ಎಸ್‌ಸಿಒ ಶೃಂಗಸಭೆ 2022: ಆರು ವರ್ಷ ಬಳಿಕ ಭಾರತ-ಪಾಕ್ ಪ್ರಧಾನಿಗಳ ಭೇಟಿ?
ನವದೆಹಲಿ, ಜುಲೈ 22: ಶಾಂಘೈ ಸಹಕಾರ ಸಂಸ್ಥಯ ಶೃಂಗಸಭೆ 2022 ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ಮತ್ತು ಪಾಕಿಸ್ತಾನದ ಪ್ರಧಾನಿ 6 ವರ್ಷಗಳ ಕಾಲ ಒಂದೇ ವೇದಿಕೆಯಲ್ಲಿ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ನಡುವೆಯೂ ಸಭೆ ನಡೆಯಲಿದೆ. ಆದರೆ, ಈ ಬಗ್ಗೆ ಸರ್ಕಾರ ಅಥವಾ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆಗಳು ಕೇಳಿ ಬಂದಿಲ್ಲ.
ಶಾಂಘೈ ಸಹಕಾರ ಸಂಘಟನೆಯ (SCO)ವಾರ್ಷಿಕ ಶೃಂಗಸಭೆಯು ಸೆಪ್ಟೆಂಬರ್ 15-16ರಂದು ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಭೇಟಿಯಾಗಬಹುದು. ವಾಸ್ತವವಾಗಿ, ಶಾಂಘೈ ಸಹಕಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಅವರು ಇಂದಿನಿಂದ ಪಾಕಿಸ್ತಾನಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಅವರು ತಮ್ಮ ಭೇಟಿಯ ಸಮಯದಲ್ಲಿ ಎಸ್‌ಸಿಒ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಆಹ್ವಾನಿಸಲಿದ್ದಾರೆ.

ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ಈ ಸಮಾವೇಶದಲ್ಲಿ ಭಾರತದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಭಾರತದ ಪ್ರಧಾನಿ 6 ವರ್ಷಗಳ ನಂತರ ಭೇಟಿಯಾಗಬಹುದು ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳ ನಡುವೆ ಸಭೆಯೂ ನಡೆಯಲಿದೆ.

ಭಾರತದ ಕಡೆಯಿಂದ ಯಾವುದೇ ಪ್ರಸ್ತಾಪವಿಲ್ಲ
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇದುವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಡುವೆ ಯಾವುದೇ ಭೇಟಿ ನಡೆದಿಲ್ಲ, ಏಕೆಂದರೆ ಭಾರತದ ಕಡೆಯಿಂದ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ. ಭಾರತದಿಂದ ಅಂತಹ ಪ್ರಸ್ತಾಪ ಬಂದರೆ, ಪಾಕಿಸ್ತಾನವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ.

ಏನಿದು ಶಾಂಘೈ ಸಹಕಾರ ಸಂಘಟನೆ
ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನ್ ಎಸ್‌ಸಿಒನ ಖಾಯಂ ಸದಸ್ಯರಾಗಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಬಡತನ ಮತ್ತು ಆಹಾರ ಭದ್ರತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.ಪಿಎಂ ಮೋದಿ -ಪಾಕ್ ಪ್ರಧಾನಿ ಷರೀಫ್ ಭೇಟಿಯಾಗಬಹುದು.

ಮೋದಿ - ಷರೀಫ್ ಭೇಟಿ ಸಾಧ್ಯತೆ
ಎಸ್‌ಸಿಒ ಶೃಂಗಸಭೆ ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿದೆ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಮ್ಮೇಳನ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಡುವೆ ಸಭೆ ನಡೆಯಲಿದೆ ಎಂದು ಹಬ್ಬಿರುವ ಈ ಮಾಹಿತಿ ಸಾಕಷ್ಟು ಕಾತುರ ಮೂಡಿಸಿದೆ. ಇನ್ನು ಎಸ್‌ಸಿಒ ಶೃಂಗಸಭಯಲ್ಲಿ ಅನೀಕ್ಷಿತವಾಗಿ ಭೇಟಿಯಾದರು ಅದು ಸಹಜವಾಗಿ ಸಭೆಯೊಳಗಿನ ಭೇಟಿಯಾಗಬುದು ಎಂದು ವರದಿಯಾಗಿದೆ.












Click it and Unblock the Notifications