Happy Mother's Day: ಅಮ್ಮಂದಿರ ಪ್ರಪಂಚ ಚಿಕ್ಕದು ಆದರೆ ಪ್ರೀತಿ ಅಳತೆಗೆ ಸಿಗದು...
Happy Mother's Day: ಮನುಷ್ಯನ ಜೀವನದಲ್ಲಿ "ಅಮ್ಮ" ಎಂಬ ಪದಕ್ಕಿಂತ ಪ್ರೀತಿ, ತ್ಯಾಗ ಮತ್ತು ಭರವಸೆ ತುಂಬಿದ ಮತ್ತೊಂದು ಪದವೇ ಇಲ್ಲ. ತಾಯಿಯ ಪ್ರೀತಿ ಶುದ್ಧ, ನಿಸ್ವಾರ್ಥ ಮತ್ತು ಶಾಶ್ವತ. ನಾವು ಹೇಳುವ "ಥ್ಯಾಂಕ್ಸ್ ಅಮ್ಮ" ಎನ್ನುವ ಎರಡು ಪದಗಳು, ಅವಳ ಅಪಾರ ಪ್ರೀತಿಗೆ ಸಣ್ಣ ಪ್ರತಿಕ್ರಿಯೆಯಷ್ಟೆ. ಆದರೂ ಆ ಪದಗಳ ಹಿಂದೆ ಇರುವ ಭಾವನೆಗಳು ಅಮೂಲ್ಯ.
ಅಮ್ಮಾ ಎಂದು ಕೂಗುವ ಪದದಲ್ಲಿ ಏನೋ ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿಯ ಮುಂದೆ ಅದಲ್ಲೋ ದೂರ ಹೋಗಿಬಿಡುತ್ತದೆ. ಹೀಗಾಗಿ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯನ್ನು ಹೊಗಳಲು ಪದಗಳಿಲ್ಲ.

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ.
ಹೌದು, ಗಾದೆಗಳೆಲ್ಲಾ ಅನುಭವದ ಮಾತುಗಳೇ. ಈ ಗಾದೆ ಬಹಳ ಅರ್ಥಬದ್ಧವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತಿದೆ. ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ, ಮನಸ್ಸಿನ ಸಂಬಂಧಿ, ತಾಯಿಯೇ ಜೀವಂತ ದೇವತೆ ಮಕ್ಕಳನ್ನು ಹೆತ್ತು, ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ ಎಂಬುದೆಲ್ಲ ಸರ್ವಕಾಲಿಕ ಸತ್ಯ, ಇದು ಯಾವ ಕಾಲಕ್ಕೂ ಬದಲಾಗಲು ಸಾಧ್ಯವೇ ಇಲ್ಲ.
ಅಮ್ಮನ ಪ್ರೀತಿಯ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ಶಿಶುವಿನಿಂದ ಹಿಡಿದು ದೊಡ್ಡವರಾಗುತನಂಕ , ತಾಯಿಯ ಪ್ರೀತಿ ನಮಗೆ ನೆರಳಾಗಿರುತ್ತದೆ. ನಾವು ಬಿಸಿಲಿನಲ್ಲಿ ಬೇಸತ್ತು ಬಿದ್ದಾಗ ತಾಯಿಯ ಸ್ಪರ್ಶ ತಂಪಾಗಿ ಅನಿಸುತ್ತದೆ. ನಾವು ಕಷ್ಟದಲ್ಲಿದ್ದಾಗ ಅವಳ "ಏನ ಆಯ್ತು ನಿನಗೆ?" ಎಂಬ ಪ್ರಶ್ನೆಯಲ್ಲೇ ಒಂದು ರೀತಿಯ ನೆಮ್ಮದಿ ಪದದ ಅರ್ಥ ಅಡಗಿದೆ.
ಅಮ್ಮ ತನ್ನ ಇಚ್ಛೆಗಳನ್ನು ನಿಲ್ಲಿಸಿ ಮಕ್ಕಳ ಕನಸುಗಳನ್ನು ಬೆಳೆಸಲು ಶ್ರಮಿಸುತ್ತಾಳೆ. ಬೆಳಗಿನ ಉಪಹಾರದಿಂದ ಸಂಜೆ ಊಟದವರೆಗೆ, ಮನೆಕೆಲಸದಿಂದ ಮಕ್ಕಳ ವ್ಯಾಸಂಗದ ಬಗ್ಗೆ ಚಿಂತೆವರೆಗೆ, ಅವಳ ದಿನಚರಿ ಮಕ್ಕಳ ಸುತ್ತಲೇ ಇರುತ್ತದೆ. ಈ ತೊಡಕುಗಳಿಂದಲೇ ತಾಯಿಯ ಮೌಲ್ಯ ಅರಿಯುವುದು ಸಾಧ್ಯ. ಇದಕ್ಕಾಗಿಯೇ ನಾವು ಹೃದಯಪೂರ್ವಕವಾಗಿ ಹೇಳಬೇಕಾಗುತ್ತದೆ - ಥ್ಯಾಂಕ್ಸ್ ಅಮ್ಮ.
ನನಗೆ ಪ್ರತಿಯೊಂದು ವಿಷಯದಲ್ಲಿ ನನ್ನ ಜೋತೆ ಇದ್ದೆ ನೀನು. ನನಗೇ ಹುಷಾರು ಇಲ್ಲದೆ ಇರುವಾಗ ಆದೇಷ್ಟೂ ರಾತ್ರಿ ನಿದ್ದೆ ಮಾಡದೆ ಎದ್ದು ಪಕ್ಕದಲ್ಲೇ ಕುಳಿತುಕೊಂಡಿದ್ದೆ. ಆದೇಷ್ಟೊ ನಿನ್ನ ಕನಸುಗಳನ್ನು ತ್ಯಾಗ ಮಾಡಿ ನಮಗಾಗಿ ಶ್ರಮಿಸಿದ್ದೆ . ಅಮ್ಮಾ ನೀನು ನೀಡಿದ ಪ್ರೀತಿಯು ನಾವು ಯಾವತ್ತೂ ಮರೆಯಲಾಗದು. ಅಮ್ಮನ ಪ್ರಾರ್ಥನೆ, ಆಶೀರ್ವಾದಗಳು ನಮ್ಮನ್ನು ಎದುರಿಸುತ್ತಿರುವ ಕಷ್ಟಗಳಿಂದ ಕಾಪಾಡುತ್ತವೆ. ನಾವು ಎಷ್ಟು ದೂರ ಇದ್ದರೂ, ಅವಳ ಹೃದಯ ಸದಾ ನಮ್ಮೊಂದಿಗೆ ಇರುತ್ತದೆ. ಈ ಅಡಗಿದ ಪ್ರೀತಿಗೆ ಪ್ರತಿಫಲವಾಗಿ ನೀಡಬಹುದಾದ ಹೃದಯದ ಒಂದು ನಂಬಿಕೆಯ ಪದವೇ ಥ್ಯಾಂಕ್ಸ್ ಅಮ್ಮ.
ಪ್ರತಿಯೊಬ್ಬರೂ ತಾಯಿಗೆ ಈ ಮಾತುಗಳನ್ನು ಹೇಳಬೇಕು-"ಥ್ಯಾಂಕ್ಸ್ ಅಮ್ಮ, ನನ್ನ ಜೀವನದ ಬೆಳಕು ನೀನೇ." ಅವಳ ಕರುಣೆ, ಸಹನೆ, ಪ್ರೋತ್ಸಾಹ ಎಲ್ಲವೂ ನಮ್ಮ ಬೆಳವಣಿಗೆಗೆ ಕಾರಣವಾಗಿವೆ. ಅವಳ ಮಾತಿನಲ್ಲಿದ್ದ ಸಮಾಧಾನ, ಅವಳ ನಗೆಯಲ್ಲಿದ್ದ ಶಕ್ತಿ-all these deserve a heartfelt Thank you.
ಅಂತಿಮವಾಗಿ, ತಾಯಿಯ ಪ್ರೀತಿ ಎಲ್ಲ ಸಂಬಂಧಗಳಿಗಿಂತ ಶ್ರೇಷ್ಠ. ಜೀವನದಲ್ಲಿ ನಾವು ಏನು ಸಾಧಿಸಿದರೂ, ಅದರ ಬೆನ್ನು ಹಿಂದೆ ಅಮ್ಮನ ಬೆಂಬಲ ಮತ್ತು ಪ್ರೋತ್ಸಾಹ ಇರುತ್ತದೆ. ಈ ನಿಜತೆಯ ಅರಿವು ಹೊತ್ತಾಗಲೇ ನಾವು ಹೇಳುವ ಪದ "ಥ್ಯಾಂಕ್ಸ್ ಅಮ್ಮ" ಅರ್ಥಪೂರ್ಣವಾಗುತ್ತದೆ. ಲವ್ ಯು ಅಮ್ಮಾ.....
ಸೌಮ್ಯಾ ಕಾಗಲ್ | ಪ್ರಥಮ ಎಂ.ಸಿ.ಜೆ, ಎಸ್.ಡಿ.ಎಂ ಕಾಲೇಜು ಉಜಿರೆ












Click it and Unblock the Notifications