ಮನುಷ್ಯನ ಗಡ್ಡದಲ್ಲಿ ಕುಳಿತ ಸಾವಿರಾರು ಅಪಯಕಾರಿ ಜೇನುನೊಣಗಳು! ವಿಡಿಯೋ ವೈರಲ್

ಮನುಷ್ಯನ ಗಡ್ಡದಲ್ಲಿ ಕುಳಿತುಕೊಂಡ ಸಾವಿರಾರು ಅಪಯಕಾರಿ ಜೇನುನೊಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ದೂರದಿಂದ ಜೇನುನೊಣಗಳನ್ನು ನೋಡಿದರನೇ ಜನರು ಭಯಭೀತರಾಗುತ್ತಾರೆ. ಒಂದು ವೇಳೆ ಅವು ಆಕ್ರಮಣಕ್ಕೆ ಮುಂದಾದರೆ ಅವುಗಳಿಂದ ತಪ್ಪಿಸಿಕೊಳ್ಳಲು ಹರಸಹಾಸ ಪಡಬೇಕು. ಹೀಗಾಗಿ ಅದರ ಸುತ್ತಲೂ ಅಲೆದಾಡುವುದಿರಲಿ ಅವು ಇರುವ ದಿಕ್ಕಿನತ್ತ ಸಾಗಲು ಜನ ನೂರು ಬಾರಿ ಯೋಚನೆ ಮಾಡುತ್ತಾರೆ. ಯಾಕೆಂದರೆ ಈ ಅಪಾಯಕಾರಿ ಜೀನುನೊಣಗಳು ಕಚ್ಚಿದರೆ ಅಪಾಯ ತಪ್ಪಿದ್ದಲ್ಲ. ಹೀಗಿರುವಾಗ ಈ ಜೇನುನೊಣಗಳು ಮನುಷ್ಯನಿಗೆ ಹತ್ತಿರವಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬನ ಗಡ್ಡಕ್ಕೆ ಜೇನುನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಮನುಷ್ಯನನ್ನು ಜೇನುನೊಣಗಳು ಸುತ್ತುವರೆದಿವೆ. ಜೇನುನೊಣಗಳು ಅವನ ಬಾಯಿಯ ಸುತ್ತಲೂ ಅಂಟಿಕೊಂಡಿವೆ. ಆದರೆ ಆ ವ್ಯಕ್ತಿ ನಿರ್ಭಯವಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಜೇನುನೊಣಗಳ ದಾಳಿಯ ಬಗ್ಗೆ ನೀವು ಕೇಳಿರಬೇಕು. ಕೆಲವೊಮ್ಮೆ ಜೇನುನೊಣಗಳು ಭಯ ಅನುಭವಿಸಿದಾಗ ತುಂಬಾ ಆಕ್ರಮಣಕಾರಿಯಾಗುತ್ತವೆ. ಆದರೆ ಈ ಕೀಟಗಳ ಇನ್ನೊಂದು ರೂಪವೂ ಇದೆ. ನೀವು ಅವುಗಳಿಗೆ ಯಾವುದೇ ರೀತಿಯ ಅಪಾಯವನ್ನು ಉಂಟುಮಾಡದಿದ್ದರೆ, ಅವು ಉತ್ತಮ ಸ್ನೇಹಿತರಾಗಬಹುದು. ವೈರಲ್ ವಿಡಿಯೊದಲ್ಲಿ ಇದೇ ರೀತಿಯ ದೃಶ್ಯ ಕಾಣಬಹುದು. ಇದರಲ್ಲಿ ಜೇನುನೊಣಗಳು ಮನುಷ್ಯನ ಗಡ್ಡದ ಸುತ್ತ ಕುಳಿತಿರುವುದನ್ನು ಕಾಣಬಹುದು.

ಆಘಾತಕಾರಿ ವಿಡಿಯೋ ವೈರಲ್

ಈ ಜೇನುನೊಣಗಳನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ವೈರಲ್ ವಿಡಿಯೋವನ್ನು ನೋಡಿದ ಜನರು ಒಮ್ಮೆಲೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಜೇನುನೊಣಗಳು ಈ ವ್ಯಕ್ತಿಗೆ ಹೇಗೆ ಹಾನಿ ಮಾಡುತ್ತಿಲ್ಲ, ಇದು ಆಶ್ಚರ್ಯಕರವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Thousands of dangerous bees sitting in mans beard: Video goes viral

ಜೇನುಸಾಕಣೆದಾರ ಜಾನಿ ಅಬಿ ರೀಲಿ

ವಿಡಿಯೋದಲ್ಲಿ ಕಾಣುವ ವ್ಯಕ್ತಿ ಜೇನುಸಾಕಣೆದಾರ ಎಂದು ತಿಳಿದುಬಂದಿದೆ. ಜೇನುಸಾಕಣೆದಾರರಿಗೆ ಅವುಗಳೊಂದಿಗೆ ಉತ್ತಮ ಸಂಬಂಧವನ್ನು ಹೇಗೆ ನಿರ್ಮಿಸುವುದು ಎಂದು ಚೆನ್ನಾಗಿ ತಿಳಿದಿರುತ್ತದೆ. ಜಾನಿ ಅಬಿ ರೀಲಿ ಎಂಬ ಈ ವ್ಯಕ್ತಿ ಜೇನುನೊಣಗಳಿಗೆ ಹೇಗೆ ಹತ್ತಿರವಾಗಬಹುದು ಮತ್ತು ಹೇಗೆ ಪ್ರೀತಿಸಬೇಕು ಎಂಬುದನ್ನು ವಿಡಿಯೋದಲ್ಲಿ ಹೇಳುತ್ತಿದ್ದಾರೆ.

ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ

ಜಾನಿ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಅಂತಹ ಅನೇಕ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿ ಅವರು ಜೇನುನೊಣಗಳನ್ನು ಬಹಳ ಹತ್ತಿರದಿಂದ ಕಾಣುತ್ತಾರೆ. ಈ ವಿಡಿಯೊಗಳ ಆಘಾತಕಾರಿ ಕ್ಲಿಪ್ ಕೂಡ ವೈರಲ್ ಆಗುತ್ತಿದೆ. ಅದರಲ್ಲಿ ಅವರ ಗಡ್ಡವು ಜೇನುನೊಣಗಳಿಂದ ತುಂಬಿದೆ. ಈ ವಿಡಿಯೋ ಮೂಲಕ ಜಾನಿ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಮಧುರ ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+