77 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲ..! ಮಳೆಕಾಡು ನದಿಯಲ್ಲಿ ಬತ್ತಿದ ಜೀವಜಲ..!

ಸದಾ ಮಳೆ ಬೀಳುವ, ಹಚ್ಚ ಹಸಿರಾದ ಕಾಡುಗಳಿಂದ ಕಂಗೊಳಿಸುವ ದಕ್ಷಿಣ ಅಮೆರಿಕದ ಮಳೆಕಾಡು ಪ್ರದೇಶ ವಿನಾಶದ ಅಂಚಿಗೆ ಬಂದು ತಲುಪಿದೆ. ಮಾನವನ ದುರಾಸೆಯಿಂದ ದಕ್ಷಿಣ ಅಮೆರಿಕದಲ್ಲಿ ಹಿಂದೆಂದೂ ಕಾಣದ ಭೀಕರ ಬರಗಾಲ ಎದುರಾಗಿದೆ. ದಕ್ಷಿಣ ಅಮೆರಿಕ ಅಂದರೆ ಬ್ರೆಜಿಲ್ ಇರುವ ಖಂಡದಲ್ಲಿ ಅಮೆಜಾನ್ ನಂತರ 2ನೇ ಅತಿ ಉದ್ದದ ನದಿ ಎನಿಸಿಕೊಂಡಿರುವ ಪರಾನಾ ಮಟ್ಟ 1944 ರ ನಂತರ ಅತ್ಯಂತ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದೆ.

ಸುಮಾರು 4 ಕೋಟಿ ಜನರು ಇದೇ ನದಿಯನ್ನು ನಂಬಿ ಬದುಕುತ್ತಿದ್ದಾರೆ. ವಾಣಿಜ್ಯ ಹಡಗು ಮತ್ತು ಮೀನುಗಾರಿಕೆಗೆ ನದಿ ದಾರಿ ಒದಗಿಸಿದೆ. ಹಾಗೇ ಹತ್ತಾರು ಕೋಟಿ ಜನರಿಗೆ ಇದೇ ನದಿಯಿಂದ ನೀರನ್ನು ಸರಬರಾಜು ಮಾಡಲಾಗುತ್ತದೆ. ಈವರೆಗೆ ಇಲ್ಲಿ ಇಂತಹ ಭೀಕರ ಬರಗಾಲ ಎದುರಾಗಿರಲಿಲ್ಲ. ಆದರೆ ಇಂದು ಮಾನವನ ದುರಾಸೆಯ ಫಲವಾಗಿ ದಕ್ಷಿಣ ಅಮೆರಿಕದಂತಹ ಮಳೆಕಾಡು ಪ್ರದೇಶಗಳು ಕೂಡ ನಲುಗಿವೆ.

ಹನಿ ಹನಿ ನೀರಿಗೂ ಪರದಾಡುವ ಪರುಸ್ಥಿತಿ ಎದುರಾಗಿದ್ದು, ಜನರಿಗೆ ಚಿಂತೆ ಶುರುವಾಗಿದೆ. ಪರಾನಾ 4,880 ಕಿ.ಮೀ. ದೂರಕ್ಕೆ ಹರಿಯುತ್ತದೆ. ಆಗ್ನೇಯ ಬ್ರೆಜಿಲ್‌ನಿಂದ ಪರಾಗ್ವೆ ಮತ್ತು ಅರ್ಜೆಂಟೀನಾ ಮೂಲಕ ದಕ್ಷಿಣಕ್ಕೆ ಈ ನದಿ ಹರಿಯುತ್ತದೆ. ಆದರೆ ಈಗ ನದಿಯಲ್ಲಿ ನೀರು ಮಾಯವಾಗುತ್ತಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

2022ಕ್ಕೂ ಪರಿಸ್ಥಿತಿ ಬದಲಾಗಲ್ಲ

2022ಕ್ಕೂ ಪರಿಸ್ಥಿತಿ ಬದಲಾಗಲ್ಲ

ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದ ಬರಗಾಲ ತೀವ್ರವಾಗಿದೆ ಎನ್ನುತ್ತಿದ್ದಾರೆ ತಜ್ಞರು. ಪರಾನಾ ನದಿಗೆ ಬಂದ ಪರಿಸ್ಥಿತಿಯೇ ಮುಂದೆ ಅಮೆಜಾನ್ ನದಿಗೂ ಬರಬಹುದು ಎಂಬ ಭಯ ಕಾಡುತ್ತಿದೆ. ದಿನದಿಂದ ದಿನಕ್ಕೆ ಅಮೆಜಾನ್ ಕಾಡನ್ನು ನಾಶ ಮಾಡುತ್ತಿರುವುದು. ಹವಾಮಾನ ವೈಪರಿತ್ಯ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೂಡಲೇ ಕ್ರಮಕೈಗೊಂಡು ಅರಣ್ಯ ನಾಶ ತಪ್ಪಿಸದೇ ಇದ್ದರೆ ಬರಗಾಲ ಮತ್ತಷ್ಟು ಕಠಿಣವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರು. ಆದ್ರೆ ದಕ್ಷಿಣ ಅಮೆರಿಕದ ರಾಜಕಾರಣಿಗಳಿಗೆ ಪ್ರಜೆಗಳ ಹಿತದೃಷ್ಟಿಗಿಂತಲೂ ಕಾಸು ಮಾಡುವ ಹುಚ್ಚು ಹೆಚ್ಚಾಗುತ್ತಿದೆ. ಇದು ಅಮೆಜಾನ್ ಅರಣ್ಯ ಪ್ರದೇಶವನ್ನು ಬಲಿಪಡೆಯುತ್ತಿದೆ.

ನೂರಾರು ಕೋಟಿ ಎಕರೆ ಅರಣ್ಯ..!

ನೂರಾರು ಕೋಟಿ ಎಕರೆ ಅರಣ್ಯ..!

ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಜಗತ್ತಿನ ಯಾವ ಭಾಗದಲ್ಲೂ ಸಿಗೋದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಹಕಾರಿಯಾಗಿರೋದು ಅಲ್ಲಿನ ವಾತಾವರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನು ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಪ್ರದೇಶ. ಇಷ್ಟು ಪ್ರಮಾಣದ ಕಾಡಿನಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿಯ ಸುತ್ತಮುತ್ತಲೂ ದಟ್ಟವಾದ ಮರ-ಗಿಡಗಳು ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿಯ ಮರಗಳು ಹಾಗೂ 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. ಕೇವಲ 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟು ಅರಣ್ಯ ಸಂಪತ್ತು ಅಡಗಿದೆ ಎಂದರೆ 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ ಜಾಗದಲ್ಲಿ ಇನ್ನೆಂತಹ ಸಂಪತ್ತು ಇರಬೇಡ ಊಹಿಸಿ.

ಕಾಡುಗಳ್ಳರಿಗೆ ಸ್ವರ್ಗ..!

ಕಾಡುಗಳ್ಳರಿಗೆ ಸ್ವರ್ಗ..!

ಅಮೆಜಾನ್‌ನಲ್ಲಿ ಅದರಲ್ಲೂ ಬ್ರೆಜಿಲ್‌ನಲ್ಲಿ ಹರಡಿರುವ ಅಮೆಜಾನ್ ಅರಣ್ಯದಲ್ಲಿ ಅಡಗಿರುವ ಸಂಪತ್ತಿನ ಮೇಲೆ ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರು ಕಣ್ಣಿಟ್ಟಿದ್ದಾರೆ. ಒಂದ್ಕಡೆ ಕೃಷಿಕರು ಕಾಡು ಕಡಿದು ವ್ಯವಸಾಯ ಮಾಡಿದರೆ, ಸ್ಮಗ್ಲರ್ಸ್ ಇದೇ ಕಾಡಲ್ಲಿ ಕೊಕೇನ್‌ ರೀತಿಯ ಮಾದಕ ವಸ್ತುಗಳನ್ನ ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಅಪಾರ ಪ್ರಮಾಣದ ಸಂಪತ್ತು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಅಮೆಜಾನ್‌ನ ಎಷ್ಟೋ ಗಣಿಗಾರಿಕೆಗಳು ಸ್ಮಗ್ಲರ್ಸ್ ಹಿಡಿತದಲ್ಲೇ ಇವೆ. ಕಳ್ಳದಾರಿ ಮೂಲಕ ಇಲ್ಲಿ ದೋಚಿದ ಅರಣ್ಯ ಸಂಪತ್ತನ್ನು ಕಾಡುಗಳ್ಳರು ನೆರೆಯ ಅಮೆರಿಕ ಸೇರಿದಂತೆ ದೂರದ ಯೂರೋಪ್ ರಾಷ್ಟ್ರಗಳಿಗೂ ಕದ್ದು ಸಾಗಿಸುತ್ತಿದ್ದಾರೆ. ಹೀಗಾಗಿ ಅಮೆಜಾನ್ ಪಾತ್ರದಲ್ಲಿ ಕತ್ತಲಾದರೆ ಸಾಕು ಜೆಸಿಬಿ, ಗರಗಸ, ಟ್ರಕ್‌ ಆರ್ಭಟ ಜೋರಾಗೇ ಇರುತ್ತೆ. ಬ್ರೆಜಿಲ್‌ನ ಸ್ಥಳೀಯ ಆಡಳಿತಗಳು ಸ್ಮಗ್ಲರ್ಸ್ ಬೆನ್ನಿಗೇ ನಿಂತಿವೆ. ಅಧಿಕಾರಿಗಳ ಕಥೆ ಕೇಳೋದೆ ಬೇಡ, ಅಷ್ಟರಮಟ್ಟಿಗೆ ಕಾಡುಗಳ್ಳರ ಹಾವಳಿ ಇದೆ. ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

Recommended Video

    Kohli ಹಾಗು Ronaldo ಭೇಟಿ ಮಾಡಿಸಲು ಮುಂದಾದ ಅಭಿಮಾನಿಗಳು | Oneindia Kannada
    ಮೂಲ ನಿವಾಸಿಗಳ ಜೀವಕ್ಕೆ ಕುತ್ತು

    ಮೂಲ ನಿವಾಸಿಗಳ ಜೀವಕ್ಕೆ ಕುತ್ತು

    ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೂ ಇಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಇನ್ನೂ ಆಧುನಿಕ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಹೊಂದದ ಕೆಲವು ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+