MahaKumbh Mela 2025: ಮಹಾಕುಂಭ ಮೇಳ ನಡೆಯುವ ಪ್ರಯಾಗ್‌ರಾಜ್‌ನಲ್ಲಿ ಹೇಗಿದೆ ಸರ್ಪಗಾವಲು ?

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಕೋಟ್ಯಂತರ ಜನ ಸೇರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಈ ಭಾರಿ ಭದ್ರತೆ ವಿಚಾರದಲ್ಲಿ ಕೂಡ ಹೆಚ್ಚಿನ ಒತ್ತು ನೀಡಲಾಗಿದೆ. ಕುಂಭಮೇಳಕ್ಕೆ ಬರುವ ಜನರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ 2025ರ ಮಹಾಕುಂಭ ಮೇಳವು ಇತಿಹಾಸದಲ್ಲಿ ನಡೆದ ಅತ್ಯಂತ ಸುರಕ್ಷಿತವಾದ ಮಹಾಕುಂಭ ಮೇಳವಾಗಲಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಯಾವುದೇ ಸಮಾಜ ವಿರೋಧಿ ಅಥವಾ ದೇಶ ವಿರೋಧಿ ಅಂಶಗಳಿಗೆ ಅವಕಾಶವೇ ಇರುವುದಿಲ್ಲ ಎಂದಿದ್ದಾರೆ.

Prayagraj Maha Kumbh Mela 2025 To Be The Safest Ever UP Deputy CM Keshav Prasad Maurya

ಒಂದು ವೇಳೆ ಆ ರೀತಿ ಯಾರಾದರೂ ಸಂಚು ಮಾಡಿದರೂ ಇಲ್ಲಿರುವ ಭದ್ರತಾ ವ್ಯವಸ್ಥೆ ಭೇದಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರವಿರೋಧಿಗಳು ಇಂತಹ ನಿರರ್ಥಕ ಬೆದರಿಕೆಗಳನ್ನು ಮಾತ್ರವೇ ನೀಡಬಹುದು, ಆದರೆ ಅವರು ಮಹಾಕುಂಭವನ್ನು ಗುರಿಯಾಗಿಸಲು ಪ್ರಯತ್ನಿಸಿದರೆ, ಅವರು ಜಗತ್ತಿನಲ್ಲಿ ಎಲ್ಲೇ ಅಡಗಿಕೊಂಡರೂ ಬೇಟೆಯಾಡುತ್ತಾರೆ ಎಂಬುದು ಅವರಿಗೂ ಗೊತ್ತಿದೆ ಎಂದು ಎಚ್ಚರಿಸಿದ್ದಾರೆ.

ಮಹಾಕುಂಭ ಮೇಳವು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಮೂರ್ಖತನದ ಕ್ರಮಗಳಿಂದಾಗಿ ಗಾಳಿ, ನೆಲ ಅಥವಾ ನೀರಿನ ಮೂಲಕ ಯಾವುದೇ ದಾಳಿಗಳು ಇಲ್ಲಿ ಸಾಧ್ಯವೇ ಇಲ್ಲ ಎಂದು ಮೌರ್ಯ ಭರವಸೆ ನೀಡಿದ್ದಾರೆ. ಹಿಂದೂಸ್ತಾನ್ ದಿವ್ಯ ಮಹಾಕುಂಭ-2025ರ ಸಮಾವೇಶದಲ್ಲಿ ಮಾತನಾಡಿರುವ ಮೌರ್ಯ, ಮಹಾಕುಂಭಮೇಳಕ್ಕೆ ಅಂದಾಜು 40ರಿಂದ 50 ಕೋಟಿ ಭಕ್ತರು ಬರುವ ಸಾಧ್ಯತೆ ಇದೆ. ಇಲ್ಲಿ ಯಾವುದೇ ಜಾತಿ ಅಥವಾ ಧರ್ಮದ ಬೇಧವಿಲ್ಲದೆ ಸಂಗಮ್ ನೀರಿನಲ್ಲಿ ಸ್ನಾನ ಮಾಡುವ ನಿರೀಕ್ಷೆಯಿದೆ ಎಂದಿದ್ದಾರೆ.

Prayagraj Maha Kumbh Mela 2025 To Be The Safest Ever UP Deputy CM Keshav Prasad Maurya

2013ರ ಕುಂಭಮೇಳದ ಸಮಯದಲ್ಲಿ ಮಿನಿ ಸಿಎಂ ಅಜಂ ಖಾನ್ ಅವರ ನೇತೃತ್ವದಲ್ಲಿ ಕುಂಭಮೇಳವು ಅನೇಕ ಸಂಕಷ್ಟಗಳನ್ನು ಎದುರಿಸಿತು. ಆಗ ಯಾತ್ರಿಕರು ಕೂಡ ತೀವ್ರ ತೊಂದರೆಗಳನ್ನು ಅನುಭವಿಸಿದರು. ಕೆಲವರು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡರು ಎಂದು ಸಮಾಜವಾದಿ ಪಕ್ಷದ ಆಡಳಿತವನ್ನು ಮೌರ್ಯ ಟೀಕಿಸಿದ್ದಾರೆ. 2013ರ ಕುಂಭಮೇಳದ ಸಮಯದಲ್ಲಿ ನಡೆಸಲಾದ ಮೂಲಸೌಕರ್ಯ ಅಭಿವೃದ್ಧಿಯೆಂದರೆ ಅದು ಬೈಹ್ರಾನಾ ಫ್ಲೈಓವರ್. ಇದು ಸರಿಯಾದ ಪ್ರವೇಶ ಅಥವಾ ನಿರ್ಗಮನ ವ್ಯವಸ್ಥೆಯನ್ನೇ ಹೊಂದಿಲ್ಲ ಎಂದಿದ್ದಾರೆ.

ನಮ್ಮ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ನಡೆದ 2019ರ ಕುಂಭಮೇಳವು ಸುಗಮ ಮತ್ತು ಸುರಕ್ಷಿತ ಸಂಘಟನೆಯ ಪ್ರತೀಕವಾಗಿತ್ತು. ಇದು ದಾಖಲೆಯ 24 ಕೋಟಿ ಯಾತ್ರಿಕರ ಆಗಮನಕ್ಕೆ ಸಾಕ್ಷಿಯಾಗಿತ್ತು. ಆದರೆ, ಮಹಾಕುಂಭ 2025 ಇದಕ್ಕಿಂತಲೂ ಇನ್ನೂ ಅದ್ಧೂರಿಯಾಗಿ ನಡೆಯಲಿದೆ. ಸುಮಾರು 40ರಿಂದ 50 ಕೋಟಿಗೂ ಹೆಚ್ಚು ಮಂದಿ ಈ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.

Prayagraj Maha Kumbh Mela 2025 To Be The Safest Ever UP Deputy CM Keshav Prasad Maurya

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವುದು ಮಹಾಕುಂಭ ಮೇಳ. ಈ ಮಹಾಕುಂಭ ಮೇಳವು ಜನವರಿ 13ರಂದು ಪ್ರಾರಂಭವಾಗಿ ಫೆಬ್ರವರಿ 26ರಂದು ಪ್ರಯಾಗರಾಜ್‌ನಲ್ಲಿ ಮುಕ್ತಾಯಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+