ಲಾಕ್ ಡೌನ್ ವೇಳೆ ಮಕ್ಕಳ ನಿಭಾಯಿಸಲು ಟೆನ್ಷನ್ ಬೇಡ.. ಹೀಗೆ ಮಾಡಿ

ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳುಗಳು ಮಕ್ಕಳ ಬೇಸಿಗೆ ರಜೆಯ ಕಾಲ. ರಜೆ ಅಂದ ಮೇಲೆ ಮಕ್ಕಳ ಆಟ, ಓಟ, ತಿರುಗಾಟ.. ಹೀಗೆ ಹತ್ತು ಹಲವು ಚಟುವಟಿಕೆಗಳು ಇದ್ದದ್ದೇ. ಆದ್ರೆ, ಈ ಬಾರಿ ಕೊರೊನಾ ವೈರಸ್ ನಿಂದಾಗಿ ಮಕ್ಕಳ ಈ ಎಲ್ಲಾ ಹೊರಾಂಗಣ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ.

ಒಂದ್ಕಡೆ ಕೊರೊನಾ ವೈರಸ್ ಭೀತಿ, ಇನ್ನೊಂದ್ಕಡೆ ವರ್ಕ್ ಫ್ರಮ್ ಹೋಮ್, ಮತ್ತೊಂದು ಕಡೆ ಮಕ್ಕಳನ್ನು ನಿಭಾಯಿಸುವ ಹರಸಾಹಸ... ಇವೆಲ್ಲವನ್ನೂ ಮ್ಯಾನೇಜ್ ಮಾಡುವುದು ಬಹುತೇಕ ಪೋಷಕರಿಗೆ ದೊಡ್ಡ ಟಾಸ್ಕ್ ಆಗಿದೆ.

ಇದು ನಮ್ಮ ದೇಶದ ಕಥೆ ಮಾತ್ರ ಅಲ್ಲ.. ಕೊರೊನಾ ಪೀಡಿತ ವಿಶ್ವದ ಹಲವು ರಾಷ್ಟ್ರಗಳಲ್ಲಿನ ಪೋಷಕರ ಪರಿಸ್ಥಿತಿಯೂ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಹೋಮ್ ಸ್ಕೂಲ್ ಮಾದರಿಯಲ್ಲಿ ಮನೆಯಲ್ಲೇ ಮಕ್ಕಳಿಗೆ ಪಾಠ ಬೋಧಿಸಲು ಹಲವು ಪೋಷಕರು ಮುಂದಾಗಿದ್ದಾರೆ.

ಹಾಗಾದ್ರೆ, ಹೋಮ್ ಸ್ಕೂಲ್ (ಮನೆ ಶಿಕ್ಷಣ) ಕಲ್ಪನೆ ಹೇಗಿರಬೇಕು ಎಂಬುದನ್ನು ಮಿಶಿಗನ್ ಮೂಲದ ಕೆಲ್ಲಿ ರುಮ್ಮೆಲ್ ತಿಳಿಸಿದ್ದಾರೆ. ಆರು ವರ್ಷಗಳಿಂದ ತನ್ನ ಮಕ್ಕಳಿಗೆ ಹೋಮ್ ಸ್ಕೂಲ್ ಶಿಕ್ಷಣ ಕೊಟ್ಟಿರುವ ಕೆಲ್ಲಿ ರುಮ್ಮೆಲ್ ಕೆಲ ಟಿಪ್ಸ್ ಗಳನ್ನು ನೀಡುವ ಮುಖಾಂತರ ಅಪ್ಪ-ಅಮ್ಮಂದಿರ ಹೊರೆ ಇಳಿಸುವ ಕೆಲಸ ಮಾಡಿದ್ದಾರೆ. ಅವರ ಟಿಪ್ಸ್ ಗಳನ್ನೊಮ್ಮೆ ಓದಿಕೊಳ್ಳಿ...

ಕೂಲ್ ಆಗಿರಿ...

ಕೂಲ್ ಆಗಿರಿ...

ಕೊರೊನಾದಿಂದ ಗೃಹಬಂಧನದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲ ಬದಲಾವಣೆ ಆಗಿರಬಹುದು. ಹಾಗಂತ, ನಿಮ್ಮ ಕೆಲಸದ ಒತ್ತಡ, ಕೋಪ, ಸಿಟ್ಟನ್ನು ನಿಮ್ಮ ಮಕ್ಕಳ ಮೇಲೆ ತೋರಿಸಬೇಡಿ. ನಿಮ್ಮ ಮೂಡ್ ಕೆಟ್ಟರೆ, ಅದು ನಿಮ್ಮ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಆದಷ್ಟು ಕೂಲ್ ಆಗಿರಿ ಮತ್ತು ಖುಷಿಯಾಗಿರಿ. ಇದರಿಂದ ನಿಮ್ಮ ಮನೆ ಕೂಡ ಖುಷಿಯಾಗಿರುತ್ತದೆ.

ದಿನಚರಿ ಇರಲಿ..

ದಿನಚರಿ ಇರಲಿ..

ಪ್ರತಿ ದಿನ ದಿನಚರಿ ಮೇನ್ಟೇನ್ ಮಾಡಿ. ಹೀಗಾಗಿ, ಯಾವ ಸಮಯಕ್ಕೆ ಏನು ಮಾಡಬೇಕು ಎಂಬುದರ ಅರಿವು ಮಕ್ಕಳಿಗೆ ಮೂಡುತ್ತದೆ. ಹಾಗಂತ, ದಿನಚರಿಯನ್ನು ಕಟ್ಟುನಿಟ್ಟುಗೊಳಿಸಬೇಡಿ. ಇವತ್ತು ಬೆಳಗ್ಗೆ 9 ಗಂಟೆಗೆ ಆಗುವ ಕೆಲಸ, ನಾಳೆ 10 ಗಂಟೆಗೆ ಜರುಗಬಹುದು. ಇಂದು ನಿಮ್ಮ ಮಕ್ಕಳು ಮಾಡಿದ ಕೆಲಸ, ನಾಳೆ ಮಾಡದೇ ಇರಬಹುದು. ಹಾಗಂತ, ಯಾವುದೇ ಕೆಲಸ ಮಾಡಿದರೂ, ಅದರಿಂದ ಮಕ್ಕಳು ಪಾಠ ಕಲಿಯಲಿ. ಪ್ರೀತಿಯಿಂದ ಕೆಲಸ ಮಾಡುವುದನ್ನು ಮಕ್ಕಳಿಗೆ ಕಲಿಸಿರಿ.

ಮನೆಯನ್ನೇ ಶಾಲೆ ಮಾಡಬೇಡಿ

ಮನೆಯನ್ನೇ ಶಾಲೆ ಮಾಡಬೇಡಿ

ಶಾಲೆಯ ವ್ಯವಸ್ಥೆಯೇ ಬೇರೆ.. ಮನೆಯ ವ್ಯವಸ್ಥೆಯೇ ಬೇರೆ. ಹೀಗಾಗಿ, ಮನೆಯನ್ನೇ ಶಾಲೆ ಮಾಡಲು ಹೋಗಬೇಡಿ. ಪ್ರತಿ ದಿನ ಮಕ್ಕಳಿಗೆ ಏನಾದರೊಂದು ಹೊಸದನ್ನು ಹೇಳಿಕೊಡಿ. ಯಾವುದಕ್ಕೆ ಮಕ್ಕಳು ಹೇಗೆ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದನ್ನು ಗಮನಿಸಿ. ಆದಷ್ಟು ಸರಳ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡಿ.

ಮಕ್ಕಳು ಆಟ ಆಡಲಿ

ಮಕ್ಕಳು ಆಟ ಆಡಲಿ

ಮನೆಯಲ್ಲಿ ಗಾರ್ಡನ್ ಅಥವಾ ಅಂಗಳ ಇದ್ದರೆ, ಆಟ ಆಡಲು ಮಕ್ಕಳಿಗೆ ಅವಕಾಶ ಕೊಡಿ. ಆಟ ಆಡಲು ಬಿಟ್ಟಷ್ಟೂ, ಮಕ್ಕಳ ಬೆಳವಣಿಗೆಗೆ ಒಳ್ಳೆಯದ್ದು. ಹೀಗಾಗಿ, ಪ್ರತಿದಿನ ಒಂದು ಗಂಟೆಯಾದರೂ, ಮಕ್ಕಳು ಒಳಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿ ಆಟ ಆಡಲಿ

ದಿನ ನಿತ್ಯದ ಕೆಲಸ ಕಲಿಸಿ

ದಿನ ನಿತ್ಯದ ಕೆಲಸ ಕಲಿಸಿ

ನಿಮ್ಮ ಮಕ್ಕಳಿಗೆ ದಿನ ನಿತ್ಯದ ಕೆಲಸಗಳನ್ನು ಪರಿಚಯಿಸಲು ಇದೇ ಸರಿಯಾದ ಸಮಯ. ಚಿಕ್ಕವಯಸ್ಸಿನಲ್ಲಿಯೇ, ಮನೆಗೆಲಸದಲ್ಲಿ ದೊಡ್ಡವರಿಗೆ ಸಹಾಯ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳ ಭವಿಷ್ಯಕ್ಕೆ ಇದು ಉತ್ತಮ.

ಶಾಂತ ಸಮಯ

ಶಾಂತ ಸಮಯ

ದಿನದಲ್ಲಿ ಸ್ವಲ್ಪ ಹೊತ್ತಾದರೂ, ಶಾಂತ ಸಮಯ ಮನೆಯಲ್ಲಿ ಇರಲೇಬೇಕು. ಹೀಗಾಗಿ, ಈ ವೇಳೆಯಲ್ಲಿ ಪುಸ್ತಕ ಓದುವುದನ್ನು ಅಥವಾ ಪೇಂಟಿಂಗ್/ಆರ್ಟ್ ವರ್ಕ್ ಮಾಡಲು ಮಕ್ಕಳಿಗೆ ಪ್ರೇರೇಪಿಸಿ. ಶಾಂತವಾಗಿದ್ದಾಗ ಮಕ್ಕಳ ಕಲ್ಪನಾ ಲೋಕ ತೆರೆದುಕೊಳ್ಳುತ್ತದೆ.

ಆಟದ ಜೊತೆಗೆ ಪಾಠ

ಆಟದ ಜೊತೆಗೆ ಪಾಠ

ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಇರುವ ಕಾರಣ, ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಮಜವಾದ ಪ್ರಯೋಗಗಳನ್ನು ಮಾಡಿ. ಆಟದಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡಿ. ಇಡೀ ಜಗತ್ತಿನಲ್ಲಿ ಆತಂಕ ಹೆಚ್ಚಾಗಿರುವ ಈ ಹೊತ್ತಲ್ಲಿ, ನಿಮ್ಮ ಕುಟುಂಬದ ಜೊತೆಗೆ ಖುಷಿಯಾಗಿರುವುದನ್ನು ಕಲಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+