15 ಸಾವಿರ ರೂ.ಗಳೊಳಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್ಸ್
ಪ್ರತಿ ತಿಂಗಳೂರು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಫೋನ್‌ಗಳು ಲಾಂಚ್ ಆಗುತ್ತವೆ. ಹೊಸ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಆಗುವ ಈ ಫೋನ್‌ಗಳು ಗ್ರಾಹಕರನ್ನು ಸೆಳೆಯುತ್ತವೆ. ಭಾರತೀಯ ಮಾರುಕಟ್ಟೆಯಲ್ಲಿ, ಚೀನಾ ಮೂಲದ ಮೊಬೈಲ್ ಕಂಪನಿಗಳು ಅಬ್ಬರ ನಡೆಸುತ್ತಿವೆ. ಬೇರೆ ಬ್ರ್ಯಾಂಡ್ ಮೊಬೈಲ್‌ಗಳು ಸಹ ಕಮ್ಮಿ ಏನಿಲ್ಲ.
ಈ ತಿಂಗಳಲ್ಲಿ ನೀವು ಮೊಬೈಲ್ ತೆಗೆದುಕೊಳ್ಳಲು ಬಯಸ್ಸಿದ್ದರೆ, ಅದು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ತೆಗೆದುಕೊಳ್ಳುವ ಇರಾದೆ ಇದ್ದರೆ, ಈ ಸುದ್ದಿ ನೋಡಿ. 15 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಮೊಬೈಲ್‌ಗಳು ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ಗುಣ ಮಟ್ಟದಲ್ಲಿ ಲಭ್ಯ. ಈ ಬಗ್ಗೆ ಇಲ್ಲಿದೆ ವರದಿ.

ಮೊಟೊರಾಲಾ ಜಿ64
Motorola G64 ಸಹ ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಉತ್ತಮ ಆಯ್ಕೆಗಳನ್ನು ಹೊಂದಿದೆ. ಮೊಟೊರಾಲಾ ಜಿ 64 ಈ ಸೆಗ್ಮೆಂಟ್‌ನಲ್ಲಿಉತ್ತಮ ಸ್ಮಾರ್ಟ್‌ಫೋನ್. 6.5 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ, 120Hz ರಿಫ್ರೆಶ್ ದರ, 560 ನಿಟ್ಸ್ ಹೊಳಪನ್ನು ಹೊಂದಿದೆ. ಇದರಲ್ಲಿ ಮಿಡಿಯಾಟೆಕ್ ಡೈಮಿನ್ಸಿಟಿ7025 ಪ್ರೊಸೆಸರ್ ಇದೆ. 6,000 mAh ಬ್ಯಾಟರಿ ಹಾಗೂ 33 ವ್ಯಾಟ್ ವೇಗದ ಚಾರ್ಜಿಂಗ್ ಹೊಂದಿದೆ. ಹಿಂಭಾಗದಲ್ಲಿ 50 MP ಕ್ಯಾಮೆರಾ ಹಾಗೂ ವಿಡಿಯೋ ಹಾಗೂ ರೆಕಾರ್ಡಿಂಗಾಗಿ 16 50 MP ಕ್ಯಾಮೆರಾ ನೀಡಲಾಗಿದೆ. ಇದು ಸಹ ಎರಡು ರೂಪಾಂತರಗಳಲ್ಲಿ ಲಭ್ಯ. ಇದರ ಆರಂಭಿಕ ಬೆಲೆ ₹14,999.

ರಿಯಲ್‌ಮಿ 12 ಎಕ್ಸ್
Realme 12x 5G 6.72 ಇಂಚಿನ ಫುಲ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, 950 ನಿಟ್ಸ್ ಹೊಳಪನ್ನು ನೀಡುತ್ತದೆ. ಈ ಮೊಬೈಲ್ IP54 ರೇಟಿಂಗ್ ಹೊಂದಿದೆ. ಮಿಡಿಯಾಟೆಕ್ ಡೈಮಿನ್ಸಿಟಿ 6100+ ಪ್ರೊಸೆಸರ್ ಹೊಂದಿದೆ. ಅಲ್ಲದೆ 5000 MAH ಬ್ಯಾಟರಿ ಹೊಂದಿದ್ದು, ಹಿಂಭಾಗದಲ್ಲಿ 50 MP, ಮುಂಭಾಗದಲ್ಲಿ 8 MP ಕ್ಯಾಮೆರಾ ಹೊಂದಿದೆ. ಇದರು 4GB RAM/128GB ಇಂಟರ್ನಲ್ ಸ್ಟೋರೇಜ್, 6GB RAM/128GB, 8GB RAM/128GB ರೂಪಾಂತದಲ್ಲಿ ಲಭ್ಯ. ಇದರ ಪ್ರಾರಂಭಿಕ ಬೆಲೆ ₹11,999.
ರಿಯಲ್‌ಮಿ ಪಿ1
ರಿಯಲ್‌ಮಿ ಪಿ1 (realme p1) ಅತ್ಯಾಧುನಿಕ ತಂತ್ರಜ್ಞನಾದೊಂದಿಗೆ ಮಾರುಕಟ್ಟೆಗೆ ಲಾಂಚ್ ಆಗಿದೆ. 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮ್ಲೋಡ್ ಡಿಸ್‌ಪ್ಲೇ, 120Hz ರಿಫ್ರೆಶ್ ದರವನ್ನು ಹೊಂದಿದ್ದು, 2000 ನೀಟ್ಸ್ ಹೊಳಪನ್ನು ಹೊಂದಿದೆ. ಇದು ಆಂಡರ್ಯಾಡ್ 14ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಮಿಡಿಯಾಟೆಕ್ ಡೈಮಿನ್ಸಿಟಿ 7050 ಎಸ್‌ಒಸಿ ಪ್ರೊಸೆಸರ್ ಇದೆ. ಇದರಲ್ಲಿ 8 ಜಿಬಿ ರ್ಯಾಮ್, 256 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ.
ಈಫೋನ್ 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 5000 mAh ಬ್ಯಾಟರಿ ನೀಡಲಾಗಿದ್ದು, 45 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ. ಬೆಲೆ: 15,999

ಸ್ಯಾಮ್‌ಸಾಂಗ್ ಗ್ಯಾಲಕ್ಸಿ ಎಫ್ 15 5 ಜಿ
Samsung Galaxy F15 5G ಸಹ ಈ ಬಜೆಟ್‌ನಲ್ಲಿ ಉತ್ತಮ ಆಯ್ಕೆ. ಈ ಫೋನ್ 6.5 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ದರವನ್ನು ಹೊಂದಿದೆ. ಇದರಲ್ಲಿ ಮಿಡಿಯಾಟೆಕ್ ಡೈಮಿನ್ಸಿಟಿ 6100 + ಹೊಂದಿದೆ. 6000 MAH ಬ್ಯಾಟರಿ ಹಾಗೂ ಹಿಂಭಾಗದಲ್ಲಿ 50 ಮತ್ತು ಮುಂಭಾಗದಲ್ಲಿ 13 MP ಕ್ಯಾಮೆರಾ ಹೊಂದಿದೆ. ಇದರ ಆರಂಭಿಕ ಬೆಲೆ ₹12,999.
ವಿವೋ ಟಿ3ಎಕ್ಸ್
Vivo T3x 6.72 ಇಂಚಿನ ಫುಲ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, 1000 ನಿಟ್ಸ್ ಹೊಳಪನ್ನು ನೀಡುತ್ತದೆ. ಈ ಮೊಬೈಲ್ IP54 ರೇಟಿಂಗ್ ಹೊಂದಿದೆ. ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 6 ಜನರೇಷನ್ ಪ್ರೊಸೆಸರ್ ನೀಡಲಾಗಿದೆ. ಅಲ್ಲದೆ 6000 MAH ಬ್ಯಾಟರಿ ಹೊಂದಿದ್ದು, 44 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ.
ಹಿಂಭಾಗದಲ್ಲಿ 50 MP, ಮುಂಭಾಗದಲ್ಲಿ ವಿಡಿಯೋ ಕಾಲ್ ಗಳಿಗೆ 8 MP ಕ್ಯಾಮೆರಾ ಹೊಂದಿದೆ. ಇದರ ಆರಂಭಿಕ ಬೆಲೆ 13,499 ರೂ.












Click it and Unblock the Notifications