ಬಾ ದೋಸ್ತಾ ಸೈಕಲ್ ತುಳಿ: ಇಬ್ಬರು ಸವಾರರಿಗೆ ಒಂದೇ ಸೈಕಲ್ - ಆನಂದ್ ಮಹೀಂದ್ರಾ ಮೆಚ್ಚುಗೆ
ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್‌ನಲ್ಲಿ ನಿಯಮಿತವಾಗಿ ಜನರಿಗೆ ಸ್ಪೂರ್ತಿದಾಯಕ ಪೋಸ್ಟ್‌ಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳಲೇ ಇರುತ್ತಾರೆ. ಹೀಗಾಗಿ ಏನೋ ಅವರ ಟ್ವಿಟರ್ ಖಾತೆ 9 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಇತ್ತೀಚೆಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಇಬ್ಬರು ದೇಸಿ ಹುಡುಗರು ಒಟ್ಟಿಗೆ ಬೈಸಿಕಲ್ ಸವಾರಿ ಮಾಡುವ ವಿಡಿಯೊವನ್ನು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊ ಹಂಚಿಕೊಳ್ಳುವ ಮೂಲಕ ಅವರು, "ಟೀಮ್‌ವರ್ಕ್ ಹಾಗೂ ಸಹಯೋಗದ ಬಗ್ಗೆ ಸಂವಹನಕ್ಕೆ ಸಂಬಂಧಿಸಿದಂತೆ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಕೂಡಾ ಇಂಥ ಉತ್ತಮ ವಿಡಿಯೋವನ್ನು ಹೊಂದಿಲ್ಲ" ಮೂಲತಃ ದಿ ಬೆಟರ್ ಇಂಡಿಯಾ ಹಂಚಿಕೊಂಡಿರುವ ಈ ವಿಡಿಯೊ 476k ವೀಕ್ಷಣೆಗಳು ಮತ್ತು 40k ಲೈಕ್‌ಗಳನ್ನು ಪಡೆದುಕೊಂಡಿದೆ.
Even Harvard Business School would not have a better video to communicate the virtues of collaboration & teamwork! pic.twitter.com/ALBRYRCFN0
— anand mahindra (@anandmahindra) April 23, 2022
ಬಾಲಿವುಡ್ ಕ್ಲಾಸಿಕ್ ಶೋಲೆಯ ಪ್ರಸಿದ್ಧ ಹಾಡು 'ಯೇ ದೋಸ್ತಿ ಹಮ್ ನಹಿ ತೋಡೆಂಗೆ' ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವುದನ್ನು ಕೇಳಿಬರುತ್ತದೆ. ಇತ್ತ ವಿಡಿಯೋದಲ್ಲಿ ಇಬ್ಬರು ಮಕ್ಕಳು ರಸ್ತೆಯ ಮೇಲೆ ಸೈಕಲ್ ಸವಾರಿ ಮಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಆದರೆ ಹುಡುಗರು ಒಟ್ಟಿಗೆ ಸವಾರಿ ಮಾಡಲಿಲ್ಲ, ಇಬ್ಬರೂ ಒಟ್ಟಿಗೆ ಪೆಡಲ್ ತುಳಿಯುತ್ತಾರೆ. ಜೊತೆಗೆ ಶರ ವೇಗದಲ್ಲಿ ಚಲಿಸಲು ಪರಸ್ಪರ ಸಹಾಯ ಮಾಡುತ್ತಾರೆ. ಇಬ್ಬರೂ ತಮ್ಮ ತೂಕವನ್ನು ಸಮತೋಲನಗೊಳಿಸುವಾಗ ತಲಾ ಒಂದು ಪೆಡಲ್ ಮೇಲೆ ನಿಂತಿರುವುದನ್ನು ಕಾಣಬಹುದು. ವಿಡಿಯೊವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ನೆಟ್ಟಿಗರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಕಳೆದ ಬಾರಿ ತಲೆ ಮೇಲೆ ಗಂಟು ಹೊತ್ತುಕೊಂಡು ಸೈಕಲ್ ತುಳಿಯುವ ಯುವಕನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಶ್ಲಾಘಿಸಿದ್ದರು.












Click it and Unblock the Notifications