Teachers Day 2023: ಅಜ್ಞಾನವೆಂಬ ಕತ್ತಲೆಯಿಂದ, ಸುಜ್ಞಾನವೆಂಬ ಬೆಳಕಿನೆಡೆಗೆ ನಡೆಸುವ ಶಿಕ್ಷಕರಿಗೆ ಶುಭಾಶಯ....
ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸಂದರ್ಭದಲ್ಲಿ ಶಿಕ್ಷಕರಿಗೆ ಗೌರವವನ್ನು ತೋರಿಸಲು ಪ್ರತೀ ವರ್ಷ ಸೆಪ್ಟೆಂಬರ್ 5ರಂದು ಭಾರತದಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ನಮ್ಮ ಜೀವನದಲ್ಲಿ ಪೋಷಕರ ಸ್ಥಾನವನ್ನು ಯಾರೂ ಕೂಡ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಅವರು ನಮ್ಮನ್ನು ಸುಂದರ ಜಗತ್ತಿಗೆ ತಂದವರು. ಹೀಗಾಗಿ ನಮ್ಮ ಪೋಷಕರು ಜೀವನದ ಮೊದಲ ಗುರುವಾದರೆ ಎರಡನೇ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ.
ಈ ದಿನ ನಾವು ನಿಮ್ಮ ಪ್ರೀತಿಯ ಶಿಕ್ಷಕರೊಂದಿಗೆ ಹಂಚಿಕೊಳ್ಳಬಹುದಾದ ಮತ್ತು ಅವರ ಮುಳದಲ್ಲಿ ನಗು ತರುವಂತಹ ಕೆಲವು ಶುಭಾಶಯ, ಸಂದೇಶಗಳನ್ನು ಹಂಚಿಕೊಳ್ಳುತ್ತೇವೆ.

ಶಿಕ್ಷಕರ ದಿನಾಚರಣೆಯ ಸಂದೇಶಗಳು:-
►ಭವಿಷ್ಯದಲ್ಲಿ ನನ್ನ ಜನ್ಮ ದಿನಾಚರಣೆ ಆಛರಿಸುವುದಾದರೆ ಅದನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದು ಸರ್ವಂಪಲ್ಲಿ ರಾಧಕೃಷ್ಣನ್ ಅವರು ಹೇಳಿದ್ದರು. ಅದನ್ನು ಅಕ್ಷರ ದಾಸೋಹ ಮೂಲಕ ಸಾರ್ಥಕಗೊಳಿಸಿದವರು ನಮ್ಮ ನಡೆದಾಡುವ ದೇವರು. ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
►ನನ್ನ ಈ ಯಶಸ್ವಿ ಜೀವನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ ಶಿಕ್ಷಕರ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
► ತಮ್ಮ ಜ್ಞಾನ, ಪಾಂಡತ್ಯ, ಸಹನೆ-ದೂರದೃಷ್ಟಿಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರ ಗುರಿ ತಲುಪಲು ಮಾರ್ಗದರ್ಶಕರಾಗಿ ಬಾಳನ್ನು ಬೆಳಗುವಂತಹ ಗುರುಗಳಿಗೆ ಪ್ರಣಾಮಗಳು.
► ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:. ಉಡಿರು ಕೊಡುವವಳು ತಾಯಿ ಹೆಸರು ಕೊಡುವವನು ತಂದೆ ಆ ಹೆಸರನ್ನು ಉಸಿರು ಇರುವವರೆಗೂ ಕಾಪಾಡಿಕೊಂಡು ಹೋಗುವ ವಿದ್ಯೆ ಕೊಡುವವನು ಗುರು.
► ಕತ್ತಲೆಯಿಂದ ನಮ್ಮನ್ನು ಬೆಳಕಿನೆಗೆ ಕರೆದುಕೊಂಡು ಹೋಗುವ ಏಕೈಕ ವ್ಯಕ್ತಿ 'ಶಿಕ್ಷಕ' ಸದಾಕಾಲ ನಮಗೆ ಆದರ್ಶಗಳನ್ನು ಭೋಧಿಸುತ್ತಾ, ಆದರ್ಶ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ಜೀವನ ಮೆರುಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ನಿಮಗೆಲ್ಲರಿಗೂ 'ಶಿಕ್ಷಕರ ದಿನಾಚರಣೆಯ ಶುಭಾಶಯಗಳು'
► ಅಜ್ಞಾನವೆಂಬ ಕತ್ತಲೆಯಿಂದ, ಸುಜ್ಞಾನವೆಂಬ ಬೆಳಕಿನೆಡೆಗೆ, ಹೆಜ್ಜೆ ಹೆಜ್ಜೆಗೂ ಕೈಯಿಡಿದು ನೆಡಸಿ ಇಲ್ಲಿಯವರೆಗೂ ಕರೆತಂದ ಎಲ್ಲ ನನ್ನ ಗುರುವೃಂದಕ್ಕೆ ಅನಂತ ನಮನಗಳು. ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸದಾ ಹೀಗೆ ಇರಲಿ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು:-
► ನೀವು ನನಗಾಗಿ ಮಾಡಿದ ಎಲ್ಲಾ ಪ್ರಯತ್ನಕ್ಕೂ ಧನ್ಯವಾದಗಳು. ನೀವು ನನಗೆ ಶಿಕ್ಷಣದ ಬಗ್ಗೆ ಮಾತ್ರವಲ್ಲ, ಜೀವನದ ಬಗ್ಗೆಯೂ ತುಂಬಾ ಕಲಿಸಿದ್ದೀರಿ. ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.
► ನೀವು ನನಗೆ ಕಲಿಸಿದ ಪಾಠಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಉತ್ತಮ ವಿದ್ಯಾರ್ಥಿ ಮತ್ತು ಉತ್ತಮ ವ್ಯಕ್ತಿಯಾಗಲು ನೀವು ನನಗೆ ಸಹಾಯ ಮಾಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು ಶಿಕ್ಷಕರೇ. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು!
►ನೀವು ನನಗೆ ಶಿಕ್ಷಕರಿಗಿಂತ ಹೆಚ್ಚು. ನೀವು ನನಗೆ ರೋಲ್ ಮಾಡೆಲ್, ಮಾರ್ಗದರ್ಶಕ ಮತ್ತು ಸ್ನೇಹಿತ. ತರಗತಿಯ ಒಳಗೆ ಮತ್ತು ಹೊರಗೆ ನೀವು ನನಗಾಗಿ ಮಾಡಿದ ಎಲ್ಲಾ ಸಹಾಯಕ್ಕೂ ಧನ್ಯವಾದಗಳು. ಶಿಕ್ಷಕರ ದಿನದ ಶುಭಾಶಯಗಳು!
► ನಿಮ್ಮನ್ನು ನನ್ನ ಗುರುವಾಗಿ ಪಡೆದಿರುವುದು ನನ್ನ ಅದೃಷ್ಟ. ನೀವು ಕಲಿಕೆಯನ್ನು ವಿನೋದ ಮತ್ತು ಉತ್ತೇಜಕವಾಗಿ ಮಾಡುತ್ತೀರಿ. ಯಾವಾಗಲೂ ನನ್ನೊಂದಿಗೆ ತಾಳ್ಮೆಯಿಂದಿದ್ದಕ್ಕಾಗಿ ಮತ್ತು ಯಶಸ್ವಿಯಾಗಲು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಶಿಕ್ಷಕರ ದಿನದ ಶುಭಾಶಯಗಳು!
► ನನ್ನ ಶಿಕ್ಷಕ, ನನ್ನ ಮಾರ್ಗದರ್ಶಕ ಮತ್ತು ನನ್ನ ಸ್ನೇಹಿತನಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನನ್ನ ಜೀವನದಲ್ಲಿ ಮುಂದೆ ಬರಲು ನೀವು ನನಗೆ ಸ್ಫೂರ್ತಿ ನೀಡಿದ್ದೀರಿ. ಶಿಕ್ಷಕರ ದಿನದ ಶುಭಾಶಯಗಳು!
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications