ಬಜೆಟ್ ಫ್ರೆಂಡ್ಲಿ ಗ್ರಾಹಕರನ್ನು ಟಾರ್ಗೆಟ್ ಮಾಡಿ ಲಾಂಚ್ ಮಾಡಲಿದೆ Poco
ಚೀನಾ ಮೂಲದ ಮೊಬೈಲ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಹಾವಳಿ ಮಾಡಿದೆ. ಓಪೊ, ರೆಡ್‌ಮಿ, ರಿಯಲ್‌ಮಿ, ಒನ್ ಪ್ಲಸ್, ಪೊಕೊ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಪ್ರಭುತ್ವ ಹೊಂದಿವೆ. ಪ್ರತಿ ತಿಂಗಳೂ ಒಂದಿಲ್ಲಾ ಒಂದು ಕಂಪನಿ ಹೊಸ ತಂತ್ರಜ್ಞಾನದಿಂದ ಹೊಸ ಮೊಬೈಲ್ ಲಾಂಚ್ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ಮೊಬೈಲ್ ಸೇರಿದ್ದು, ಇದೇ ತಿಂಗಳಿನಲ್ಲಿ ಲಾಂಚ್ ಆಗಲಿದೆ.
ಚೀನಾ ಮೂಲದ ಪೊಕೊ ಕಂಪನಿ ತನ್ನ ಮತ್ತೊಂದು ಮೊಬೈಲ್ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಕಂಪನಿಯು ತನ್ನ ಹೊಸ ಫೋನ್ ಟೀಸರ್ ಹಾಗೂ ಬಿಡುಗಡೆ ಮಾಡುವ ದಿನಾಂಕವನ್ನು ಬಹಿರಂಗ ಪಡಿಸಿದೆ. ಇನ್ನು ಈ ಮೊಬೈಲ್ ಏನೆಲ್ಲಾ ವಿಶೇಷತೆಗಳಿಂದ ಹೊರ ಬರಲಿದೆ ಎಂಬುದನ್ನು ಅಂದಾಜಿಸಲಾಗಿದೆ. ಇದು ಈ ವರ್ಷದ ಏಪ್ರಿಲ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದ Redmi Turbo 3 ರ ಮರು ಬ್ರಾಂಡೆಡ್ ಆವೃತ್ತಿಯಾಗಿದೆ. Poco F6 5G ವಿನ್ಯಾಸ ಮತ್ತು ವಿಶೇಷಣಗಳನ್ನು Redmi ಮಾದರಿಯೊಂದಿಗೆ ಹೊಂದಾಣಿಕೆ ಆಗುತ್ತವೆ.

ಫೋನ್ ಬಿಡುಗಡೆ ಯಾವಾಗ?
ಈ ಫೋನ್ ಮೇ 23 ರಂದು 4:30pm ಕ್ಕೆ ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು ಪೊಕೊ ಹೇಳಿಕೊಂಡಿದೆ. ಈ ಬಗ್ಗೆ ಕಂಪನಿಯು ತನ್ನ ಸಾಮಾಜಿಕ ತಾಣದಲ್ಲಿ ಟೀಸರ್ ಬಿಡುಗಡೆ ಮಾಡಿದೆ. ಈ ಫೋನಿನ ಹಿಂಭಾಗವನ್ನು ಟೀಸರ್‌ನಲ್ಲಿ ತೋರಿಸಲಾಗುದೆ. ಈ ಕ್ಯಾಮೆರಾ ಸೆಟಪ್ ವೃತ್ತಾಕಾರದಲ್ಲಿ ಕಾಣಬಹುದು. ಈ ಫೋನ್ 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ.
India debut of the powerful Snapdragon®️ 8s Gen 3 on the #POCOF65G
— POCO India (@IndiaPOCO) May 14, 2024
Launch Event on 23rd May 2024 | 4:30 PM IST
Know more👉https://t.co/QPvagIOliq#GodModeOn #POCO #POCOIndia pic.twitter.com/35YnM01HwE
ಪ್ರೊಸೆಸರ್ ಯಾವುದು?
ಈ ಮೊಬೈಲ್ Qualcomm Snapdragon 8s Gen 3 ಚಿಪ್‌ಸೆಟ್ ನಿಂದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಸ್ಮಾರ್ಟ್‌ಫೋನ್ 6.67 ಇಂಚಿನ 1.5K ಓಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. 120 Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದೆ ಎಂದು ಅಂದಾಜಿಲಾಗುತ್ತಿದೆ. Poco F6 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಬಹುದಾಗಿದೆ.
God level performance for Real 😈
— POCO India (@IndiaPOCO) May 13, 2024
Coming your way on 23rd May, 4:30 PM IST only on #Flipkart
Know more👉https://t.co/QPvagINNsS#POCOF65G #GodModeOn #POCO #POCOIndia pic.twitter.com/vFVjZRoEK6
ಹಿಂಬಾಗದಲ್ಲಿ ಕ್ಯಾಮೆರಾ ಸೆಟಪ್ ಹೇಗಿದೆ?
ಮುಖ್ಯ ಕ್ಯಾಮರಾ 50 ಮೆಗಾಪಿಕ್ಸೆಲ್ ಆಗಿರುತ್ತದೆ. ಇದು ಸೋನಿ LYT 600 ಸಂವೇದಕದೊಂದಿಗೆ ಬರುತ್ತದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾದೊಂದಿಗೆ ಫೋನ್ ಅನ್ನು ಒದಗಿಸಬಹುದು. ಫೋನ್‌ನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗುತ್ತಿದ್ದು, ಸೆಲ್ಫಿ ಹಾಗೂ ರೆಕಾರ್ಡ್‌ಗೆ ಲಭ್ಯವಿರುತ್ತದೆ. ಫೋನ್ Android 14 ಆಧಾರಿತ HyperOS ಬೆಂಬಲದೊಂದಿಗೆ ಬರುತ್ತದೆ.
Poco F6 ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಒದಗಿಸಲಿದೆ. 90W ವೇಗದ ಚಾರ್ಜಿಂಗ್ ಬೆಂಬಲವನ್ನು ಫೋನ್‌ನೊಂದಿಗೆ ಒದಗಿಸಬಹುದು. ಮುಂಬರುವ ಈ ಸ್ಮಾರ್ಟ್‌ಫೋನ್‌ನೊಂದಿಗೆ 3 ವರ್ಷಗಳ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸಬಹುದು.












Click it and Unblock the Notifications