Realme: ಅಗ್ಗದ 5G ಸ್ಮಾರ್ಟ್‌ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
ಚೀನಾ ಮೂಲದ ಕಂಪನಿಯಾದ ರಿಯಲ್‌ಮಿ ಮಾರುಕಟ್ಟೆಯಲ್ಲಿ ಧೂಳ್ಳೆಬಿಸಲು ಸಜ್ಜಾಗಿದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ದೊಡ್ಡ ಪ್ಲ್ಯಾನ್ ಮಾಡಿಕೊಂಡಿದೆ. ಬಜೆಟ್ ಫ್ರೆಂಡ್ಲಿ ಫೋನ್ ಮಾಡಲು ಸಿದ್ಧವಾಗಿದೆ. ರಿಯಲ್‌ಮಿ ಭಾರತದಲ್ಲಿ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ.
Realme C65 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಚೀನಾ ಕಂಪನಿಯ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಈಗಾಗಲೇ ವಿಯೆಟ್ನಾಂನಲ್ಲಿ ಲಾಂಚ್ ಮಾಡಿದೆ. ರಿಯಲ್‌ಮಿ ಇಂಡಿಯಾ ತನ್ನ ಸಾಮಾಜಿಕ ತಾಣದಲ್ಲಿ ಈ ಮೊಬೈಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಸದ್ಯ ಭಾರತದಲ್ಲಿ Lava, itel, Infinix, POCO ಫೋನ್‌ಗಳ ಜೊತೆ ಪೂಪೋಟಿ ನಡೆಸಲಿದೆ.

ಸುದ್ದಿ ಸಂಸ್ಥೆ IANS ನ ವರದಿಯ ಪ್ರಕಾರ, ಅಗ್ಗದ ಫೋನ್‌ಗಳೊಂದಿಗೆ ಸಾಧ್ಯವಾದಷ್ಟು ಗ್ರಾಹಕರಿಗೆ 5G ತಂತ್ರಜ್ಞಾನವನ್ನು ನೀಡಲು Realme ಬಯಸಿದೆ. ಈ ಸರಣಿಯಲ್ಲಿ, ತನ್ನ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ತನ್ನ ಮುಂಬರುವ ಸ್ಮಾರ್ಟ್‌ಫೋನ್ (realme C65 5G) ಅನ್ನು ತರುತ್ತಿದೆ.
ಆಂಡ್ರಾಯ್ಡ್ 14 ಹೊಂದಿರುವ ಸಾಧ್ಯತೆ
ರಿಯಲ್‌ಮಿ C65 ಫೋನ್ ಆಂಡ್ರಾಯ್ಡ್ 14 ಆಧಾರಿತ OneUI 5.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ಫೋನ್ 5000 ಎಂಎಚ್ ಬ್ಯಾಟರಿಯೊಂದಿಗೆ ಹೊಂದಿದ್ದು, 45 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗನ್ನು ಬೆಂಬಲಿಸಲಿದೆ. ಫೋನ್‌ನಲ್ಲಿ ಸಂಪರ್ಕಕ್ಕಾಗಿ, ಬ್ಲೂಟೂತ್ 5.3, ಜಿಪಿಎಸ್, ವೈ-ಫೈ, 3.5 ಎಂಎಂ ಆಡಿಯೊ ಜಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಡಿಸ್‌ಪ್ಲೇ ಹೇಗಿರಲಿದೆ
ರಿಯಲ್‌ಮಿ 5ಜಿ ಅಗ್ಗದ ಸ್ಮಾರ್ಟ್‌ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಪೂರ್ಣ ಎಚ್‌ಡಿ ರೆಸಲ್ಯೂಶನ್ ಹೊಂದಿದೆ. ಈ ಮೊಬೈಲ್ ಮಿಡಿಯಾಟೆಕ್ ಹೆಲೋ ಜಿ85 ಪ್ರೊಸೆಸರ್ ಹೊಂದಿದೆ. ಅಲ್ಲದೆ 8ಜಿಬಿ ರ್ಯಾಮ್ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಅಲ್ಲದೆ ಈ ಫೋನ್‌ನ ರ್ಯಾಮ್ 8ಜಿಬಿ ವರೆಗೂ ವಿಸ್ತರಿಸಬಹುದಾಗಿದೆ. ಅಲ್ಲದೆ ಇಂಟರ್ನಲ್ ಸ್ಟೋರೆಜ್ ಸಹ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2 ಟಿಬಿ ವರೆಗೆ ವಿಸ್ತರಿಸಿಕೊಳ್ಳಬಹುದು.
ಕ್ಯಾಮೆರಾ ಹೇಗಿದೆ?
ರಿಯಲ್‌ಮಿ C65 5G ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಅಗ್ಗದ ಬೆಲೆಯಲ್ಲಿ ಎಐ ಆಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಮುಂಭಾಗದಲ್ಲಿ ವಿಡಿಯೋ ಹಾಗೂ ಸೆಲ್ಫಿಗಾಗಿ 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿದೆ.
Experience the future at your fingertips with the lightning-fast 5G of #realmeC65 5G pic.twitter.com/L2zVK2PxSj
— realme (@realmeIndia) April 18, 2024
ಬೆಲೆ ಎಷ್ಟು?
ರಿಯಲ್ ಮಿ ಫೋನ್ ಮೂರು ರುಪಾಂತರಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಆಗಲಿದೆ.
6GB ರ್ಯಾಮ್ + 128GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಬೆಲೆ 12,000 ರೂ.
8GB ರ್ಯಾಮ್ + 128GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಬೆಲೆ 14,000 ರೂ.
8GB ರ್ಯಾಮ್ + 256GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಫೋನ್ ಬೆಲೆ 16,000 ರೂ.












Click it and Unblock the Notifications