Car: ಮಾರುಕಟ್ಟೆಗೆ ಟೊಯೊಟಾ ಅರ್ಬನ್‌ ಕ್ರೂಸರ್‌ ಟೈಸರ್‌ ಕಾರ್ ಎಂಟ್ರಿ: ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?

ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಛಾಪು ಹೊಂದಿರುವ ಟೊಯೊಟಾ ಮತ್ತೊಂದು ಕಾರನ್ನು ಏಪ್ರಿಲ್‌ 3ರಂದು ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಕಾಂಪ್ಯಾಕ್ಟ್ SUV ಕಾರ್‌ಗಳು ಮಾರುಕಟ್ಟೆಯಲ್ಲಿದ್ದು, ಈ ಲೀಸ್ಟ್‌ಗೆ toyota urban cruiser Tazer ಸಹ ಸೇರುತ್ತದೆ.

ಈ ಕಾರು ಈಗಾಗಲೇ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಫ್ರಂಟ್ ಕಾರ್‌ಗೆ ಹೋಲುತ್ತದೆ. ಟೊಯೊಟಾ ಟೈಸರ್‌ನಲ್ಲಿ ಕೆಲವು ವಿಭಿನ್ನ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಭಾರತದಲ್ಲಿ ಬಿಡುಗಡೆಯಾದ ಟೊಯೋಟಾದ SUV ಗಳಲ್ಲಿ ಟೈಸರ್‌ ಅತ್ಯಂತ ಚಿಕ್ಕ SUV ಆಗಿದೆ. ಟೊಯೊಟಾ ಈ ಮಾದರಿಯ 12 ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

Toyota Urban Cruiser Taisor Car Entry Into indian Market What Are The Features

ಟೊಯೊಟಾದ ಈ ಹೊಸ SUV ಕಾರಿನಲ್ಲಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಈ ವ್ಯವಸ್ಥೆಯು 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್, ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟೊಯೊಟಾ ಟೈಸರ್‌ನ ಬಾಹ್ಯ ವಿನ್ಯಾಸದಲ್ಲಿ, ಹೆಚ್ಚಿನ ಬಾಡಿ ಪ್ಯಾನೆಲ್‌ಗಳು ಮಾರುತಿ ಸುಜುಕಿ ಫ್ರಂಟ್‌ಗೆ ಹೋಲುತ್ತವೆ. ಆದರೆ, ಅದರ ಮುಂಭಾಗದ ಗ್ರಿಲ್‌ಗಳು ಕೊಂಚ ಡಿಫ್ರೆಂಟ್ ಆಗಿದ್ದು, ಇದು ಅಟ್ರ್ಯಾಕ್ಟಿಂಗ್ ಆಗಿದೆ. ಟೊಯೋಟಾ ಟೈಸರ್‌ ಕಾರ್‌ನಲ್ಲಿ ಎಲ್ಇಡಿ DRLs ಬಳಸಿದೆ. ಟೊಯೊಟಾ ಟೈಸರ್‌ ಕಾರಿನಲ್ಲಿ ಹೊಸ 16-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು (diamond cut alloy wheels) ಅಳವಡಿಸಿದೆ.

ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ

ಈ ಟೈಸರ್‌ ಕಾರ್‌ನಲ್ಲಿ 6 ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ನೀಡಲಾಗಿದೆ. ಇಷ್ಟೇ ಅಲ್ಲದೆ ಕಾರಿನಲ್ಲಿ ಕುಳಿತುಕೊಳ್ಳುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಾರ್‌ ಡಿಸೈನ್ ಮಾಡಲಾಗಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ನಲ್ಲಿ 1.2-ಲೀಟರ್ ನ್ಯಾಚುರಲ್‌ ಮತ್ತು 1.0 ಟರ್ಬೊ ಪೆಟ್ರೊಲ್‌ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಲೀಟರ್, ಮೂರು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಎಂಜಿನ್ 90 hp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್‌ನ 12 ಮಾಡೆಲ್‌ಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ 7.74 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಈ ಕಾರಿನ ಟಾಪ್‌ ಆಂಡ್‌ ಬೆಲೆ 13.04 ಲಕ್ಷಕ್ಕೆ ಏರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+