ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SPB Memory: ಕರುನಾಡಲ್ಲೇ ನನ್ನ ಮುಂದಿನ ಜನ್ಮ ಎಂದಿದ್ದ ಎಸ್‌ಪಿಬಿ ಮತ್ತೆ ಹುಟ್ಟಿಯಾರೆ?

|
Google Oneindia Kannada News

ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯ ಯಾರಿಗೆ ಗೊತ್ತಿಲ್ಲ. 1966ರಿಂದ 2020ರವರೆಗೆ ಐದು ದಶಕಗಳ ಅವರ ಸಂಗೀತ ಪ್ರಯಣದಲ್ಲಿ ಅದೆಷ್ಟು ಗೀತೆಗಳಿಗೆ ಎಸ್‌ಪಿಬಿ ಜೀವ ತುಂಬಿಲ್ಲ...!? ಎಸ್‌ಪಿ ಬಾಲಸುಬ್ರಹ್ಮಣ್ಯಂ ನಮ್ಮನಗಲಿ ಇಂದಿಗೆ ಸರಿಯಾಗಿ 2 ವರ್ಷ. 2020 ಸೆಪ್ಟೆಂಬರ್ 25ರಂದು 75ನೇ ವಯಸ್ಸಿನಲ್ಲಿ ಎಸ್‌ಪಿಬಿ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದರು.

ಎಸ್‌ಪಿಬಿ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದು ದಾಖಲೆಯೇ. ಅವರ ಹೆಚ್ಚಿನ ಹಾಡುಗಳು ಕನ್ನಡ, ತೆಲುಗು, ತಮಿಳಿನಲ್ಲಿ ಇವೆ. ಹಿಂದಿಯಲ್ಲೂ ಬಹಳ ಹಾಡು ಹಾಡಿದ್ದಾರೆ. ಸಲ್ಮಾನ್ ಖಾನ್ ಅವರ ಆರಂಭಿಕ ಸಿನಿಮಾಗಳಲ್ಲಿ ಎಸ್‌ಪಿಬಿ ಕಂಠಸಿರಿಯೇ ಇರುತ್ತಿದ್ದುದು.

ಎಸ್‌ಪಿಬಿಗೆ ಹೇರ್‌ ಕಟ್‌ ಮಾಡಿದ್ದ ಮೈಸೂರಿಗನ ನೆನಪಿನ ಮಾತು...ಎಸ್‌ಪಿಬಿಗೆ ಹೇರ್‌ ಕಟ್‌ ಮಾಡಿದ್ದ ಮೈಸೂರಿಗನ ನೆನಪಿನ ಮಾತು...

ಆಂಧ್ರದ ನೆಲ್ಲೂರಿನಲ್ಲಿ 1946 ಜೂನ್ 4ರಂದು ಜನಿಸಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ, ಹರಿಕಥಾ ದಾಸರ ಮಗ. ಆದರೆ ಅಪ್ಪನ ಆಸೆ ಈಡೇರಿಸಲು ಎಂಜಿನಿಯರಿಂಗ್ ಸೇರಿಕೊಂಡ ಅವರು ಕೊನೆಗೆ ಅಪ್ಪಿದ್ದು ಸಂಗೀತವನ್ನೇ. ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ ಎಸ್‌ಪಿಬಿ 1966 ಡಿಸೆಂಬರ್ 15ರಂದು ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದ ಹಾಡೊಂದರ ಮೂಲಕ ಬೆಳ್ಳಿ ಪರದೆಯ ಗಾಯನಕ್ಕೆ ಮೊದಲಿಟ್ಟರು. ಅವರ ಎರಡನೇ ಹಾಡು ಕನ್ನಡದ ನರಸಿಂಹರಾಜು ನಟನೆಯ ನಕ್ಕರೆ ಅದೇ ಸ್ವರ್ಗ ಚಿತ್ರದ್ದು.

SP Balasubrahmanyams Death Anniversary; Remembering His Love For Kannada

ಸಾಧನೆಗಳು ಮತ್ತು ದಾಖಲೆಗಳು:

* 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ; ಇದು ಗಿನ್ನೆಸ್ ದಾಖಲೆಯಾಗಿದೆ.
* 1981ರಲ್ಲಿ ಅವರು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ 12 ಗಂಟೆಯಲ್ಲಿ 21 ಕನ್ನಡ ಹಾಡುಗಳ ರೆಕಾರ್ಡಿಂಗ್ ಮಾಡಿದ್ದರು.
* ಒಂದೇ ದಿನದಲ್ಲಿ ತಮಿಳಿನ 19 ಹಾಡುಗಳ ರೆಕಾರ್ಡಿಂಗ್ ಮಾಡಿದ್ದರು.
* ಒಂದೇ ದಿನದಲ್ಲಿ ಹಿಂದಿಯ 16 ಹಾಡುಗಳ ರೆಕಾರ್ಡಿಂಗ್ ಮಾಡಿದ್ದರು.
* ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅವರು ಹಾಡಿದ ಹಾಡುಗಳಿಗೆ 6 ಬಾರಿ ಅವರು ಅತ್ಯುತ್ತಮ ಗಾಯಕ ಎಂದು ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದಿದ್ದಾರೆ.
* ಆಂಧ್ರದಲ್ಲಿ 25 ಬಾರಿ ಅವರು ರಾಜ್ಯ ನಂದಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
* ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
* ನಾಲ್ಕು ಗೌರವ ಡಾಕ್ಟರೇಟ್ ಪದವಿ
* ತಮಿಳುನಾಡಿನಿಂದ ಕಲೈಮಣಿ ಪ್ರಶಸ್ತಿ
* ಹಲವು ಬಾರಿ ಫಿಲಂಫೇರ್ ಪ್ರಶಸ್ತಿಗಳು.

ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಸೇರಿ ಏಳು ಮಂದಿಗೆ ಪದ್ಮವಿಭೂಷಣಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಸೇರಿ ಏಳು ಮಂದಿಗೆ ಪದ್ಮವಿಭೂಷಣ

ಕನ್ನಡದ ಮೇಲೆ ವಿಶೇಷ ಪ್ರೀತಿ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಈಟಿವಿ ಕನ್ನಡದಲ್ಲಿ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಯಾರಿಗೆ ಇಷ್ಟವಾಗುತ್ತಿರಲಿಲ್ಲ ಹೇಳಿ. ಸ್ವತಃ ದೊಡ್ಡ ಸಾಧಕನಾದರೂ ಅವರ ವಿನಮ್ರತೆ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿತ್ತು. ಕರ್ನಾಟಕದ ಜನರು, ಕನ್ನಡ ಚಿತ್ರರಂಗದ ಬಗ್ಗೆ ಅವರಿಗೆ ವಿಶೇಷ ಮಮಕಾರ ಇತ್ತು. "ಮುಂದಿನ ಜನ್ಮವೇನಾದರೂ ಇದ್ದರೆ ನಾನು ಕರುನಾಡಿನಲ್ಲೇ ಹುಟ್ಟುತ್ತೇನೆ" ಎಂದು ಎಸ್‌ಪಿಬಿ ಕೆಲವಾರು ಬಾರಿ ಹೇಳಿಕೊಂಡಿದ್ದಿದೆ.

ಅದು ಬಾಯಿಮಾತಿನ ಅಥವಾ ತೋರ್ಪಡಿಕೆಗಾಗಿ ಆಡಿದ ಮಾತುಗಳಲ್ಲ. ಮನಸಾರೆ ಅವರು ಕನ್ನಡವನ್ನು ಪ್ರೀತಿಸುತ್ತಿದ್ದರು. ಕನ್ನಡ ಹಾಡುಗಳಿಗೆ ಅವರು ಜೀವ ತುಂಬುತ್ತಿದ್ದ ರೀತಿಯಿಂದಲೇ ಅವರ ಕನ್ನಡ ವ್ಯಾಮೋಹ ಜಾಹೀರಾಗುತ್ತದೆ.

SP Balasubrahmanyams Death Anniversary; Remembering His Love For Kannada

ಎಸ್‌ಪಿಬಿ ಕನ್ನಡ ಹಾಡುಗಳು:

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅತ್ಯುತ್ತಮ ಕನ್ನಡ ಹಾಡುಗಳು ಯಾವುವು ಎಂದು ಕೇಳಿದರೆ ಉತ್ತರ ಕಷ್ಟ. ಈ ಪ್ರಶ್ನೆಯೇ ತಪ್ಪು. ಅವರು ಹಾಡಿದ ಪ್ರತಿಯೊಂದೂ ಹಾಡೂ ಅದ್ಭುತವೇ. ಅಷ್ಟರಮಟ್ಟಿಗೆ ಅವರ ಕಂಠಸಿರಿಯಲ್ಲಿ ಹಾಡುಗಳು ಜೀವಂತಿಕೆ ಪಡೆದಿದ್ದವು. ಹಾಗೂ ಕೆಲ ಮರೆಯದ ಕೆಲ ಹಾಡುಗಳು ಇವು:

* ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು (ಚಿತ್ರ: ಹೊಂಬಿಸಿಲು)
* ನಲಿವ ಗುಲಾಬಿ ಹೂವೆ (ಚಿತ್ರ: ಆಟೋ ರಾಜ)
* ಕುಚಿಕು ಕುಚಿಕು ಕುಚಿಕು (ಚಿತ್ರ: ದಿಗ್ಗಜರು
* ಕನ್ನಡ ನಾಡಿನ ಜೀವನದಿ ಈ ಕಾವೇರಿ (ಚಿತ್ರ: ಜೀವನದಿ)
* ಈ ಸುಂದರ ಬೆಳದಿಂಗಳ (ಚಿತ್ರ: ಅಮೃತವರ್ಷಿಣಿ)
* ನೂರೊಂದು ನೆನಪು ಎದೆಯಾಳದಿಂದ (ಚಿತ್ರ: ಬಂಧನ)
* ಈ ಭೂಮಿ ಬಣ್ಣದ ಬುಗುರಿ (ಚಿತ್ರ: ಮಹಾಕ್ಷತ್ರಿಯ)
* ಕೇಳಿಸದೆ ಕಲ್ಲು ಕಲ್ಲಿನಲಿ (ಚಿತ್ರ: ಬೆಳ್ಳಿ ಕಾಲುಂಗುರ)
* ಪ್ರೇಮಲೋಕದ ಪಾರಿಜಾತವೇ (ಚಿತ್ರ: ಜಾಣ)
* ಸ್ವಾತಿ ಮುತ್ತಿನ ಮಳೆ ಹನಿಯೆ (ಚಿತ್ರ: ಬಣ್ಣದ ಗೆಜ್ಜೆ)
* ನಗುವ ನಯನ (ಚಿತ್ರ: ಪಲ್ಲವಿ ಅನು ಪಲ್ಲವಿ)

(ಒನ್ಇಂಡಿಯಾ ಸುದ್ದಿ)

English summary
Legendary singer SPB left the world on 2022 September 25th. He had sung over 40,000 songs in 5 decades of his career. He had special place for Kannada, from which he sung mesmerizing songs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X