Punjab Today's Chanakya Exit Poll 2022: ಎಎಪಿ ತೆಕ್ಕೆಗೆ

ಚಂಡೀಗಢ, ಮಾರ್ಚ್ 07: ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದ್ದು, ಚುನಾವಣೆಯ ಫಲಿತಾಂಶವು ಮಾರ್ಚ್ 10ರಂದು ಹೊರಬೀಳಲಿದೆ. ಇದಕ್ಕೂ ಮುನ್ನ ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದೆ. ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಜಯಭೇರಿ ಬಾರಿಸಲಿದೆ.

ಎಎಪಿ ಪಕ್ಷವು 100 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, 11 ಸ್ಥಾನಗಳು ಹೆಚ್ಚು ಕಡಿಮೆ ಆಗಲಿದೆ. ಕಾಂಗ್ರೆಸ್‌ ಬರೀ 10 ಕ್ಷೇತ್ರಗಳನ್ನು ಜಯ ಸಾಧಿಸಲಿದೆ. 7 ಸ್ಥಾನಗಳು ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. 6 ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳವು ಜಯ ಗಳಿಸಲಿದೆ. ಇನ್ನುಳಿದಂತೆ ಬಿಜೆಪಿಯು ಬರೀ ಒಂದು ಕ್ಷೇತ್ರದಲ್ಲಿ ವಿಜಯ ಸಾಧಿಸಲಿದೆ. ಇತರೆ ಪಕ್ಷಗಳು ಯಾವುದೇ ಸ್ಥಾನದಲ್ಲಿ ಗೆಲುವು ಪಡೆಯುವ ಸಾಧ್ಯತೆ ಇಲ್ಲ ಎಂದು ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯು ಹೇಳಿದೆ.

ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷವು (ಎಎಪಿ) ಪಂಜಾಬ್‌ನಲ್ಲಿ ಭರ್ಜರಿ ಗೆಲುವನ್ನು ಸಾಧಿಸಿ ಅಧಿಕಾರದ ಚುಕ್ಕಾಣಿಯನ್ನು ಪಡೆಯಲಿದೆ. ಮ್ಯಾಜಿಕ್‌ ನಂಬರ್‌ಗೂ ತೀರಾ ಅಧಿಕ ಕ್ಷೇತ್ರದಲ್ಲಿ ಗೆಲುವು ಪಡೆದು ಅಧಿಕಾರವನ್ನು ಸುಲಭವಾಗಿ ಪಡೆಯಲಿದೆ. ಇನ್ನು ಎಎಪಿ ಶೇಕಡ 45± 3ರಷ್ಟು, ಕಾಂಗ್ರೆಸ್‌ ಶೇಕಡ 23± 3ರಷ್ಟು ಮತವನ್ನು ಪಡೆಯಲಿದೆ. ಎಸ್‌ಎಡಿ ಶೇಕಡ 16± 3ರಷ್ಟು ಮತವನ್ನು ಪಡೆಯಲಿದೆ. ಇನ್ನುಳಿದಂತೆ ಬಿಜೆಪಿಯು ಶೇಕಡ 9ರಷ್ಟು ಸ್ಥಾನದಲ್ಲಿ ಮಾತ್ರ ವಿಜಯ ಸಾಧಿಸಲಿದೆ. ಇತರೆ ಪಕ್ಷಗಳು ಶೇಕಡ 7 ಮತದಾನ ಗಳಿಸಲಿದೆ

Punjab Election Todays Chanakya Exit Poll Results 2022 in Kannada

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭೆ ಕ್ಷೇತ್ರಗಳು ಇದೆ. ಫೆಬ್ರವರಿ 20ರಂದು ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗಿದೆ. ಮಾರ್ಚ್ 10ರಂದು ಇಲ್ಲಿ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಕಾಂಗ್ರೆಸ್‌ ಕೈಯಲ್ಲಿ ಇರುವ ಪಂಜಾಬ್‌ ಅಧಿಕಾರ ಮುಂದೆ ಯಾರ ಕೈಗೆ ಸೇರುತ್ತದೆ ಅಥವಾ ಕಾಂಗ್ರೆಸ್‌ನ ಕೈಯಲ್ಲೇ ಉಳಿಯಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಮಾ.10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್‌ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕಳೆದ 2017ರಲ್ಲಿ ಪಂಜಾಬ್‌ ಮತದಾರರ ತೀರ್ಪು ಏನಿತ್ತು?

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಇನ್ಸಾಫ್‌ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+