ಬೆಟ್ಟಿಂಗ್ ಬಜಾರಿನಲ್ಲಿ ತ್ರಿಶತಕ ಬಾರಿಸಿದ ಬಿಜೆಪಿ, ಕೈ ಥಕ ಥಕ!

Recommended Video

      Lok Sabha Elections 2019: ಬೆಟ್ಟಿಂಗ್ ನಲ್ಲೂ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವು ಸಾಧಿಸಲಿದೆ

      2019ರ ಲೋಕಸಭೆ ಚುನಾವಣೆಗಾಗಿ ವಿವಿಧ ಸಂಸ್ಥೆಗಳು ಕಾಲ ಕಾಲಕ್ಕೆ ಸಮೀಕ್ಷೆಗಳು, ಜನಾಭಿಪ್ರಾಯಗಳನ್ನು ಸಂಗ್ರಹಿಸಿ ನೀಡುತ್ತಿವೆ. ಈ ನಡುವೆ ಸಾಮಾನಾಂತರವಾಗಿ ಬೆಟ್ಟಿಂಗ್ ಬಜಾರಿನಲ್ಲಿ ಯಾರ ಅಲೆ ಇದೆ ಎಂಬುದರ ಬಗ್ಗೆ ಬಾಜಿ ಕಟ್ಟುವುದು ನಡೆಯುತ್ತಲೇ ಇದೆ. ಮೇ ತಿಂಗಳ ಆರಂಭದಲ್ಲಿ ಬಂದಿರುವ ವರದಿಯಂತೆ ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿ ತ್ರಿಶತಕ ಬಾರಿಸಲಿದೆ.

      ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಮೋದಿ ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟುವಂತೆ ಮಾಡಿದೆ. ಮಾದ್ಯಮಗಳ ಸಮೀಕ್ಷಾ ವರದಿ ಎಲ್ಲವನ್ನು ಗಮನಿಸಿ ಬೆಟ್ಟಿಂಗ್ ನಡೆಸಲಾಗುತ್ತದೆ.

      ಮಾರ್ಚ್ ತಿಂಗಳಿನಲ್ಲಿ ಬಂದ ವರದಿಯಂತೆ ಬಿಜೆಪಿ ನೇತೃತ್ವದ ಎನ್ಡಿಎಗೆ 300ರಿಂದ 310 ಸ್ಥಾನಗಳು ಸುಲಭವಾಗಿ ಲಭಿಸಲಿವೆ. ರಾಜಸ್ಥಾನದಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿಗೆ 18 ರಿಂದ 20 ಸ್ಥಾನಗಳು ಸಿಗಲಿವೆ ಎಂದು ಬೆಟ್ಟಿಂಗ್ ಮಾರುಕಟ್ಟೆ ಸುದ್ದಿ ಕೊಟ್ಟಿತ್ತು. ಈಗ ಬಿಜೆಪಿಗೆ 250ರ ತನಕ ಸೀಟು ಸಿಗಲಿದ್ದು, ಒಟ್ಟಾರೆ, ಎನ್ಡಿಎಗೆ 300 ಸ್ಥಾನ ಖಚಿತ ಎನ್ನಲಾಗಿದೆ.

      ಬಿಜೆಪಿ ತ್ರಿಶತಕ ಹೇಗೆ?

      ಬಿಜೆಪಿ ತ್ರಿಶತಕ ಹೇಗೆ?

      543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿಗೆ 240 ರಿಂದ 250 ತನಕ ಸ್ಥಾನಗಳು ಲಭಿಸಲಿವೆ ಕಾಂಗ್ರೆಸ್ಸಿಗೆ 77 ಸ್ಥಾನಗಳು ಲಭಿಸಲಿವೆ. ಒಟ್ಟಾರೆ, 55 ಸ್ಥಾನಗಳನ್ನು ಮೈತ್ರಿ ಪಕ್ಷಗಳಿಂದ ಪಡೆದುಕೊಳ್ಳಬೇಕಿದೆ. ಹೀಗಾಗಿ ಬಿಜೆಪಿ ಮ್ಯಾಜಿಕ್ ನಂಬರ್ 272 ದಾಟಿ, 300 ಸ್ಥಾನಗಳ ಗಡಿಯನ್ನು ದಾಟಬಹುದು ಎಂದು ವರದಿ ಹೇಳಿದೆ.

      ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ

      ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ

      2014ಕ್ಕೆ ಹೋಲಿಸಿದರೆ ಕಾಂಗ್ರೆಸ್ ಉತ್ತಮ ಫಲಿತಾಂಶ ನೀಡಿದರೂ ನೂರರ ಗಡಿ ದಾಟಲು ಸಾಧ್ಯವಿಲ್ಲ.ರಾಹುಲ್ ಗಾಂಧಿ ನೇತೃತ್ವದಲ್ಲಿ 76 ರಿಂದ 79 ಸ್ಥಾನ ಗಾಳಿಸಬಹುದು. 2014ರಲ್ಲಿ ಕೇವಲ 44 ಸ್ಥಾನಗಳಿಸಿತ್ತು. ಮಹಾಘಟಬಂದನ್ ಗೆ ಹೆಚ್ಚಿನ ಸ್ಥಾನ ಲಭಿಸದ ಕಾರಣ, 272 ಮ್ಯಾಜಿಕ್ ನಂಬರ್ ಸಮೀಪಕ್ಕೆ ಹೋಗುವುದು ಕಷ್ಟ ಎನ್ನಲಾಗಿದೆ.

      ಉತ್ತರಪ್ರದೇಶದಲ್ಲಿ ಬಿಜೆಪಿಗೆ 41 ಸ್ಥಾನ

      ಉತ್ತರಪ್ರದೇಶದಲ್ಲಿ ಬಿಜೆಪಿಗೆ 41 ಸ್ಥಾನ

      ಉತ್ತಪ್ರದೇಶದಲ್ಲಿ ಬಿಜೆಪಿಗೆ 41 ಸ್ಥಾನ(2014ರಲ್ಲಿ 71), ಮಧ್ಯಪ್ರದೇಶದಲ್ಲಿ 20 ರಿಂದ 22 ಸ್ಥಾನ, ಗುಜರಾತಿನಲ್ಲಿ 22 ರಿಂದ 24, ಬಿಹಾರ 12 ರಿಂದ 14,ಪಶ್ಚಿಮ ಬಂಗಾಲ 8ರಿಂದ 11, ಹರ್ಯಾಣ 7 ರಿಂದ 9, ದೆಹಲಿ 5 ರಿಂದ 7, ಮಹಾರಾಷ್ಟ್ರಾದಲ್ಲಿ 31 ರಿಂದ 34 ಸ್ಥಾನಗಳಿಸಬಹುದು ಎಂದು ಬುಕ್ಕಿಗಳು ಭವಿಷ್ಯ ಹೇಳಿದ್ದಾರೆ.

      ಸಮೀಕ್ಷೆಗಳ ಸಮೀಕ್ಷೆ ಸರಾಸರಿ

      ಸಮೀಕ್ಷೆಗಳ ಸಮೀಕ್ಷೆ ಸರಾಸರಿ

      ಸಮೀಕ್ಷೆಗಳ ಸಮೀಕ್ಷೆ ಸರಾಸರಿಯಂತೆ ಎನ್ಡಿಎಗೆ 277 ಸ್ಥಾನ ಸಿಗಲಿದೆ. 2014ರಲ್ಲಿ 336 ಸ್ಥಾನಗಳಿಸಿತ್ತು, ಬಿಜೆಪಿ 282 ಸ್ಥಾನಗಳಿಸಿತ್ತು.ಆದರೆ, 2014ರಲ್ಲಿದ್ದ ಮೋದಿ ಅಲೆ ಈ ಬಾರಿ ಕ್ಷೀಣವಾಗಿದ್ದು, ಹೆಚ್ಚಿನ ಪ್ರಭಾವ ಬೀರುವುದಿಲ್ಲ, ಆದರೆ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಲಿದೆ ಎಂಬ ವರದಿ ಬಂದಿದೆ.

      3 ಹಂತದ ಚುನಾವಣೆ ನಂತರದ ವರದಿ

      3 ಹಂತದ ಚುನಾವಣೆ ನಂತರದ ವರದಿ

      ಲೋಕಸಭೆ ಚುನಾವಣೆ 2019ರ ಮೊದಲ ಮೂರು ಹಂತದ ಚುನಾವಣೆ ಬಳಿಕ, 303 ಸ್ಥಾನಕ್ಕೆ ನಡೆದ ಬಳಿಕ ಬಂದ ವರದಿ ಇದಾಗಿದೆ. ಏಪ್ರಿಲ್ 11ರಿಂದ ಮೇ 19ರ ವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+