ಬಿಡುಗಡೆ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ Samsung Galaxy M35 5G
ಗ್ರಾಹಕರು ಬಹುದಿನಗಳಿಂದ ಕಾಯುತ್ತಿದ್ದ, Samsung Galaxy M35 5G ಮೊಬೈಲ್ ಲಾಂಚ್ ಆಗಿದೆ. ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ಈ ಫೋನ್ ಲಾಂಚ್ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಧೂಳು ಎಬ್ಬಿಸಿದೆ. ತನ್ನ ಕೆಲವು ಸಾಂಪ್ರದಾಯಿಕ ಶೈಲಿಗೆ ಗುಡ್‌ಬೈ ಹೇಳಿರುವ ಸ್ಯಾಮ್‌ಸಾಂಗ್ ಫುಲ್ ಅಪ್‌ಡೇಟ್ ವರ್ಷನ್ ಫೋನ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ.
ಹಲವು ವಿಶೇಷತೆಗಳನ್ನು ಈ ಫೋನ್ ಹೊಂದಿದ್ದು, ಆಕರ್ಷಕ ಲುಕ್ ಹೊಂದಿದೆ. ಮಿಡ್ ರೇಂಜ್ ಬಜೆಟ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಫೋನ್ ಗ್ರಾಹಕರ ಫಸ್ಟ್ ಚಾಯ್ಸ್ ಫೋನ್ ಆಗಿದೆ. ದೊಡ್ಡ ಬ್ಯಾಟರಿ, ಕ್ಲಾಸಿಕ್ ಕ್ಯಾಮೆರಾ ಸೆಟ್‌ಅಪ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 35 ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. 4 ವರ್ಷದ ಅಪ್‌ಗ್ರೇಡ್ ಹಾಗೂ 5 ವರ್ಷದ ಸೆಕ್ಯೂರಿಟಿ ವಾರೆಂಟಿಗಳೊಂದಿಗೆ ಈ ಫೋನ್ ಲಾಂಚ್ ಆಗಿದೆ.

ಡಿಸ್‌ಪ್ಲೇ ಹೇಗಿದೆ?
ಗೋರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್‌ದ ಪ್ರೊಟೆಕ್ಷನ್ ನೀಡಲಾಗಿದೆ. 6.6 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲ್ಡ್ ಡಿಸ್‌ಪ್ಲೇ ನೀಡಲಾಗಿದೆ. ಅಲ್ಲದೆ 120 HZ ರಿಫ್ರೇಶ್ ದರವನ್ನು ಹೊಂದಿದ್ದು, 1000 ನೀಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ.
ಕ್ಯಾಮೆರಾ ಹೇಗಿದೆ?
ಎಂದಿನಂತೆ ಸ್ಯಾಮ್‌ಸಂಗ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಈ ಮೂರು ಕ್ಯಾಮೆರಾಗಳು ಒಂದರ ಕೆಳಗೆ ಒಂದರಂತೆ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದ್ದು, 8 ಎಂಪಿ ಅಲ್ಟ್ರಾ ವೈಡ್, 2 ಎಂ ಮೈಕ್ರೋ ಕ್ಯಾಮೆರಾ ಸೆಟಪ್ ಹೊಂದಿದೆ. ಇನ್ನು ಮುಂಭಾಗದಲ್ಲಿ ಈ ಪೋನ್ ಸೆಂಟರ್ ಡ್ರಾಪ್ ನಾಚ್ ನೀಡಲಾಗಿದೆ. ಅಂದರೆ ಸ್ಯಾಮ್‌ಸಂಗ್ ಈ ರೇಂಜ್‌ನಲ್ಲಿ ನೀಡಲಾಗುತ್ತಿದ್ದ ವಾಟರ್ ಡ್ರಾಪ್ ನಾಚ್ ನಿಂದ ಗ್ರಾಹಕರಿಗೆ ಮುಕ್ತಿ ನೀಡಿದೆ. ಮುಂಭಾಗದಲ್ಲಿ ವಿಡಿಯೋ ಹಾಗೂ ಸೆಲ್ಫಿಗಾಗಿ 13 ಎಂಪಿ ಕ್ಯಾಮೆರಾ ನೀಡಲಾಗಿದೆ.
ಪ್ರೊಸೆಸರ್, ಬ್ಯಾಟರಿ ಹೇಗಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 35 Exynos 1380 ಚಿಪ್ ಸೆಟ್ ಹೊಂದಿರಲಿದೆ. ಅಲ್ಲದೆ 6000 ಎಂಎಎಚ್ ಬ್ಯಾಟರಿ ಹೊಂದಿದ್ದು, 25 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.
ಫೋನ್ ಕೊಳ್ಳುವಾಗ ಏನೆಲ್ಲಾ ಆಫರ್ ನೀಡಲಾಗಿದೆ?
ಫೋನ್ ಖರೀದಿಯ ಮೇಲೆ ಎಲ್ಲಾ ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ 2000 ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ರೂ 1000 ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. Amazon Pay ಕ್ಯಾಶ್‌ಬ್ಯಾಕ್‌ನಲ್ಲಿ Samsung Galaxy M35 5G ಖರೀದಿಸಿದರೆ ರೂ 1000 ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಫೋನ್ ಮೂನ್‌ಲೈಟ್ ಬ್ಲೂ ಮತ್ತು ಡೇಬ್ರೇಕ್ ಬ್ಲೂ ಮತ್ತು ಥಂಡರ್ ಗ್ರೇ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. Samsung Galaxy M35 5G ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮತ್ತು ಸ್ಯಾಮ್‌ಸಂಗ್ ವೆಬ್‌ಸೈಟ್‌ನಿಂದ ಖರೀದಿಸಬಹುದು.

ಕನೆಕ್ಟಿವಿಟಿಯಲ್ಲಿ ಏನೆಲ್ಲಾ ನೀಡಲಾಗಿದೆ?
- 5ಜಿ
- ಡ್ಯೂಯಲ್ 4ಜಿ ವೋಲ್ಟ್
- ವೈಫೈ 6
- ಬ್ಲ್ಯೂಟುತ್ 5.3
- ಎನ್‌ಎಫ್‌ಎಸ್
ಮೊಬೈಲ್ ಕೆಳಭಾಗದಲ್ಲಿ ಏನಿದೆ?
- ಟೈಪ್ ಸಿ ಚಾರ್ಜರ್, ಮೈಕ್ರೋಫೋನ್, ಸ್ಪೀಕರ್ ಗ್ರಿಲ್
- ಬಲಗಡೆಯಲ್ಲಿ ಪವರ್ ಆನ್ ಆಫ್ ಬಟನ್ ಹಾಗೂ ವ್ಯಾಲ್ಯೂಮ್ ಕಂಟ್ರೋಲ್
- ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ ಇದೆ.
ಬಾಕ್ಸ್‌ನಲ್ಲಿ ಏನಿದೆ?
- ಸ್ಯಾಮ್‌ಸಂಗ್ ಎಂ35 5ಜಿ ಮೊಬೈಲ್
- ಟೈಪ್ ಸಿ ಟು ಟೈಪ್ ಸಿ ಚಾರ್ಜರ್
- ಡಾಕ್ಯೂಮೆಂಟೇಷನ್
- ಸಿಮ್ ಇಜೆಕ್ಟೆಡ್ ಟೂಲ್
ಸ್ಯಾಮ್‌ಸಂಗ್ ಎಂ35 5ಜಿ ಬೆಲೆ ಎಷ್ಟು?
- 6ಜಿಬಿ + 128 ಜಿಬಿ, ₹19,999
- 8ಜಿಬಿ + 128 ಜಿಬಿ, ₹21,499
- 8ಜಿಬಿ + 256 ಜಿಬಿ, ₹24,499












Click it and Unblock the Notifications