Tata Nexon CNG Car: ಅತೀ ಕಡಿಮೆ ಬೆಲೆಗೆ ಸಿಗಲಿದೆ ಟಾಟಾದ ಹೊಸ ಮಾದರಿ ಕಾರು-ವಿಶೇಷತೆ, ಮೈಲೇಜ್, ದರಗಳ ವಿವರ ತಿಳಿಯಿರಿ
Tata Nexon CNG Car: ಕಾಲ ಬದಲಾದಂತೆ ಜನರು ಚೇಂಜ್ ಕೇಳ್ತಾರೆ. ಹಾಗೆಯೇ ಜನರ ಅಭಿರುಚಿಗಳಿಗೆ ತಕ್ಕಂತೆ ಆಟೋಮೊಬೈಲ್ ಕ್ಷೇತ್ರದಲ್ಲೂ ಭಾರೀ ಬದಲಾವಣೆವಣೆಗಳಾಗುತ್ತಿವೆ. ಇನ್ನು ಟಾಟಾ ಸಂಸ್ಥೆಯ ಕಾರುಗಳು ತನ್ನದೇ ಆದ ಅಭಿಮಾನಿಗಳ ಬಳಗವನ್ನೇ ಹೊಂದಿದ್ದು, ಇದೀಗ ಹೊಸ ಮಾದರಿಯ ಕಾರನ್ನು ಪರಿಚಯಿಸಿದೆ. ಹಾಗಾದರೆ ಇದರ ವಿಶೇಷತೆ ಹಾಗೂ ಬೆಲೆಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಹ ಹೊಸದಾಗಿ ಬಿಡುಗಡೆ ಆಗಿರುವ ಟಾಟಾ ಸಂಸ್ಥೆಯ ಸಿಎನ್‌ಜಿ ಕಾರಿನ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನುಇಲ್ಲಿ ನೀಡಲಾಗಿದೆ ಗಮನಿಸಿ. ನೀವು ಹೊಸ ಕಾರನ್ನು ಖರೀದಿ ಮಾಡುವ ಯೋಚನೆಯಲ್ಲಿದರೆ, Tata Nexon CNG Car ಉತ್ತಮ ಆಯ್ಕೆಯಾಗಿದೆ. ಅಡ್ವಾನ್ಸ್ ಫೀಚರ್‌ಗಳ ಜೊತೆ ಹಲವು ಸೌಲಭ್ಯಗಳನ್ನು ಈ ಕಾರು ಹೊಂದಿದೆ.

ಈ ಕಾರಿನಲ್ಲಿ ನೀವು ಕನೆಕ್ಟೆಡ್ ಫೀಚರ್ಸ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸನ್‌ರೂಫ್, ಇಂಪೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ನೀವು ಕಾಣಬಹುದಾಗಿದೆ. ಹೀಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಕಾರು ನಿಮ್ಮ ಪ್ರತಿಯೊಂದು ಬೇಡಿಕೆಗಳನ್ನು ಸಹ ಪೂರೈಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
Tata Nexon CNG ಕಾರು ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿದ್ದು, ಇದು ಗ್ರಾಮೀಣ ಭಾಗದಲ್ಲಿ ಈ ಕಾರು 18 ರಿಂದ 20 ಕಿಲೋ ಮೀಟರ್‌ವರೆಗೂ ಮೈಲೇಜ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ರೇಂಜ್‌ನ ಕಾರುಗಳಲ್ಲಿ ಈ ಮೈಲೇಜ್ ಸಿಗುವುದು ತುಂಬಾ ಲಾಭದಾಯಕ ಎಂದರೇ ತಪ್ಪಾಗಲಾರದು. ಸದ್ಯ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ತುಂಬಾ ಸ್ಪರ್ಧೆ ಇದ್ದು, ಕೆಲವರು ಕಡಿಮೆ ಬೆಲೆಯ, ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನು ಹುಡುತ್ತಿರುತ್ತಾರೆ. ಇಂತಹವರಿಗೆ ಈ ಕಾರು ಉತ್ತಮ ಆಯ್ಕೆಯಾಗಿದೆ.
Tata Nexon CNG ಕಾರು ಬೇಸ್ ವೇರಿಯಂಟ್ 8.10 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಸಿಗುತ್ತದೆ. ಇನ್ನು ಈ ಕಾರಿನ ಟಾಪ್ ವೇರಿಯಂಟ್ 12.87 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಸಿಗಲಿದೆ. ಆದ್ದರಿಂದ ನೀವು ಒಂದು ವೇಳೆ ಕಡಿಮೆ ಬೆಲೆಯ, ಉತ್ತಮ ಸೌಲಭ್ಯಗಳುಳ್ಳ ಐಷಾರಾಮಿ ಕಾರುಗಳನ್ನು ಹುಡುಕುತ್ತಿದ್ದರೆ ಈ ಕಾರು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಈ ಕಾರು ಮಹೀಂದ್ರ ಎಸ್‌ಯುವಿಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿವೆ.












Click it and Unblock the Notifications