ಜನರ ಕಣ್ಮನ ಸೆಳೆಯಲಿರುವ ರಗ್ ಉತ್ಸವ್ 2024 ಆಯೋಜನೆ-ದೇಶದ ವಿವಿಧ ಸ್ಥಳ, ಆನ್‌ಲೈನ್‌ನಲ್ಲಿಯೂ ರಗ್ ಲಭ್ಯ
ರಗ್ ಉತ್ಸವ್ 2024: ಜೈಪುರ್ ರಗ್ಸ್, ತನ್ನ ಬಹುನಿರೀಕ್ಷಿತ ಸಾಂಸ್ಕೃತಿಕ ಕಾರ್ಯಕ್ರಮವಾದ "ರಗ್ ಉತ್ಸವ್" ವನ್ನು ಆಯೋಜಿಸಿದೆ. ಈ ವಾರ್ಷಿಕ ಉತ್ಸವವು ವಾಣಿಜ್ಯ ಕ್ಷೇತ್ರವನ್ನು ಮೀರಿದ ಆಚರಣೆಯಾಗಿದ್ದು, ಗ್ರಾಮೀಣ ಭಾರತೀಯ ಕುಶಲಕರ್ಮಿಗಳ ಕಲಾತ್ಮಕತೆ ಮತ್ತು ವಿಶ್ವಾದ್ಯಂತದ ಗ್ರಾಹಕರ ವಿವೇಚನಾಶೀಲ ಅಭಿರುಚಿಗಳನ್ನು ಒಟ್ಟುಗೂಡಿಸುತ್ತದೆ.
ಕರಕುಶಲ ರತ್ನಗಂಬಳಿಗಳು ಮತ್ತು ರಗ್ಗುಗಳ ಉತ್ಸವ ಭಾರತದ ಶ್ರೀಮಂತ ಸಂಪ್ರದಾಯದ ಒಂದು ತಿಂಗಳ ಆಚರಣೆಯಾಗಿದೆ. ಕಳೆದ ಬಾರೀ ಈ ಉತ್ಸವ ಅದ್ಧೂರಿಯಾಗಿ ನಡೆದಿತ್ತು. ಆನ್‌ಲೈನ್ ಸೇರಿದಂತೆ ಭಾರತದ ಎಲ್ಲಾ ಅಂಗಡಿಗಳಲ್ಲಿ ಜೈಪುರ ರಗ್ಗುಗಳ ಮಾರಾಟದಿಂದ 15 ಕೋಟಿ ರೂಪಾಯಿ ಆದಾಯ ಹರಿದುಬಂದಿತ್ತು.

ಇನ್ನು ಈ ವರ್ಷ ದೇಶಾದ್ಯಂತ ಹೆಚ್ಚಿನ ರಗ್ಗುಗಳ ಮಾರಾಟದ ನಿರೀಕ್ಷೆಯಲ್ಲಿದ್ದು, 50 ಕೋಟಿ ರೂಪಾಯಿ ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ರಗ್ ಉತ್ಸವ್ ಜೈಪುರ್ ರಗ್ಸ್ ಕುಶಲಕರ್ಮಿಗಳ ಕರಕುಶಲತೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ.
ಪುಣೆ ಮತ್ತು ಲಂಡನ್‌ನಲ್ಲಿ 975 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮಳಿಗೆಗಳನ್ನು ಪ್ರಾರಂಭಿಸಲಿದೆ. ಈ ಮೂಲಕ ಹಣಕಾಸು ವರ್ಷವನ್ನು ಮತ್ತೊಮ್ಮೆ ರಗ್ ಉತ್ಸವವು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಭಾರತ, ದುಬೈ, ರಷ್ಯಾ ಮತ್ತು ಚೀನಾದಂತಹ ಪ್ರತಿಷ್ಠಿತ ಸ್ಥಳಗಳಲ್ಲಿ 17 ಮಳಿಗೆಗಳನ್ನು ಹೊಂದಿರುವ ಈ ಬ್ರಾಂಡ್ ಈಗ ಭಾರತದಲ್ಲಿ ಪ್ರತ್ಯೇಕವಾಗಿ ಒಂದು ತಿಂಗಳ ಉತ್ಸವವನ್ನು ಆಯೋಜಿಸಲು ಸಜ್ಜಾಗಿದೆ. ಇನ್ನು ಭಾರತೀಯ ಪ್ರಮುಖ ಸ್ಥಳಗಳಲ್ಲಿ ಮತ್ತು ವೆಬ್‌ಸೈಟ್‌ನಲ್ಲಿಯೂ ಇವುಗಳನ್ನು ಕೊಳ್ಳಬಹುದಾಗಿದೆ.
ರಗ್ ಉತ್ಸವದಲ್ಲಿ 5,000ಕ್ಕೂ ಹೆಚ್ಚು ಸೊಗಸಾದ ಹೊಸ ಮಾದರಿಯ ರಗ್ಗುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಪ್ರತಿಯೊಂದೂ ರಗ್ಗುಗಳು ಕೂಡ ಸಂಪ್ರದಾಯ, ಸಂಸ್ಕೃತಿ ಮತ್ತು ಕರಕುಶಲತೆಯ ವಿಶಿಷ್ಟ ಕಥೆಯನ್ನು ಹೇಳುತ್ತದೆ. ಇದೇ ಮೊದಲ ಬಾರಿಗೆ ಜೈಪುರ್ ರಗ್ಸ್ ತನ್ನ ಪ್ರಸಿದ್ಧ "ಮಂಚಹಾ" ಸಂಗ್ರಹದ ಮೇಲೆ ವಿಶೇಷ ಡೀಲ್‌ಗಳನ್ನು ನೀಡುತ್ತಿದೆ. ಇದು ನಾವೀನ್ಯತೆ ಮತ್ತು ಕಲಾತ್ಮಕತೆಗೆ ಹೆಸರುವಾಸಿಯಾಗಿದೆ. ಇದೀಗ ಹಬ್ಬದ ಸೀಸನ್ ಹಿನ್ನೆಲೆ ಈ ರಗ್ಗುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ.
ರಗ್ಗು ಉತ್ಸವವು ಜೈಪುರ ರಗ್ಗುಗಳ ಪ್ರತಿ ದಾರ ಮತ್ತು ಗಂಟುಗಳಿಗೆ ಜೀವ ತುಂಬುವ ಕುಶಲಕರ್ಮಿಗಳಿಗೆ ಸಲ್ಲಿಸುವ ಗೌರವವಾಗಿದೆ. ಇನ್ನು ಇವುಗಳನ್ನು ಕೊಳ್ಳುವವರಿಗೆ ನೇರ ಸಂವಹನ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ತಲೆಮಾರುಗಳಿಂದ ನಡೆದುಕೊಂಡು ಬಂದ ಈ ರಗ್ಗಿನ ಉತ್ಸವದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ, ರಗ್ ಉತ್ಸವ್ ಒಂದು ದೊಡ್ಡ ಹಬ್ಬವಾಗಿದೆ. ಅದೃಷ್ಟಶಾಲಿ ಸಂದರ್ಶಕರು ವಿಶೇಷ ಜೈಪುರ ರಗ್ಸ್ ಉಡುಗೊರೆಗಳನ್ನು ಗೆಲ್ಲುವ ಅವಕಾಶದೊಂದಿಗೆ ಸಂತೋಷದಾಯಕ ಆಟಗಳ ಸರಣಿಯಲ್ಲಿ ಭಾಗವಹಿಸಬಹುದು.
ಈ ರೋಮಾಂಚಕ ಆಚರಣೆಯ ಭಾಗವಹಿಸಲು ನವದೆಹಲಿ, ಮುಂಬೈ, ಪುಣೆ, ಜೈಪುರ, ಬೆಂಗಳೂರು, ಚೆನ್ನೈ, ಅಹಮದಾಬಾದ್, ಸೂರತ್‌ಗೆ ಭೇಟಿ ನೀಡಬಹುದಾಗಿದೆ. ಅಥವಾ ಆನ್‌ಲೈನ್‌ನಲ್ಲಿಯೂ ಕೂಡ ಇವುಗಳನ್ನು ಖರೀದಿ ಮಾಡಿ ಆನಂದಿಸಬಹುದಾಗಿದೆ.
ರಗ್ಗು ಉತ್ಸವವು ಕೇವಲ ಒಂದು ಹಬ್ಬ ಅಷ್ಟೇ ಅಲ್ಲ. ಇದು ಸೃಜನಶೀಲತೆಯ ಸಂಸ್ಕೃತಿ, ಸಂಪ್ರದಾಯ ಹಾಗೂ ನಾವೀನ್ಯತೆಯೊಂದಿಗೆ ಬೆರೆಯುವ ಮತ್ತು ಕುಶಲಕರ್ಮಿಗಳು ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ದೊಡ್ಡ ವೇದಿಕೆಯಾಗಿದೆ. ಇನ್ನು ಈ ಜೈಪುರ ರಗ್ಗುಗಳ ರಗ್ಗು ಉತ್ಸವದಲ್ಲಿ ಕಥೆಗಳು, ಸಂಸ್ಕೃತಿ ಮತ್ತು ಸಾಟಿಯಿಲ್ಲದ ಕರಕುಶಲತೆಯಿಂದ ಹೆಣೆದ ಜಗತ್ತನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications