Mobile: ರಿಯಲ್‌ಮಿ 12 ಪ್ರೊ 5ಜಿ ಬೆಲೆಯಲ್ಲಿ ಭಾರೀ ಇಳಿಕೆ: ಬಜೆಟ್ ಫ್ರೆಂಡ್ಲಿ ಫೋನ್
ನೀವು ಏನಾದರೂ ಹೊಸ ಮೊಬೈಲ್ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ನಿಮಗಿದೆ ಒಳ್ಳೆಯ ಸುದ್ದಿ. ಇನ್ನು ನೀವು ಚೀನಾ ಕಂಪನಿಗಳ ಮೊಬೈಲ್ ಕೊಳ್ಳುವ ಮನಸ್ಸು ಇದ್ದರೆ, ಇಲ್ಲಿದೆ ಬಂಪರ್ ಆಫರ್. ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ರಿಯಲ್‌ಮಿ 12 ಪ್ರೊ 5ಜಿ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಕಂಪನಿಗಳಲ್ಲಿ ಚೀನಾ ಮೂಲದ ರಿಯಲ್‌ಮಿ ಸಹ ಒಂದು. Realme ಯ ಸ್ಮಾರ್ಟ್‌ಫೋನ್ Realme 12 Pro 5G ಅನ್ನು ಅಗ್ಗದ ಬೆಲೆಯಲ್ಲಿ ನೀವು ಖರೀದಿಸಬಹುದು. Realme ತನ್ನ ಬೆಲೆಯಲ್ಲಿ ದೊಡ್ಡ ಕಡಿತ ಮಾಡಿದೆ. ಈಗಲೇ ಈ ಸ್ಮಾರ್ಟ್ ಫೋನ್ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು. ಈ ವರ್ಷದ ಜನವರಿ ತಿಂಗಳಲ್ಲಿ Realme 12 Pro 5G ಅನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಹೇಗಿದೆ ಫೋನ್
Realme 12 Pro 5G ಲೆದರ್ ಬ್ಯಾಕ್ ಫಿನಿಶ್ ಹೊಂದಿದ್ದು ಗ್ರಾಹಕರನ್ನು ಸೆಳೆಯುತ್ತಿದೆ. ಹಾರ್ಡ್ ಯೂಸ್ ಹಾಗೂ ಸಾಫ್ಟ್ ಯೂಸ್‌ಗೆ ಈ ಬಜೆಟ್ ಫ್ರೆಂಡ್ಲಿ ಸೆಟ್ ನೀವು ಖರೀದಿಸಬಹುದು. ನೀವು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಫೋನ್‌ಗಳನ್ನು ತೆಗೆದುಕೊಳ್ಳಲು ಬಯಸಿದಲ್ಲಿ ಇದು ನಿಮಗೆ ಬೆಸ್ಟ್ ಆಯ್ಕೆ.
ಗ್ರಾಹಕರನ್ನು ತನ್ನ ಮೊಬೈಲ್‌ನತ್ತ ಸೆಳೆಯಲು ಕಂಪನಿ ಕಸರತ್ತು ನಡೆಸಿದೆ. ಅಲ್ಲದೆ ಈ ಕಂಪನಿಯ ಸ್ಮಾರ್ಟ್‌ಫೋನ್ ಕಾಣಲು ಸ್ಟೈಲಿಷ್ ಆಗಿದೆ. ಈ ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಪ್ರೊಸೆಸರ್‌ನ್ನು ಸಹ ನೀಡಲಾಗಿದೆ. ಇನ್ನು ಈ ಮೊಬೈಲ್ ಕ್ಯಾಮೆರಾ ಸಹ ಉತ್ತಮವಾಗಿದೆ. ಈ ಸ್ಮಾರ್ಟ್‌ಫೋನ್‌ನ್ನು ನೀವು ಖರೀದಿಸಲು ಮುಂದಾದರೆ ಎಷ್ಟು ಡಿಸ್ಕೌಂಟ್ ಸಿಗಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಎಷ್ಟು ಹಣ ಸೇವ್ ಮಾಡಬಹುದು
Realme 12 Pro 5G ಯ 256GB ಸಂಗ್ರಹಣೆ ಮತ್ತು ನೀಲಿ ರೂಪಾಂತರಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಅದರ ಲಾಂಚ್ ಪ್ರೈಸ್‌ಗಿಂತಲೂ ಭಾರೀ ಕಡಿಮೆಯಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 33,999 ರೂ. ನಲ್ಲಿ ಮೊದಲು ಲಭ್ಯವಿದ್ದು, ಈಗ ಇದರ ಮೇಲೆ ಶೇಕಡಾ 26 ರಷ್ಟು ದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಡಿಸ್ಕೌಂಟ್‌ನೊಂದಿಗೆ ಈ ಆಕರ್ಷಕ ವಿನ್ಯಾಸದ ಫೋನ್ ಅನ್ನು ಕೇವಲ 24,999 ರೂಗಳಲ್ಲಿ ಖರೀದಿಸಬಹುದು. ಲಾಂಚ್ ಪ್ರೈಸ್‌ಗಿಂತಲೂ ಇದರ ಬಲೆಯಲ್ಲಿ 9 ಸಾವಿರದಷ್ಟು ಕಡಿತವಾಗಿದೆ. ಈ ಮೊಬೈಲ್‌ನಲ್ಲಿ 12 ಜಿಬಿ ರ್ಯಾಮ್ ಇರುವುದರಿಂದ ಈ ಬೆಲೆಗೆ ಈ ಫೋನ ಸಮಂಜಸ ಅನಿಸುತ್ತದೆ.
ಮತ್ತೇನಿದೆ ಲಾಭ
ಇದರ ಜೊತೆಗೆ ಕಂಪನಿಯು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಮಾಡಿದ ಖರೀದಿಗಳ ಮೇಲೆ ಗ್ರಾಹಕರಿಗೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡುತ್ತಿದೆ. ಇದರೊಂದಿಗೆ, ಕೆಲವು ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ರೂ 1000 ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಾಗುವುದು.












Click it and Unblock the Notifications