Samsung: ಜುಲೈನಲ್ಲಿ ಸ್ಯಾಮ್‌ಸಾಂಗ್ ಮತ್ತೊಂದು ಪೋಲ್ಡ್ ಹಾಗೂ ಫ್ಲಿಪ್ ಫೋನ್ ಲಾಂಚ್ ಸಾಧ್ಯತೆ
ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಸ್ಯಾಮ್‌ಸಂಗ್ ಕಂಪನಿಯು ತನ್ನ ಇನ್ನೊಂದು ಪ್ರೈಮ್ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಯಾಮ್‌ಸಂಗ್ ಕಂಪನಿ ತನ್ನ ಮೊಬೈಲ್‌ಗಳನ್ನು ಅಚ್ಚುಕಟ್ಟಾಗಿ ಡಿಜೈನ್ ಮಾಡಿದೆ. ಈ ಕಂಪನಿಯಲ್ಲಿ ಗ್ಯಾಲಕ್ಸಿ ಎಸ್ 24 ಸರಣಿಯಂತಹ AI ಫೀಚರ್‌ಗಳನ್ನು ಹೊಂದಿದ್ದು, ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿದೆ.
ಸ್ಯಾಮ್‌ಸಂಗ್ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಈ ಮೊಬೈಲ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಕಂಪನಿಯನ್ನು ಜುಲೈನಲ್ಲಿ ಆಯೋಜಿಸಬಹುದು. ಈ ವೇಳೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 6 ಮತ್ತು ಗ್ಯಾಲಕ್ಸಿ ಜೆಡ್ ಫ್ಲಿಪ್ 6 ಜೊತೆಗೆ ಗ್ಯಾಲಕ್ಸಿ ರಿಂಗ್‌ನ್ನು ಲೋಕಾಪಾರ್ಣೆ ಮಾಡುವ ಸಾಧ್ಯತೆ ಇದೆ.

ಪ್ಯಾರೀಸ್‌ನಲ್ಲಿ ಬಿಡುಗಡೆ
ಸ್ಯಾಮ್‌ಸಂಗ್ ಕಂಪನಿಯ ಜುಲೈ 10 ರಂದು ಆಯೋಜಿಸುವ ಸಾಧ್ಯತೆ ಇದೆ. ಕಂಪನಿಯು ಈ ಕಾರ್ಯಕ್ರಮವನ್ನು ಪ್ಯಾರೀಸ್‌ನಲ್ಲಿ ನಡೆಸುವ ಸಾಧ್ಯತೆ ಇದೆ. ಇನ್ನು ಕಂಪನಿಯು ಪ್ಯಾರೀಸ್‌ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಒಂದು ಕಾರಣವಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಪ್ಯಾರೀಸ್‌ನಲ್ಲಿ ನಡೆಸಲಾಗುತ್ತಿದೆ. ಒಲಿಂಪಿಕ್ಸ್ ಜುಲೈ 26 ರಿಂದ ಆಯೋಜಿಸಲಾಗುತ್ತದೆ. ಸ್ಯಾಮ್‌ಸಂಗ್ ತನ್ನ ಮುಂಬರುವ ಫೋಲ್ಡಬಲ್ ಫೋನ್‌ನಲ್ಲಿ ಹೊಸ ಮಾದರಿಯನ್ನು ಸಹ ಬಿಡುಗಡೆ ಮಾಡಬಹುದು.
ಈ ವರ್ಷ ಸ್ಯಾಮ್‌ಸಂಗ್ ಕಂಪನಿ Galaxy Z Fold 6 Ultra ಬಿಡುಗಡೆ ಮಾಡಬಹುದು. ಈ ಮೊಬೈಲ್ ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದಲ್ಲಿ ಈ ಫೋನ್ ಅಪ್‌ಗ್ರೇಡ್ ಹಾರ್ಡ್‌ವೇರ್ ಜೊತೆಗೆ ಬರಲಿದೆ. ಈ ಸ್ಟ್ಯಾಂಡರ್ಡ್ ಮೊಬೈಲ್ ಆಯ್ದ ದೇಶಗಳಲ್ಲಿ ಮಾತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮತ್ತೇನು ಲಾಂಚ್ ಮಾಡಬಹುದು
ಸ್ಯಾಮ್‌ಸಂಗ್‌ನ ಈ ಮೆಗಾ ಲಾಂಚ್ ಈವೆಂಟ್‌ನಲ್ಲಿ ಗ್ಯಾಲಕ್ಸಿ ವಾಚ್ 7 ಸರಣಿಯನ್ನು ಬಿಡುಗಡೆ ಮಾಡುವ ಸಂಭವವಿದೆ. ಇದೇ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 10 ಸರಣಿಯನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಈ ವರ್ಷದ ಆರಂಭದಲ್ಲಿ ನಡೆದ Galaxy Unpacked ಸಮಾರಂಭದಲ್ಲಿ, ಕಂಪನಿಯು Galaxy AI ಹೊಂದಿದ ಪ್ರೀಮಿಯಂ ಸ್ಮಾರ್ಟ್‌ಫೋನ್ ಸರಣಿಯನ್ನು ಮೊದಲ ಬಾರಿಗೆ ಪರಿಚಯಿಸಿತ್ತು.
ಫೀಚರ್ಸ್‌ನಲ್ಲಿ ಏನೆಲ್ಲಾ ವಿಶೇಷತೆ ಇದೆ?
ಸೋರಿಕೆ ಆದ ಮಾಹಿತಿಯ ಪ್ರಕಾರ ಈ ಮೊಬೈಲ್ ಜೂಲೈ- ಅಗಸ್ಟ್ 2024ರಲ್ಲಿ ಲಾಂಚ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ಈ ಫೋನ್ 6.7 ಇಂಚ್ ಇಂಟಿರಿಯರ್ ಡಿಸ್‌ಪ್ಲೇ ಹಾಗೂ 3.9 ಇಂಚ್ ಕವರ್ ಡಿಸ್‌ಪ್ಲೇ ಹೊಂದಿದೆ. ಈ ಮೊಬೈಲ್ ಕ್ಯಾಮೆರಾ 50 ಮೆಗಾ ಫಿಕ್ಸಲ್ ಅಲ್ಟ್ರಾ ವೈಡ್ ಲೆನ್ಸ್ ಹೊಂದಿರುವ ಸಾಧ್ಯತೆ ಇದೆ. ಈ ಮೊಬೈಲ್ ಸ್ನ್ಯಾಪ್ ಡ್ರಾಗನ್ 8 ಜನರೇಷನ್ 3 ಚಿಪ್‌ಸೆಟ್ ಹೊಂದಿರ ಬಹುದು. ಅಲ್ಲದೆ 4000 ಎಂಎಎಚ್ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ. ಇನ್ನು ಈ ಮೊಬೈಲ್ ಆಂಡ್ರಾಯ್ದ್ 14, ಒನ್ ಯುಐ 6.1 ಸಾಫ್ಟ್‌ವೇರ್ ನ್ನು ಹೊಂದಿರಬಹುದು. ಈ ಮೊಬೈಲ್ ಆರು ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಬಹುದು.












Click it and Unblock the Notifications