Smartphone: ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ Realme C63
ರಿಯಲ್‌ಮಿ C63 ನೂತನ ಫೋನ್‌ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಫೋನ್ ಭಾರತೀಯ ಪ್ರಮಾಣೀಕರಣ ವೆಬ್‌ಸೈಟ್ BIS ನಲ್ಲಿ ಕಂಡುಬಂದಿದೆ. ಈ ಸ್ಮಾರ್ಟ್‌ಫೋನ್ ಕೆಲ ದಿನಗಳ ಹಿಂದೆ ವಿಯೆಟ್ನಾಂನಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ ವಿನ್ಯಾಸವು ಸ್ಯಾಮ್‌ಸಾಂಗ್ ಗ್ಯಾಲಕ್ಸಿ S22 ಹೋಲುವಂತಿದೆ.
ರಿಯಲ್‌ಮಿ ಸಿ ಸರಣಿಯ ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ಹೊಸ ವಿನ್ಯಾಸದಲ್ಲಿ ಕಾಣಬಹುದು. ರಿಯಲ್‌ಮಿ C63 ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಈ ನೂತನ ಫೋನ್ ಭಾರತದಲ್ಲಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.

ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಅನ್ನು BIS ಅಂದರೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವೆಬ್‌ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ RMX3939 ನೊಂದಿಗೆ ನಮೂದಿಸಲಾಗಿದೆ. ರಿಯಲ್‌ಮಿ C65 ನ ಮಾದರಿ ಸಂಖ್ಯೆ RMX3910 ಆಗಿದೆ. ಆದರೆ ಬಿಐಎಸ್ ಪಟ್ಟಿಯಲ್ಲಿ ಹೊಸ ಫೋನಿನ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಈ ಫೋನ್ ಬೆಲೆ ಎಷ್ಟು?
ಈ ಬಜೆಟ್ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ವೆಗಾನ್ ಲೆದರ್ ಫಿನಿಶಿಂಗ್ ಅನ್ನು ನೀಡಬಹುದು. ಇದು ರಿಯಲ್‌ಮಿ C ಸರಣಿಯ ಮೊದಲ ಫೋನ್ ಆಗಿದೆ. ಈ ಫೋನ್‌ನ ದಪ್ಪವಿದ್ದು 7.79 ಮಿಮೀ ಮತ್ತು ಅದರ ತೂಕವು ಕೇವಲ 191 ಗ್ರಾಂ ಆಗಿರುವ ಸಾಧ್ಯತೆ ಇದೆ. ಫೋನ್‌ನ ಪ್ರೊಸೆಸರ್ ಮತ್ತು ಇತರ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ರಿಯಲ್‌ಮಿ C63 ಬೆಲೆ 15 ಸಾವಿರಕ್ಕಿಂತ ಕಡಿಮೆ ಇರುತ್ತದೆ. ಫಿಂಗರ್‌ಪ್ರಿಂಟ್ ಸೆನ್ಸರ್ ಸೈಡ್-ಮೌಂಟೆಡ್, ಫೇಸ್ ಅನ್‌ಲಾಕ್ ಅನ್ನು ಸಹ ಹೊಂದಿದೆ.

ಏನೆಲ್ಲಾ ವಿಶಷತೆಗಳನ್ನು ಹೊಂದಿದೆ?
ರಿಯಲ್‌ಮಿ C63 ಅನ್ನು ಕ್ಯಾಮೆರಾ FV-5 ಪಟ್ಟಿಗಳಲ್ಲಿ ಸೇರಿದೆ. ಈ ಸ್ಮಾರ್ಟ್‌ಫೋನ್ 50MP ಪ್ರೈಮರಿ ಕ್ಯಾಮೆರಾ ಹೊಂದಿದೆ. FCC ಪಟ್ಟಿಯ ಪ್ರಕಾರ, ಈ ರಿಯಲ್‌ಮಿ ಸ್ಮಾರ್ಟ್ಫೋನ್ ಆಂಡ್ರೈಡ್ 14 ಆಧಾರಿತ ರಿಯಲ್‌ಮಿ UI 5.0 ನೊಂದಿಗೆ ಹೊರಬರಲಿದೆ. ಫೋನಿನ ಮುಂಭಾಗದಲ್ಲಿ 8 ಮೆಗಾ ಫಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120Hz ರಿಫ್ರೆಶ್ ರೇಟ್ ಹೊಂದಿರುವ ಸಾಧ್ಯತೆ ಇದೆ. ಇದು 860 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಟೈಪ್ ಸಿ ಚಾರ್ಜ್ ಹೊಂದಿದೆ.
ಈ ಸ್ಮಾರ್ಟ್‌ಫೋನ್ ಎರಡು ವಿಧದಲ್ಲಿ ಬರಲಿದೆ. ಇದರಲ್ಲಿ 128 ಹಾಗೂ 256 ಸ್ಟೋರೇಜ್ ಹೊಂದಿದೆ. ಇನ್ನು 6 ಜಿಬಿ ಹಾಗೂ 8 ಜಿಬಿ ರ್ಯಾಮ್ ಹೊಂದಿದೆ. ಅಲ್ಲದೆ ಒಂದು ಟಿಬಿ ಎಕ್ಸ್‌ಟರ್ನಲ್ ಸ್ಟೋರೆಜ್ ಹೊಂದಿದೆ.
ರಿಯಲ್‌ಮಿ ಮೊದಲ P ಸರಣಿಯ ಸ್ಮಾರ್ಟ್‌ಫೋನ್ ರಿಯಲ್‌ಮಿ P1 ಅನ್ನು ಭಾರತದಲ್ಲಿ ಏಪ್ರಿಲ್ 15 ರಂದು ಬಿಡುಗಡೆ ಮಾಡಲಿದೆ. ರಿಯಲ್‌ಮಿ ನ ಈ ಪ್ರಬಲ ಸ್ಮಾರ್ಟ್‌ಫೋನ್ 5000ಎಂಎಎಚ್ ಬ್ಯಾಟರಿ, 45 ವ್ಯಾಟ್ ವೇಗದ ಚಾರ್ಜಿಂಗ್, ಬಾಗಿದ ಅಮೋಲ್ಡ್ ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಕೆನಕ್ಟಿವಿಟಿ
ಜಿಪಿಆರ್‌ಎಸ್ ಇದೆ
ವೈಫೈ 802.11 ಎಸಿ
ಬ್ಲ್ಯೂಟುತ್ 5.0
ಯುಎಸ್‌ಬಿ ಸಿ ಟೈಪ್ ಚಾರ್ಜರ್
ನೆಟ್‌ವರ್ಕ್ 5ಜಿ/4ಜಿ ಡ್ಯೂಯಲ್ ವೋಲ್ಟ್/












Click it and Unblock the Notifications