ಕೋಳಿಯ ಮೇಲೆ ಮರಿನಾಯಿ ಸವಾರಿ: ಬಲೂನ್‌ನೊಂದಿಗೆ ಬೆಕ್ಕುಗಳ ಆಟ- ಹೃದಯ ಕದ್ದ ವಿಡಿಯೋಗಳು
ಇಂಟರ್‌ನೆಟ್‌ನಲ್ಲಿ ಕೋಳಿ ಮತ್ತು ಪುಟ್ಟ ನಾಯಿಮರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು @gsd_my_soul ಎಂಬ ಪುಟದಿಂದ Twitter ಗೆ ಪೋಸ್ಟ್ ಮಾಡಲಾಗಿದೆ. ಕಿರು ಕ್ಲಿಪ್ ಇದುವರೆಗೆ ಸುಮಾರು 267k ವೀಕ್ಷಣೆಗಳೊಂದಿಗೆ ವೇಗವಾಗಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೊವು ಕೋಳಿಯ ಮೇಲೆ ನಾಯಿ ಸವಾರಿ ಮಾಡುವುದನ್ನು ಒಳಗೊಂಡಿದೆ. ಈ ವಿಡಿಯೋ ತುಂಬಾ ಮುದ್ದಾಗಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಇದೀಗ ವೈರಲ್ ವೀಡಿಯೊದಲ್ಲಿ, ನಾಯಿಮರಿ ಕೋಳಿ ಮೇಲೆ ಏರುವುದನ್ನು ಕಾಣಬಹುದು. ವಿಡಿಯೊ ಮುಂದುವರಿದಂತೆ, ನಾಯಿಮರಿ ಕೋಳಿಯ ಮೇಲೆ ಸವಾರಿ ಮಾಡುವುದನ್ನು ಕಾಣಬಹುದು. ಈ ವಿಡಿಯೊದ ನೋಡುಗರ ಹೃದಯವನ್ನು ಕದಿಯುತ್ತಿದೆ. ನಮ್ಮಂತೆಯೇ ನೀವು ಕ್ಲಿಪ್ ಅನ್ನು ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ವಿಡಿಯೊ ಸುಮಾರು 6 ಸಾವಿರ ಇಷ್ಟಗಳನ್ನು ಸಂಗ್ರಹಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ನೆಟಿಜನ್‌ಗಳು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. "ಇದು ತುಂಬಾ ಮುದ್ದಾಗಿದೆ" ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಸೂಪರ್ ಕ್ಯೂಟ್" ಎಂದು ಕಾಮೆಂಟ್ ಮಾಡಿದ್ದಾರೆ.
Tap❤️& Comment on this photo if you love German shepherd 💝 pic.twitter.com/cGXlUx19CS
— Eno (@gsd_my_soul) October 2, 2022
ಮತ್ತೊಂದು cute ವಿಡಿಯೋ
ಬಲೂನ್‌ನೊಂದಿಗೆ ಆಟವಾಡುವ ಬೆಕ್ಕುಗಳ ಮುದ್ದಾದ ವಿಡಿಯೊ ವೈರಲ್ ಆಗಿದೆ. ಎರಡು ಬೆಕ್ಕಿನ ಮರಿಗಳು ಬಲೂನಿನೊಂದಿಗೆ ಆಟವಾಡುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಈ ಮುದ್ದಾದ ದೃಶ್ಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

Why sho cuteeeeeeeeee https://t.co/O1gIgmLALK
— نورهزواني~ (@Inawzahron) October 5, 2022
ಈಗ ವೈರಲ್ ಆಗಿರುವ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಬಲೂನ್‌ನೊಂದಿಗೆ ಆಟವಾಡುವ ಕಿಟೆನ್ಸ್," ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೊವನ್ನು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.












Click it and Unblock the Notifications