ಗಣರಾಜ್ಯೋತ್ಸವ ಭಾಷಣ 2026: ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಸರಳ, ಆಕರ್ಷಕ ರಿಪಬ್ಲಿಕ್ ಡೇ ಭಾಷಣ ಇಲ್ಲಿದೆ
ಪ್ರತಿ ವರ್ಷ ಜನವರಿ 26 ಬಂತೆಂದರೆ ದೇಶಾದ್ಯಂತ ದೇಶಭಕ್ತಿಯ ಅಲೆ ಎದ್ದಿರುತ್ತದೆ. ಶಾಲಾ-ಕಾಲೇಜುಗಳಲ್ಲಿ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಹಾರಾಡುತ್ತಿದ್ದರೆ, ಪುಟಾಣಿ ಮಕ್ಕಳು ರಾಷ್ಟ್ರನಾಯಕರ ವೇಷ ಧರಿಸಿ ಮಿಂಚುತ್ತಿರುತ್ತಾರೆ. ಈ ಸಂಭ್ರಮದ ನಡುವೆ, ವೇದಿಕೆಯ ಮೇಲೆ ನಿಂತು ದೇಶದ ಬಗ್ಗೆ ನಾಲ್ಕು ಮಾತುಗಳನ್ನು ಆಡುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಹೆಮ್ಮೆಯ ವಿಷಯ.
ಆದರೆ, ವೇದಿಕೆಯ ಮೇಲೆ ನಿಂತಾಗ ಯಾವ ವಿಷಯವನ್ನು ಹೇಗೆ ಮಂಡಿಸಬೇಕು? ಗಣರಾಜ್ಯೋತ್ಸವದ ಇತಿಹಾಸವನ್ನು ಅರ್ಥವಾಗುವಂತೆ ವಿವರಿಸುವುದು ಹೇಗೆ? ಎಂಬ ಗೊಂದಲ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಹಜವಾಗಿ ಇರುತ್ತದೆ. ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಪರಿಹಾರ. ನಿಮ್ಮ ಮಕ್ಕಳ ಗಣರಾಜ್ಯೋತ್ಸವ ಭಾಷಣ ಸ್ಪರ್ಧೆಗಳಿಗಾಗಿ ಅಥವಾ ಶಾಲಾ ಕಾರ್ಯಕ್ರಮಗಳಿಗಾಗಿ ಅತ್ಯಂತ ಅರ್ಥಪೂರ್ಣವಾದ "ಗಣರಾಜ್ಯೋತ್ಸವ ಭಾಷಣದ" ಮಾದರಿ ಇಲ್ಲಿದೆ.

ಗಣರಾಜ್ಯೋತ್ಸವದ ಭಾಷಣ 2026
ವೇದಿಕೆಯ ಮೇಲಿರುವ ಎಲ್ಲಾ ಅತಿಥಿ ಮಹೋದಯರಿಗೂ, ನನ್ನ ಗುರುಗಳಿಗೂ ಹಾಗೂ ನನ್ನ ಪ್ರೀತಿಯ ಸಹಪಾಠಿಗಳಿಗೆ ಪ್ರೀತಿಯ ನಮನಗಳು. ಮೊದಲಿಗೆ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಇಂದು ನಾವು ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಂಭ್ರಮದ ಘಳಿಗೆಯಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತು ಮಾತನಾಡಲು ನಾನು ಹೆಮ್ಮೆ ಪಡುತ್ತೇನೆ.
ಗೆಳೆಯರೇ, ನಮಗೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೂ ಕೂಡ, ನಮ್ಮ ದೇಶಕ್ಕೆ ತನ್ನದೇ ಆದ ನಿಯಮಗಳ ಚೌಕಟ್ಟು ಇರಲಿಲ್ಲ. ಆಗ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಸಂವಿಧಾನವನ್ನು ರಚಿಸಲಾಯಿತು. 1950ರ ಜನವರಿ 26 ರಂದು ಈ ಸಂವಿಧಾನವು ಅ ಜಾರಿಗೆ ಬಂದಿದ್ದರಿಂದ, ಭಾರತವು ಒಂದು ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಯಿತು. ಅಂದಿನಿಂದ ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ.
ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು 2 ವರ್ಷ 11 ತಿಂಗಳು, 18 ದಿನ ಬೇಕಾಯಿತು. ಇದು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ. ಗಣರಾಜ್ಯ ಎಂದರೆ 'ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಜನತಾ ಆಳ್ವಿಕೆ'. ಇಲ್ಲಿ ಪ್ರಜೆಯೇ ಪ್ರಭು.
ಇಂದು ನಾವು ಈ ಸುಂದರವಾದ ನಾಡಲ್ಲಿ ಬದುಕುತಿದ್ದೇವೆ ಎಂದರೆ ಇದರ ಹಿಂದೆ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರಂತಹ ನೂರಾರು ಮಹನ್ ನಾಯಕರ ಶ್ರಮವಿದೆ. ಅವರ ತ್ಯಾಗದ ಫಲವಾಗಿ ಇಂದು ನಾವು ಈ ಸುಂದರ ಭಾರತದಲ್ಲಿ ನೆಮ್ಮದಿಯಿಂದ ಇದ್ದೇವೆ. ಅದೇ ರೀತಿ, ಗಡಿಯಲ್ಲಿ ಮಳೆ, ಚಳಿ ಎನ್ನದೆ ನಮ್ಮನ್ನು ಕಾಯುತ್ತಿರುವ ಯೋಧರಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಲೇಬೇಕು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿದೆ. ಆದ್ದರಿಂದ ನಾವು ಕೇವಲ ದೊಡ್ಡ ದೊಡ್ಡ ಮಾತುಗಳನ್ನು ಆಡುವುದಲ್ಲ, ಬದಲಾಗಿ ನಮ್ಮ ದೇಶದ ಕಾನೂನನ್ನು ಗೌರವಿಸಬೇಕು. ಶಿಸ್ತು, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಓದಿ ನಮ್ಮ ದೇಶವನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ಯೋಣ. 'ಸ್ವಚ್ಛ ಭಾರತ, ಸಮೃದ್ಧ ಭಾರತ' ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡೋಣ.
ಕೊನೆಯದಾಗಿ, ಇಂತಹ ಸುಂದರ ದೇಶದಲ್ಲಿ ಹುಟ್ಟಲು ನಾವೆಲ್ಲರೂ ಪುಣ್ಯ ಮಾಡಿದ್ದೇವೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತ ಸದಾ ವಿಜೃಂಭಿಸಲಿ. ನನಗೆ ಮಾತನಾಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು.
"ಭಾರತ್ ಮಾತಾ ಕೀ ಜೈ! ಜೈ ಹಿಂದ್.. ಜೈ ಭಾರತ್!"
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications