ಎಸ್ 400- ಭಾರತದ ಬತ್ತಳಿಕೆಯಲ್ಲೊಂದು ಬ್ರಹ್ಮಾಸ್ತ್ರ
ಭಾರತದ ರಕ್ಷಣಾ ಪಡೆಗೆ ವಿಶ್ವದ ಅತ್ಯುತ್ತಮ ಕ್ಷಿಪಣಿ ವ್ಯವಸ್ಥೆ ಸೇರ್ಪಡೆಯಾಗಿದೆ. ಮೊನ್ನೆಮೊನ್ನೆ ಅಮೆರಿಕದ ಸಂಸತ್ತು ಭಾರತಕ್ಕೆ ಎಸ್-400 ಖರೀದಿ ಮಾಡುವ ಅನುಮತಿ ನೀಡಿದೆ. ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸಲು ಇದ್ದ ತೊಡಕು ಕೊನೆಗೂ ನಿವಾರಣೆಯಾಗಿದೆ.
ಉಕ್ರೇನ್ ಮೇಲೆ ದಾಳಿ ಮಾಡಿರುವ ಕಾರಣಕ್ಕೆ ರಷ್ಯಾ ವಿರುದ್ಧ ಅಮೆರಿಕ ಹಾಗು ಅದರ ಮಿತ್ರ ದೇಶಗಳು ನಿರ್ಬಂಧಗಳನ್ನು ಹೇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಿದ ದೇಶಗಳ ವಿರುದ್ಧವೂ ಅಮೆರಿಕ ನಿರ್ಬಂಧಗಳನ್ನು ವಿಧಿಸುತ್ತದೆ. ಆದರೆ, ಭಾರತದ ವಿಚಾರದಲ್ಲಿ ಅಮೆರಿಕ ತನ್ನ ಕಟು ನೀತಿಯನ್ನು ಸಡಿಲಗೊಳಿಸಿದೆ.
ಚೀನಾದಂಥ ಆಕ್ರಮಣಕಾರಿ ದೇಶ ಪಕ್ಕದಲ್ಲೇ ಇರುವುದರಿಂದ ಭಾರತಕ್ಕೆ ಪ್ರಬಲ ಮಿಲಿಟರಿ ವ್ಯವಸ್ಥೆ ಅತ್ಯಗತ್ಯ. ಹಾಗೆಯೇ, ಭಾರತದಲ್ಲಿರುವ ಮುಕ್ಕಾಲು ಪಾಲು ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿಗಳು ರಷ್ಯಾದಿಂದಲೇ ಪಡೆದವಾಗಿವೆ. ರಷ್ಯಾ ಜೊತೆಗಿನ ಸಂಬಂಧವನ್ನು ಭಾರತ ಸಲೀಸಾಗಿ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವೂ ಅಮೆರಿಕಕ್ಕೆ ಇದೆ.
ಅಲ್ಲದೇ ಚೀನಾದ ಪ್ರಾಬಲ್ಯವನ್ನು ತಗ್ಗಿಸಲು ಅಮೆರಿಕಕ್ಕೆ ಭಾರತ ಅಗತ್ಯವೂ ಹೌದು. ಹೀಗಾಗಿ, ಭಾರತವನ್ನು ಅಷ್ಟು ಸುಲಭವಾಗಿ ಅಮೆರಿಕ ಅಲಕ್ಷಿಸಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ಸಂಸತ್ತು ಜುಲೈ 15ರಂದು ಭಾರತಕ್ಕೆ ರಷ್ಯಾದಿಂದ ಎಸ್-400 ಖರೀದಿಸಲು ಅನುಮತಿಸುವ ತಿದ್ದುಪಡಿ ಮಸೂದೆಗೆ ಅನುಮೋದನೆ ಕೊಟ್ಟಿತು.
ಅಷ್ಟಕ್ಕೂ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಂನಲ್ಲಿ ಅಂಥ ವಿಶೇಷತೆ ಏನಿದೆ? ರಷ್ಯಾದ ಪರಮಾಪ್ತವಾಗಿರುವ ಚೀನಾ ಬಳಿಯೂ ಇಂಥವೇ ವ್ಯವಸ್ಥೆ ಇರುವಾಗ ಭಾರತಕ್ಕೆ ಈ ವ್ಯವಸ್ಥೆ ಉಪಯೋಗಕ್ಕೆ ಬರುತ್ತದಾ? ಅಮೆರಿಕ, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಹೇಗಿವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದಷ್ಟು ಸಮಾಧಾನ ನೀಡುವ ಯತ್ನ ಇದು.

ವಿಶ್ವದ ಅತ್ಯುತ್ತಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು
ರಷ್ಯಾದಿಂದ ಅಭಿವೃದ್ಧಿಗೊಂಡು ನಿರ್ಮಿಸಲಾಗಿರುವ ಎಸ್-400 ವಿಶ್ವದ ಅತ್ಯುತ್ತಮ ವಾಯುರಕ್ಷಣಾ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ವಿಶ್ವದ ಟಾಪ್-5 ಮಿಸೈಲ್ ಡಿಫೆನ್ಸ್ ಸಿಸ್ಟಂಗಳ ಪಟ್ಟಿ ಇಲ್ಲಿದೆ.
1) ಎಸ್-400: ರಷ್ಯಾ
2) ಡೇವಿಡ್ಸ್ ಸ್ಲಿಂಗ್: ಅಮೆರಿಕ ಮತ್ತು ಇಸ್ರೇಲ್
3) ಥಾಡ್: ಅಮೆರಿಕ
4) ಪೇಟ್ರಿಯಾಟ್ ಪ್ಯಾಕ್ 2: ಅಮೆರಿಕ ಮತ್ತು ಇಸ್ರೇಲ್
5) ಎಸ್‌ಎಎಂಪಿ/ಟಿ: ಯೂರೋಪ್

ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ
ಇದು ರಷ್ಯಾದ ಆಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಸಂಸ್ಥೆ ಅಭಿವೃದ್ಧಿಪಡಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾಗಿದೆ. ಖಂಡಾಂತರ ಕ್ಷಿಪಣಿಗಳನ್ನು ಎದುರಿಸುವ ರಕ್ಷಣಾ ವ್ಯೂಹ ಇದಾಗಿದೆ. ಎಸ್-300 ಕ್ಷಿಪಣಿ ವ್ಯವಸ್ಥೆಯ ಸುಧಾರಿತ ಭಾಗವೇ ಎಸ್-400. ಹಾಗೆಯೇ ಇನ್ನೂ ಮುಂದುವರಿದ ಎಸ್-500 ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಅಭಿವೃದ್ಧಿಪಡಿಸುತ್ತಿದೆ.
ತೊಂಬತ್ತರ ದಶಕದಲ್ಲೇ ರಷ್ಯಾ ಎಸ್-400 ಕ್ಷಿಪಣಿ ಅಭಿವೃದ್ಧಿಪಡಿಸಲು ಯೋಜಿಸಿತ್ತಾದರೂ ಹಣದ ಕೊರತೆಯಿಂದ ಮುಂದೂಡಿತು. ಅಂತಿಮವಾಗಿ 2007ರಲ್ಲಿ ಇದು ಸಂಪೂರ್ಣವಾಗಿ ಸಿದ್ಧಗೊಂಡು ರಕ್ಷಣಾ ಪಡೆಗಳಿಗೆ ನಿಯೋಜನೆಗೊಂಡಿತು.

ಎಸ್-400 ವಿಶೇಷತೆಗಳೇನು?
ಇದು ನಾಲ್ಕನೇ ತಲೆಮಾರಿನ ತಂತ್ರಜ್ಞಾನದ ಕ್ಷಿಫಣಿ ರಕ್ಷಣಾ ವ್ಯವಸ್ಥೆಯಾಗಿದೆ. ನೆಲದಿಂದ ಆಗಸಕ್ಕೆ ಚಿಮ್ಮಿ ಗುರಿಯನ್ನು ಹೊಡೆದುರುಳಿಸುವಂತೆ ರೂಪಿತವಾಗಿದೆ. 14 ಮ್ಯಾಕ್ (Mach) ವೇಗದಲ್ಲಿ ಇದು ಸಾಗಬಲ್ಲುದು. ಮ್ಯಾಕ್ ಎಂಬುದು ಶಬ್ದ ವೇಗ. ಒಂದು ಮ್ಯಾಕ್ ವೇಗ ಎಂದರೆ ಗಂಟೆಗೆ ಸರಿಸಮುಮಾರು 1234.8 ಕಿಮೀ ಆಗುತ್ತದೆ. 14 ಮ್ಯಾಕ್ ವೇಗ ಎಂದರೆ ಗಂಟೆಗೆ 17 ಸಾವಿರ ಕಿಮೀಗೂ ಹೆಚ್ಚು ವೇಗದಲ್ಲಿ ಎಸ್-400 ಕ್ಷಿಪಣಿಗಳು ಸಾಗಬಲ್ಲುವು.
ಒಂದು ವಿಮಾನದ ವೇಗ ಗಂಟೆಗೆ 800 ಕಿಮೀ ಇದೆ. ಆಗಸಕ್ಕೆ ಚಿಮ್ಮುವ ರಾಕೆಟ್ ಗಂಟೆಗೆ 45 ಸಾವಿರ ಕಿಮೀ ವೇಗದಲ್ಲಿ ಹಾರುತ್ತದೆ. ಅಂದರೆ ರಾಕೆಟ್‌ನ ಅರ್ಧದಷ್ಟು ವೇಗದಲ್ಲಿ ಎಸ್-400 ವ್ಯವಸ್ಥೆ ಕೆಲಸ ಮಾಡುತ್ವೆ ಎಂದರೆ ನಿಜಕ್ಕೂ ಅಸಾಮಾನ್ಯವೇ.
ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಂನಲ್ಲಿ ಒಳ್ಳೆಯ ರಾಡಾರ್ ಅಳವಡಿಕೆ ಇದೆ. 600 ಕಿಮೀ ದೂರದಲ್ಲಿರುವ ಗುರಿಗಳನ್ನು ಈ ರಾಡಾರ್ ಗುರುತಿಸುತ್ತದೆ. 400 ಕಿಮೀ ದೂರದವರೆಗೂ ಇರುವ ಗುರಿಗಳನ್ನು ಇದು ಉಡಾಯಿಸಬಲ್ಲುದು.
ಇದು ಏಕಕಾಲದಲ್ಲಿ 80 ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ. 160 ಕ್ಷಿಪಣಿಗಳನ್ನು ಏಕಕಾಲದಲ್ಲಿ ಹಾರಿಬಿಡಬಲ್ಲುದು. ಒಂದೇ ಗುರಿ ಮೇಲೆ ಎರಡು ಕ್ಷಿಪಣಿಗಳನ್ನು ಗುರಿಮಾಡಿ ಬಿಡಬಲ್ಲುದು.
ಕೇವಲ 10 ಸೆಕೆಂಡ್‌ನೊಳಗೆ ಇದು ತನ್ನ ಶ್ರೇಣಿಯಲ್ಲಿರುವ ಗುರಿಗಳನ್ನು ಗುರುತಿಸಿ ಸ್ಪಂದಿಸತೊಡಗುತ್ತದೆ. ಈ ಸಿಸ್ಟಂ ಅನ್ನು ರಸ್ತೆಯ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು. ಚೆನ್ನಾಗಿರುವ ರಸ್ತೆಯಲ್ಲಿ ಇದರ ವೇಗ ಗಂಟೆಗೆ 60 ಕಿಮೀ ಇರುತ್ತದೆ.
ಎಫ್-16, ಬ್ಯಾಲಿಸ್ಟಿಕ್ ಮಿಸೈಲ್ ಇತ್ಯಾದಿ ಅತ್ಯಾಧುನಿಕ ವಿಮಾನ, ಕ್ಷಿಪಣಿ ಮೊದಲಾದವನ್ನು ಹೊಡೆದುರುಳಿಸುವ ಸಾಮರ್ಥ್ಯ ಇದೆ.

ವಿಶ್ವದ ಕೆಲ ದೇಶಗಳಲ್ಲಿದೆ ಎಸ್-400
ರಷ್ಯಾ ಈಗಾಗಲೇ ಅನೇಕ ಕಡೆ ಈ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಿದೆ. ಉಕ್ರೇನ್‌ನಿಂದ 2016ರಲ್ಲಿ ವಶಪಡಿಸಿಕೊಂಡಿರುವ ಕ್ರಿಮಿಯಾದಲ್ಲಿ ಇದನ್ನು ಇಡಲಾಗಿದೆ. ಮಾಸ್ಕೋ ನಗರದ ರಕ್ಷಣೆಗೆ ಇದರ ನಿಯೋಜನೆಯಾಗಿದೆ.
ಭಾರತವಷ್ಟೇ ಅಲ್ಲದೆ ಚೀನಾ, ಟರ್ಕಿ ಮತ್ತು ಬೆಲಾರಸ್ ದೇಶಗಳು ರಷ್ಯಾ ನಿರ್ಮಿತ ಎಸ್-400 ಮಿಸೈಲ್ ಸಿಸ್ಟಂ ಅನ್ನು ಖರೀದಿಸಿವೆ. ಸೌದಿ ಅರೇಬಿಯಾ, ಇರಾನ್, ಈಜಿಪ್ಟ್, ಇರಾಕ್, ಕತಾರ್ ಮತ್ತು ಸರ್ಬಿಯಾ ದೇಶಗಳೂ ಕೂಡ ಎಸ್-400 ಖರೀದಿಸಲು ಯೋಜಿಸಿವೆ.
ಭಾರತದಲ್ಲಿ ಎಸ್-400 ಖರೀದಿಗೆ 2018ರಲ್ಲಿ ಮೊದಲ ಒಪ್ಪಂದ ಆಗಿದ್ದು. ಚೀನಾದಲ್ಲಿ ಅಷ್ಟರೊಳಗೆ ಎಸ್-400 ಯೂನಿಟ್‌ಗಳ ಸರಬರಾಜು ಆಗಿ ಹೋಗಿತ್ತು. ನಾಲ್ಕು ವರ್ಷ ಮುಂಚೆಯೇ, 2014ರಲ್ಲಿ ರಷ್ಯಾ ಮತ್ತು ಚೀನಾ ಮಧ್ಯೆ ಒಪ್ಪಂದವಾಗಿತ್ತು. ಭಾರತದಲ್ಲಿ ಕಳೆದ ವರ್ಷ ಎಸ್-400ನ ಮೊದಲ ರೆಜಿಮೆಂಟ್ ಸರಬರಾಜು ಆಯಿತು. ಈಗಾಗಲೇ ಇದು ಸೇನೆಯಲ್ಲಿ ನಿಯೋಜನೆಯಾಗಿದೆ. ಎರಡನೇ ರೆಜಿಮೆಂಟ್ ಸರಬರಾಜು ಆಗುತ್ತಿದೆ.
(ಒನ್ಇಂಡಿಯಾ ಸುದ್ದಿ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications