ಮಕ್ಕಳು ಅನುಕರಣೆ ಮಾಡುವುದೇಕೆ, ಈ ವಿಡಿಯೋದ ಬಗ್ಗೆ ವೈದ್ಯರು ಏನಂತಾರೆ?
ಬೆಂಗಳೂರು, ಡಿಸೆಂಬರ್ 22: ಮಕ್ಕಳು ಹಿರಿಯರ ಮಾತನ್ನು ಅನುಕರಣೆ ಮಾಡುವುದು, ಹಿರಿಯರೆದುರು ಸಂಕೋಚವಿಲ್ಲದೆ ನೃತ್ಯ ಮಾಡುವುದು ಅಥವಾ ಪರಿಚಯವಿಲ್ಲದೇ ಇರುವವರ ಬಳಿಯೂ ಆತ್ಮೀಯವಾಗಿ ಮಾತನಾಡುವುದನ್ನು ನೀವು ನೋಡಿಯೇ ಇರುತ್ತೀರಿ.
ವಯಸ್ಕರು ಕೆಲ ಸಂದರ್ಭದಲ್ಲಿ ಸಂಕೋಚ ಪಡುವುದುಂಟು ಆದರೆ ಮಕ್ಕಳಲ್ಲಿ ಯಾವುದೇ ಹಿಂಜರಿಕೆ ಇರುವುದಿಲ್ಲ ಏಕೆ ಎಂದು ಎಂದಾದರೂ ಆಲೋಚಿಸಿದ್ದೀರಾ.. ಸಂಶೋಧನೆ ಪ್ರಕಾರ ಮಕ್ಕಳ ಮೆದುಳು, ವಯಸ್ಕರ ಮೆದುಳಿಗಿಂತ ಹೆಚ್ಚು ಚಟುವಟಿಕೆಗಳಿಂದ ಕೂಡಿರುತ್ತದೆ. ಹೀಗಾಗಿ ಮಕ್ಕಳು ಹೊಸ ವಿಷಯಗಳನ್ನು ಬಹುಬೇಗ ಕಲಿಯುತ್ತಾರೆ.
ಮೆದುಳು ಬೆಳವಣಿಗೆಯಾಗುತ್ತಿದ್ದಂತೆ, ಮೆದುಳಿನ ನರಮಂಡಲಗಳು ಬೆಳವಣಿಗೆಯಾಗುತ್ತವೆ. ಮಗುವಿನ ಆರನೇ ವಯಸ್ಸಿನಲ್ಲಿ ಮೆದುಳಿನ ಗ್ರಹಿಸುವ ಶಕ್ತಿ ಅಧಿಕವಾಗುತ್ತದೆ. ಆ ಬಳಿಕ ಮೆದುಳಿನ ಬೆಳವಣಿಗೆ ದರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಶೇ.90ರಷ್ಟು ಮೆದುಳಿನ ಬೆಳವಣಿಗೆ ಮಗುವಿನ ಆರನೇ ವಯಸ್ಸಿಗೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮಕ್ಕಳು ಅನುಕರಣೆ ಮಾಡುವುದೇಕೆ?: ಇತ್ತೀಚೆಗೆ ಮಗುವಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ಮಗುವೊಂದು ಟಿವಿಯಲ್ಲಿ ಬರುವ ನೃತ್ಯವನ್ನೇ ಅನುಕರಣೆ ಮಾಡುತ್ತಾ ಟಿವಿಯನ್ನು ಒಡೆದು ಹಾಕಿದ ವಿಡಿಯೋ ಅದಾಗಿತ್ತು.
It only takes a few seconds... pic.twitter.com/90F0D9SHDk
— Kaveri 🇮🇳 (@ikaveri) December 22, 2020
ಕಾವೇರಿ ಎಂಬುವವರು ಇದನ್ನು ಟ್ವೀಟ್ ಮಾಡಿದ್ದರು. ಮಕ್ಕಳು ಎಂದಿಗೂ ಬೇರೆಯವರ ಗಮನವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿರುತ್ತಾರೆ. ನೃತ್ಯ ಮಾಡುವುದು, ಹಾಡು ಹೇಳುವುದು, ಅನುಕರಣೆ ಮಾಡುವುದು, ಅಥವಾ ಪೋಷಕರು ಮಾತನಾಡುತ್ತಿರುವಾಗ ಮಧ್ಯ ಹೋಗಿ ತಾವೂ ಕೂಡ ಮಾತನಾಡುವುದು ಇವೆಲ್ಲವೂ ಬೇರೆಯವರ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನವಾಗಿರುತ್ತದೆ.
ಹಾಗೆಯೇ ಮಗುವೊಂದು ತಮಿಳು ಹಾಡು, ನೃತ್ಯವೊಂದನ್ನು ನೋಡುತ್ತಾ ಅದರ ಹಾಗೆ ಅನುಕರಣೆ ಮಾಡಲು ಹೋಗಿ ಟಿವಿಯನ್ನೇ ಒಡೆದುಹಾಕಿತ್ತು. ಕೆಲವರು ಆಕೆ ಕ್ಯೂಟ್ ಹಾಗೂ ಇನೋಸೆಂಟ್ ಎಂದು ಟ್ವೀಟ್ ಮಾಡಿದರೆ, ಮಗುವಿಗೆ ಏನು ಆಗಿಲ್ಲ ಎಂದು ಭಾವಿಸುತ್ತೇನೆ ಎಂದು ಇನ್ನೊಬ್ಬರು, ಮಕ್ಕಳ ಕೈಗೆಟುಕುವ ಹಾಗೆ ಟಿವಿ ಹಾಗೂ ಇನ್ನಿತರೆ ಭಾರದ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications