Video: ಸೀರೆಯುಟ್ಟ ಯುವತಿ ಸ್ಕೇಟಿಂಗ್ ಶೈಲಿ ಮೆಚ್ಚಿದ ನೆಟ್ಟಿಗರು

ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ತೊಡುವುದು ಹೆಣ್ಣಿನ ಗೌರವವನ್ನು ಹೆಚ್ಚಿಸುತ್ತದೆ. ಆದರೆ ಆಧುನಿಕ ಉಡುಪುಗಳಿಂದಾಗಿ ಸೀರೆ ಬಗ್ಗೆ ಹಲವರು ಕೆಲ ಆರೋಪಗಳನ್ನು ಮಾಡಿರುವುದಿದೆ. ಸೀರೆ ಉಟ್ಟರೆ ಯಾವುದೇ ಕೆಲಸಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಬಹುತೇಕರ ವಾದ. ಆದರೆ ಸೀರೆ ತೊಟ್ಟು ಏನೆಲ್ಲಾ ಕಸರತ್ತು ಮಾಡಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ನೋಡಲು ಸಿಗುತ್ತವೆ. ಇದಕ್ಕೆ ಸಾಕ್ಷಿಯಾಗಿ ಮತ್ತೊಂದು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ.

ಸಾಮಾನ್ಯವಾಗಿ ನೀವು ಸ್ಕೇಟಿಂಗ್ ಮಾಡುವುದನ್ನು ನೋಡಿರುತ್ತೀರಿ. ಸ್ಕೇಟಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ವಿಪರೀತ ತಾಳ್ಮೆಯ ಅಗತ್ಯವಿರುತ್ತದೆ. ಇದಕ್ಕೆ ತಕ್ಕನಾದ ಉಡುಪು ಕೂಡ ಇದಕ್ಕೆ ಅಷ್ಟೇ ಮುಖ್ಯ. ಯಾಕೆಂದರೆ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು ಬರಬಹುದು. ತುಂಬಾ ಸುಲಭವಾಗಿ ಸ್ಕೇಟಿಂಗ್ ಮಾಡಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ತರಬೇತಿ ಮುಖ್ಯವಾಗುತ್ತದೆ. ಹೀಗಿರುವಾಗ ಲಾರಿಸ್ಸಾ ಡಿ'ಸಾ ಎಂಬುವವರು ಸೀರೆಯನ್ನುಟ್ಟು ಸ್ಕೇಟಿಂಗ್ ಮಾಡಿದ್ದಾರೆ. ಕೇರಳದ ಹಚ್ಚ ಹಸಿರಿನ ಮಾರ್ಗಗಳಲ್ಲಿ ಲಾರಿಸ್ಸಾ ಸ್ಕೇಟ್‌ಬೋರ್ಡ್‌ನಲ್ಲಿ ಚಲಿಸಿದ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಲಾರಿಸ್ಸಾ ಬಿಳಿ ಕಾಟನ್ ಸೀರೆಯನ್ನು ಧರಿಸಿ ಮತ್ತು ಗಜ್ರಾದಿಂದ ಅಲಂಕರಿಸಲ್ಪಟ್ಟ ಅಚ್ಚುಕಟ್ಟಾದ ಬನ್‌ನಲ್ಲಿ ತನ್ನ ಕೂದಲನ್ನು ಕಟ್ಟಿಕೊಂಡಿರುವುದನ್ನು ಕಾಣಬಹುದು. ಈ ಸುಂದರವಾದ ಉಡುಪಿನಲ್ಲಿ ಸ್ಕೇಟಿಂಗ್ ಮಾಡುವ ಅವರ ಮಾರ್ಗ ನೋಡುಗರನ್ನು ಆಶ್ಚರ್ಯಚಕಿತಗೊಳಿಸುತ್ತದೆ.

Skating in Saree: So beautiful, says Internet

"ನಾನು ಇದನ್ನು ಮಾಡುವಾಗ ಮಾರ್ಗ ಮದ್ಯೆ ಸಾಕಷ್ಟು ಪ್ರೇಕ್ಷಕರನ್ನು ಹೊಂದಿದ್ದೆ. ಕೆಲವರು ಸೆಲ್ಫಿ ತೆಗೆದುಕೊಂಡರು. ಕೆಲವರು ಮೋಜು ಮಾಡಿದರು. ಸೀರೆ ಉಟ್ಟಿರುವಾಗ ಲಾಂಗ್‌ಬೋರ್ಡ್ ಮಾಡುವುದು ಸುಲಭವಲ್ಲ" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕ್ಲಿಪ್ 127k ಲೈಕ್‌ಗಳನ್ನು ಮತ್ತು ಅಧಿಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಲಾರಿಸ್ಸಾ ಅವರ ಅದ್ಭುತ ಪ್ರತಿಭೆಯನ್ನು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+