚಿಕನ್‌ (ಬೋನ್‌ಲೆಸ್‌) 265 ರೂಪಾಯಿ
ಮಟನ್‌: 745 ರೂಪಾಯಿ
ಮೊಟ್ಟೆ (1): 4.15 ರೂಪಾಯಿ
ಮೊಟ್ಟೆ (dozen) 49.8 ರೂಪಾಯಿ
ಮೊಟ್ಟೆ (100): 415 ರೂಪಾಯಿ

English summary
Ugadi 2022: Check out the Mutton And Chicken Price latest market prices in Karnataka today 1 April, 2022. Take a look:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X