ರಾಷ್ಟ್ರಪತಿ ಚುನಾವಣೆ: ತಿರಸ್ಕೃತಗೊಳ್ಳಲಿದೆ 113 ನಾಮಪತ್ರ; ಅಷ್ಟು ಸುಲಭವಲ್ಲ ಸ್ಪರ್ಧೆ
ನವದೆಹಲಿ, ಜೂನ್ 30: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ನಿನ್ನೆ ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇಂದು ಗುರುವಾರ ನಾಮಪತ್ರ ಪರಿಶೀಲನೆಯಾಗುತ್ತಿದ್ದು, ಸಂಜೆಯ ವೇಳೆಗೆ ಸ್ಪರ್ಧಾಳುಗಳ ಘೋಷಣೆಯಾಗಲಿದೆ.
ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ. ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಾಮಪತ್ರ ಕೊಟ್ಟಿದ್ದಾರೆ. ಇವರಿಬ್ಬರಷ್ಟೇ ಅಲ್ಲ ಇನ್ನೂ 113 ಮಂದಿ ರಾಷ್ಟ್ರಪತಿ ಸ್ಥಾನ ಬಯಸಿ ಚುನಾವಣಾ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಮಾಮೂಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದು ಸುಲಭ. ಆದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಾ ಕಣಕ್ಕೆ ಬರುವುದು ಸಾಮಾನ್ಯ ಮಾತಲ್ಲ. ಈಗ ನಾಮಪತ್ರ ಸಲ್ಲಿಸಿರುವ 115 ಜನರಲ್ಲಿ ಬಹುತೇಕ ಮಂದಿಯ ನಾಮಪತ್ರ ತಿರಸ್ಕೃತಗೊಳ್ಳುವುದು ನಿಶ್ಚಿತ. ಅಂತಿಮವಾಗಿ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ಮಾತ್ರ ಸ್ಪರ್ಧೆಯಲ್ಲಿ ಉಳಿದುಕೊಳ್ಳುವ ನಿರೀಕ್ಷೆ ಇದೆ.
ಇಷ್ಟು ಮಂದಿಯ ನಾಮಪತ್ರ ತಿರಸ್ಕಾರ ಆಗುವುದು ಯಾಕೆ? ರಾಷ್ಟ್ರಪತಿ ಚುನಾವಣೆಯಲ್ಲಿ ಉಮೇದುವಾರಿಕೆಗೆ ಕಠಿಣ ನಿಯಮಗಳಿವೆ. ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳ ಬೆಂಬಲ ಇಲ್ಲದೆ ಒಬ್ಬ ಅಭ್ಯರ್ಥಿ ಸ್ಪರ್ಧಿಸಲು ಅಸಾಧ್ಯದ ಮಾತು.
ಈ ರಾಷ್ಟ್ರಪತಿ ಚುನಾವಣೆಯಲ್ಲಿ ಉಮೇದುವಾರಿಕೆಗೆ ಇರುವ ಪ್ರಮುಖ ನಿಯಮಗಳು ಇಲ್ಲಿವೆ.

ಸೂಚಕರು, ಅನುಮೋದರ ಬೆಂಬಲ
ರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಬೇಕಾದರೂ ನಾಮಪತ್ರ ಸಲ್ಲಿಸಬಹುದು. ಅದರೆ, ಅಂತಿಮವಾಗಿ ನಾಮಪತ್ರವನ್ನು ಮಾನ್ಯ ಮಾಡಲು ಹಲವು ನಿಯಮಗಳಿವೆ. ನಾಮಪತ್ರ ಸಲ್ಲಿಸುವ ಒಬ್ಬ ವ್ಯಕ್ತಿಗೆ ಕನಿಷ್ಠ 50 ಮಂದಿ ಸೂಚಕರು (Proposer) ಇರಬೇಕು. ಅಷ್ಟೇ ಅಲ್ಲ 50ಕ್ಕೂ ಹೆಚ್ಚು ಜನರು ಅನುಮೋದಕ (Seconder) ಆಗಿ ಈ ಪ್ರಸ್ತಾವನೆಯನ್ನು ಬೆಂಬಲಿಸಬೇಕು.
ಸೂಚಕ ಮತ್ತು ಅನುಮೋದಕ ಅವರೆಲ್ಲರೂ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುವ ಜನಪ್ರತಿನಿಧಿಗಳಾಗಿರಬೇಕು. 50 ಪ್ರೊಪೋಸರ್ ಮತ್ತು 50 ಸೆಕೆಂಡರ್‌ಗಳ ಬೆಂಬಲ ಪಡೆಯಬಲ್ಲ ಅಭ್ಯರ್ಥಿಯ ನಾಮಪತ್ರ ಸಿಂಧುವಾಗುತ್ತದೆ. ಇಲ್ಲದಿದ್ದರೆ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.ನಾಮಪತ್ರವನ್ನು ಅಭ್ಯರ್ಥಿಯೇ ಸಲ್ಲಿಸಬೇಕೆಂದಿಲ್ಲ. ಪ್ರೊಪೋಸರ್ ಅಗಲೀ ಅಥವಾ ಸೆಕೆಂಡರ್ ಅಗಲೀ ಅಭ್ಯರ್ಥಿಯ ಪರವಾಗಿ ನಾಮಪತ್ರ ಸಲ್ಲಿಸಬಹುದು.

ಸೆಕ್ಯೂರಿಟಿ ಡೆಪಾಸಿಟ್
ರಾಷ್ಟ್ರಪತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂ ಮೊತ್ತದ ನಗದು ಹಣವನ್ನು ಭದ್ರತಾ ಠೇವಣಿಯಾಗಿ ಇಡಬೇಕು. ನಗದು ಇಲ್ಲದಿದ್ದರೆ ಆರ್‌ಬಿಐನಲ್ಲಿ ಅಷ್ಟು ಮೊತ್ತದ ಠೇವಣಿ ಇಟ್ಟು, ಅದರ ರಸೀದಿಯನ್ನು ನಾಮಪತ್ರದ ವೇಳೆ ಲಗತ್ತಿಸಬೇಕು. ಇಲ್ಲಿ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಅಥವಾ ಚೆಕ್‌ಗಳಾಗಲೀ ನೀಡುವಂತಿಲ್ಲ. ಅಭ್ಯರ್ಥಿಯು ಭಾರತೀಯ ಮತದಾರನಾಗಿರಬೇಕು. ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ಪ್ರಮಾಣಿತ ದಾಖಲೆಯನ್ನು ಅಭ್ಯರ್ಥಿ ಸಲ್ಲಿಸಬೇಕು.

ಇತರೆ ನಿಯಮಗಳು
ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಬಯಸುವ ವ್ಯಕ್ತಿಯ ವಯಸ್ಸು 35 ವರ್ಷ ದಾಟಿರಬೇಕು. ಲೋಕಸಭಾ ಸದಸ್ಯತ್ವ ಪಡೆಯುವ ಅರ್ಹತೆ ಇರಬೇಕು. ಅಭ್ಯರ್ಥಿಯು ಕೇಂದ್ರ ಅಥವಾ ರಾಜ್ಯ ಸರಕಾರದ ಯಾವ ಲಾಭದಾಯಕ ಹುದ್ದೆಯನ್ನೂ ಹೊಂದಿರಬಾರದು. ಯಾವುದೇ ಸರಕಾರದ ಅಧೀನದಲ್ಲಿರುವ ಯಾವುದೇ ಪ್ರಾಧಿಕಾರದಲ್ಲೂ ಇವರು ಲಾಭದಾಯಕ ಹುದ್ದೆ ಹೊಂದಿರಬಾರದು. ಇಲ್ಲಿ ಲಾಭದಾಯಕ ಹುದ್ದೆ ಎಂದರೆ ಸಂಬಳಕ್ಕೆ ಕೆಲಸದಲ್ಲಿರುವುದು ಎಂದರ್ಥ. ಗೌರವಧನ ಪಡೆದು ಹುದ್ದೆಯಲ್ಲಿದ್ದರೆ ಅದು ಲಾಭದಾಯಕ ಹುದ್ದೆ ಎನಿಸುವುದಿಲ್ಲ.
ಹಾಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಯಾವುದೇ ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಯಾವುದೇ ಸಚಿವರು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

ರಾಷ್ಟ್ರಪತಿ ಚುನಾವಣೆ ಮಾಹಿತಿ
ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗುತ್ತದೆ. ದೇಶದ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರು ಹಾಗು ಎಲ್ಲಾ ರಾಜ್ಯಗಳ ಎಲ್ಲಾ ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುತ್ತಾರೆ. ನಾಮನಿರ್ದೇಶನವಾಗದ ಎಲ್ಲಾ ಸಂಸದರು, ಶಾಸಕರಿಗೆ ಮತದಾನದ ಹಕ್ಕು ಇದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು 776 ಸಂಸದರಿದ್ದಾರೆ. ವಿವಿಧ ವಿಧಾನಸಭೆಗಳಲ್ಲಿ ಒಟ್ಟು 4,123 ಶಾಸಕರಿದ್ದಾರೆ. ಇವರೆಲ್ಲರೂ ಮತದಾನ ಮಾಡಲಿದ್ದಾರೆ. ಇಷ್ಟೂ ಮಂದಿಯ ಒಟ್ಟು ಮತಮೌಲ್ಯವನ್ನು 10,98,903 ಎಂದು ಗಣಿಸಲಾಗಿದೆ. ರಾಷ್ಟ್ರಪತಿ ಆಗಲು ಒಬ್ಬ ಅಭ್ಯರ್ಥಿಗೆ 5,49,452 ಮತಮೌಲ್ಯದ ಅಗತ್ಯತೆ ಇದೆ.
ಮತ ಮೌಲ್ಯ ಹೇಗೆ ನಿರ್ಧಾರ?
ಒಬ್ಬ ಶಾಸಕನ ಮತ ಮೌಲ್ಯವನ್ನು ಆತನ ರಾಜ್ಯದ ಜನಸಂಖ್ಯೆ ಮತ್ತು ಆ ರಾಜ್ಯದ ಒಟ್ಟು ಶಾಸಕರ ಸಂಖ್ಯೆ ಮೇಲೆ ಅವಲಂಬಿತವಾಗುತ್ತದೆ. ಕರ್ನಾಟಕದ ಒಬ್ಬ ಶಾಸಕನ ಒಂದು ಮತಕ್ಕೆ ಇರುವ ಮೌಲ್ಯವನ್ನು ನಿರ್ಧರಿಸಬೇಕಾದರೆ ನಮ್ಮ ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರಿರುವ 224 ಸಂಖ್ಯೆಯಿಂದ ವಿಭಜಿಸಬೇಕು. ನಂತರ ಆ ಸಂಖ್ಯೆಯನ್ನು ಒಂದು ಸಾವಿರದಿಂದ ಮತ್ತೆ ಭಾಗಿಸಬೇಕು. ಈ ರೀತಿಯಾಗಿ ಕರ್ನಾಟಕದ ಒಬ್ಬ ಶಾಸಕರ ಮತಮೌಲ್ಯ 131 ಅಗಿರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿನ ಶಾಸಕರ ಮತ ಮೌಲ್ಯ ತುಸು ಬೇರೆಯಾಗಿರುತ್ತದೆ.
ಇನ್ನು ಸಂಸದರ ಮತಮೌಲ್ಯವನ್ನು ಒಟ್ಟಾರೆ ಶಾಸಕರ ಮತಮೌಲ್ಯವನ್ನು ಒಟ್ಟುಗೂಡಿಸಿ ನಂತರ ಒಟ್ಟು ಸಂಸದರ ಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಅಂಕಿಯೇ ಒಬ್ಬ ಸಂಸದನ ಮತಮೌಲ್ಯ. ಈ ವರ್ಷ ಒಬ್ಬ ಸಂಸದನ ಮತಮೌಲ್ಯ 708 ಇದೆ.
ಈ ಮತಮೌಲ್ಯದ ನಿರ್ಧಾರ ಯಾಕೆಂದರೆ, ಒಬ್ಬ ಶಾಸಕರಾದವರು ಜನರ ಪ್ರತಿನಿಧಿಯಾಗಿರುತ್ತಾರೆ. ಕರ್ನಾಟಕದ 224 ಶಾಸಕರು ನಮ್ಮ ರಾಜ್ಯ 6 ಕೋಟಿಗೂ ಹೆಚ್ಚು ಜನರನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ, ಮತಮೌಲ್ಯವನ್ನು ಲೆಕ್ಕ ಮಾಡಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications