ಎಚ್ಚರ.. ಎಚ್ಚರ.. 'ಮಲ'ದ ಮೂಲಕವೂ ಹರಡಬಹುದು ಕೊರೊನಾ!

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನೀವು ಮಲ ವಿಸರ್ಜನೆ ಮಾಡಿದ ಬಳಿಕ ಫ್ಲಶ್ ಮಾಡುವಾಗ ತಪ್ಪದೆ ಕಮೋಡ್ ಲಿಡ್ ಕ್ಲೋಸ್ ಮಾಡಿ. ಯಾಕಂದ್ರೆ, ಸಂಶೋಧಕರ ತಂಡ ಸಲ್ಲಿಸಿರುವ ಒಂದು ಅಧ್ಯಯನದ ಪ್ರಕಾರ.. ಫ್ಲಶ್ ಮಾಡುವ ಸಂದರ್ಭದಲ್ಲಿ ನೀರು ಮತ್ತು ಗಾಳಿಯಲ್ಲಿ ಮಿಶ್ರಣಗೊಳ್ಳುವ 'ಮಲ'ದ ಸಣ್ಣ ಕಣಗಳಿಂದ ಇತರರಿಗೆ ಕೊರೊನಾ ವೈರಸ್ ಹರಡಬಹುದು.!

Recommended Video

      ಶೋಚನೀಯವಾಗಿದೆ ಬೀದಿ ವ್ಯಾಪಾರಿಗಳ ಬದುಕು..! | Oneindia Kannada

      ಸೋಂಕು ನಿಯಂತ್ರಣ ಮತ್ತು ಸಾಂಕ್ರಾಮಿಕ ರೋಗ ಶಾಸ್ತ್ರದ ತಜ್ಞರು ಪ್ರಕಟ ಮಾಡಿರುವ ಅಧ್ಯಯನದ ಪ್ರಕಾರ, ಗಾಳಿಯಲ್ಲಿ ಮಿಶ್ರಣಗೊಳ್ಳುವ (aerosolized) ಮಲದಿಂದ ಕೊರೊನಾ ವೈರಸ್ ಸೋಂಕು ಹಬ್ಬಬಹುದು ಎಂದು ಫೋರ್ಬ್ಸ್ ವರದಿ ಮಾಡಿದೆ.

      ಫ್ಲಶ್ ಮಾಡುವ ಮೂಲಕ ಉಂಟಾಗುವ Toilet Plume ನಿಂದ 'ಮಲ'ದ ಸಣ್ಣ ಕಣಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಹೀಗಾಗಿ, ಕಮೋಡ್ ನ ಲಿಡ್ ಮುಚ್ಚಿ, ಫ್ಲಶ್ ಮಾಡಿ ಎಂದು ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದಾರೆ. ಕಮೋಡ್ ಲಿಡ್ ಮುಚ್ಚುವ ಮೂಲಕ 80% ರಷ್ಟು 'ಮಲ'ದ ಕಣಗಳು ಗಾಳಿಯಲ್ಲಿ ಸೇರುವುದನ್ನು ತಪ್ಪಿಸುತ್ತದೆ ಅಂತ ಡಾ.ಕಿಂಗ್ಯಾನ್ ಚೆನ್ ಹೇಳಿದ್ದಾರೆ.

      ಮಲದ ಮೂಲಕ ಹೊರಗೆ ಬರುತ್ತವೆ

      ಮಲದ ಮೂಲಕ ಹೊರಗೆ ಬರುತ್ತವೆ

      ಕೋವಿಡ್-19 ರೋಗಿಗಳ ಪೈಕಿ ಕೆಲವರಲ್ಲಿ ಗ್ಯಾಸ್ಟ್ರೋ-ಇನ್ಟಸ್ಟೈನಲ್ ಟ್ರಾಕ್ಟ್ ನಲ್ಲಿ ನೋವೆಲ್ ಕೊರೊನಾ ವೈರಸ್ ಸೇರಿಕೊಂಡಿರುತ್ತದೆ. ಅವು ಮಲದ ಮೂಲಕ ಹೊರಗೆ ಬರುತ್ತವೆ ಎಂದು ನೆದರ್ಲ್ಯಾಂಡ್ಸ್ ನ ರಾಷ್ಟ್ರೀಯ ಆರೋಗ್ಯ ಮತ್ತು ಪರಿಸರ ಸಂಸ್ಥೆ ತಿಳಿಸಿತ್ತು.

      ತ್ಯಾಜ್ಯ ನೀರಿನಲ್ಲಿ ಕೊರೊನಾ

      ತ್ಯಾಜ್ಯ ನೀರಿನಲ್ಲಿ ಕೊರೊನಾ

      ನೆದರ್ಲ್ಯಾಂಡ್ಸ್ ನಲ್ಲಿ ಮೊಟ್ಟಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಪಟ್ಟ ನಾಲ್ಕು ದಿನಗಳ ನಂತರ ತೆಗೆದ ತ್ಯಾಜ್ಯ ನೀರಿನ ಮಾದರಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು ಎಂದು ನೆದರ್ಲ್ಯಾಂಡ್ಸ್ ನ ರಾಷ್ಟ್ರೀಯ ಆರೋಗ್ಯ ಮತ್ತು ಪರಿಸರ ಸಂಸ್ಥೆ ತಿಳಿಸಿದೆ.

      ಸಮುದಾಯಗಳಲ್ಲಿ ಕೊರೊನಾ ಹರಡುವಿಕೆ

      ಸಮುದಾಯಗಳಲ್ಲಿ ಕೊರೊನಾ ಹರಡುವಿಕೆ

      ಸಮುದಾಯಗಳಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಅಳೆಯಲು ತ್ಯಾಜ್ಯ ನೀರು ಮತ್ತು ಒಳಚರಂಡಿಯನ್ನು ಪರೀಕ್ಷಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. 'ಮಲ'ದಲ್ಲಿ ಕೊರೊನಾ ವೈರಸ್ ಕುರುಹನ್ನು ಪತ್ತೆಹಚ್ಚಲು ಯು.ಎಸ್.ಎ ನಲ್ಲಿನ ಸ್ಥಳೀಯ ಸರ್ಕಾರ ನಿರ್ಧರಿಸಿದೆ. ನ್ಯೂ ಕ್ಯಾಸಲ್ ಕೌಂಟಿಯಲ್ಲಿ ಬಯೋಬಾಟ್ ಸಹಯೋಗದೊಂದಿಗೆ ತ್ಯಾಜ್ಯ ನೀರನ್ನು ಪರೀಕ್ಷಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

      ಸದ್ಯಕ್ಕೆ ಪ್ರಶ್ನಾರ್ಥಕ

      ಸದ್ಯಕ್ಕೆ ಪ್ರಶ್ನಾರ್ಥಕ

      ಕೋವಿಡ್-19 ನಿಂದಾಗಿ ಹಲವು ದೇಶಗಳ ವಿಜ್ಞಾನಿಗಳು ತಮ್ಮ ಒಳಚರಂಡಿ ವ್ಯವಸ್ಥೆಯನ್ನು ಪರೀಕ್ಷೆಗೆ ಬಳಸುತ್ತಿದ್ದಾರೆ. ಆದರೆ, ಕೊರೊನಾ ವೈರಸ್ ಸಾಮುದಾಯಿಕ ಮಟ್ಟದಲ್ಲಿ ಹರಡಲು ತ್ಯಾಜ್ಯ ನೀರಿನ ಮಾದರಿ ಎಷ್ಟು ನಿಖರವಾಗಿ ಪ್ರತಿಬಿಂಬಿಸುತ್ತವೆ ಎಂಬುದೇ ಸದ್ಯಕ್ಕೆ ಪ್ರಶ್ನಾರ್ಥಕವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+