ಸೇವಾ ಸರ್ವೀಸ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಪಿಯೂಷ್

ಬೆಂಗಳೂರು, ಅಕ್ಟೋಬರ್ 16: ಭಾರತೀಯ ರೈಲ್ವೆ10 ಹೊಸ 'ಸೇವಾ ಸರ್ವೀಸ್' ರೈಲುಗಳ ಸಂಚಾರಕ್ಕೆ ಅಕ್ಟೋಬರ್ 16ರಂದು ಚಾಲನೆ ನೀಡಲಾಗಿದೆ. ಒಟ್ಟು 10 ಸೇವಾ ಸರ್ವೀಸ್ ಎಕ್ಸ್ ಪ್ರೆಸ್ ರೈಲುಗಳ ಈ ಪೈಕಿ 5 ರೈಲುಗಳು ಪ್ರತಿದಿನ ಸಂಚರಿಸಲಿವೆ. ಮಿಕ್ಕ ರೈಲುಗಳು ವಾರಕ್ಕೆ 6 ದಿನಗಳ ಸಂಚರಿಸಲಿವೆ.

ದೇಶದ ಪ್ರಮುಖ ನಗರಗಳಿಂದ ಸಣ್ಣ ಪಟ್ಟಣಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಇತ್ತೀಚೆಗೆ 'ಸೇವಾ ಸರ್ವೀಸ್' ರೈಲುಗಳಿಗೆ ಚಾಲನೆ ನೀಡಿದೆ ಎಂದು ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೊಯೆಲ್ ಹೇಳಿದರು.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ -ಶಾಮ್ಲಿ ನಡುವಿನ ರೈಲಿಗೆ ನವದೆಹಲಿಯಲ್ಲಿ ಬುಧವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಹರ್ಷ್ ವರ್ಧನ್ ಉಪಸ್ಥಿತರಿದ್ದರು.

 5 ರೈಲುಗಳು ಪ್ರತಿದಿನ ಸಂಚರಿಸಲಿವೆ

5 ರೈಲುಗಳು ಪ್ರತಿದಿನ ಸಂಚರಿಸಲಿವೆ

ಅ.16ರಿಂದ ದೆಹಲಿ ಹಾಗೂ ಶಾಮ್ಲಿ, ಭುವನೇಶ್ವರ್ ನಯಾಘರ್ ಪಟ್ಟಣ, ಮುರ್ಕೊಗ್ಸೆಲೆಕ್ಸ್ ಹಾಗೂ ದಿಬ್ರುಗರ್, ಕೋಟಾ ಹಾಗೂ ಝಲಾವರ್ ನಗರ, ಕೊಯಮತ್ತೂರು ಹಾಗೂ ಪಳನಿ ನಡುವೆ ಪ್ರತಿದಿನ ಸೇವಾ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ.

ಈ ಮಾರ್ಗಗಳಲ್ಲದೆ ವದ್ನಗರ್ ನಿಂದ ಮಹೇಸಾನಾ, ಅಸರ್ಯಾ ಇಂದ ಹಿಮ್ಮತ್ ನಗರ, ಕರೂರು ಇಂದ ಸೇಲಂ, ಯಶವಂತಪುರಂ ಇಂದ ತುಮಕೂರು, ಕೊಯಮತ್ತೂರು ಇಂದ ಪೊಲ್ಲಾಚಿ ನಡುವಿನ ಸೇವಾ ಎಕ್ಸ್ ಪ್ರೆಸ್ ರೈಲು ವಾರದ 6 ದಿನಗಳ ಸಂಚರಿಸಲಿದೆ.

ಪ್ರಧಾನಿ ಮೋದಿಗೆ ಉಡುಗೊರೆ ಎಂದ ಕೇಂದ್ರ ಸಚಿವ

ಪ್ರಧಾನಿ ಮೋದಿಗೆ ಉಡುಗೊರೆ ಎಂದ ಕೇಂದ್ರ ಸಚಿವ

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಮಾತನಾಡಿ, ಇಂದು ಚಾಲನೆ ನೀಡಲಾಗಿರುವ ಸೇವಾ ಸರ್ವೀಸ್ ಎಕ್ಸ್ ಪ್ರೆಸ್ ಗಳ ಪೈಕಿ ವದ್ನಗರ್ ಹಾಗೂ ಮಹೇಸಾನಾ ನಡುವೆ ಸಂಚರಿಸುವ ರೈಲು ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿದೆ. ವದ್ನಗರ್ ಸ್ಟೇಷನ್ ನಲ್ಲಿ ಚಹಾ ಮಾರಾಟ ಮಾಡುತ್ತಿದ್ದವರು ಇಂದು ಪ್ರಧಾನಿಯಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು.

ಮತ್ತೊಂದು ಬೆಳವಣಿಗೆಯಲ್ಲಿ ಪ್ರಯಾಣಿಕರು ದೂರು ದಾಖಲಿಸಲು ಭಾರತೀಯ ರೈಲ್ವೆ ಹೊಸ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಆರಂಭಿಸಿದೆ.

 9 ಸೇವಾ ಎಕ್ಸ್ ಪ್ರೆಸ್ ಗಳ ಪಟ್ಟಿ

9 ಸೇವಾ ಎಕ್ಸ್ ಪ್ರೆಸ್ ಗಳ ಪಟ್ಟಿ

* ವದ್ನಗರ್ -ಮಹೇಸಾನಾ ಡೆಮು (ವಾರದಲ್ಲಿ 6 ದಿನಗಳು)- ಗುಜರಾತ್
* ಅಸರ್ವಾ-ಹಿಮ್ಮತ್ ನಗರ್ ಡೆಮು (ವಾರದಲ್ಲಿ 6 ದಿನಗಳು)- ಗುಜರಾತ್
* ಕರೂರ್- ಸೇಲಂ ಡೆಮು (ವಾರದಲ್ಲಿ 6 ದಿನಗಳು)- ತಮಿಳುನಾಡು
* ಕೊಯಮತ್ತೂರು- ಪೊಲ್ಲಾಚಿ ಪ್ಯಾಸೆಂಜರ್ (ವಾರದಲ್ಲಿ 6 ದಿನಗಳು)- ತಮಿಳುನಾಡು
* ಕೊಯಮತ್ತೂರು-ಪಳನಿ ಪ್ಯಾಸೆಂಜರ್ (ಪ್ರತಿದಿನ)-ತಮಿಳುನಾಡು

* ಯಶವಂತಪುರ-ತುಮಕೂರು ಡೆಮು (ವಾರದಲ್ಲಿ 6 ದಿನಗಳು)- ಕರ್ನಾಟಕ.

* ಮುರ್ಕೊಂಗ್ಸೆಲೆಕ್-ದಿಬ್ರುಗರ್ ಪ್ಯಾಸೆಂಬರ್ (ಪ್ರತಿದಿನ)-ಅಸ್ಸಾಂ.

* ಭುವನೇಶ್ವರ-ನಯಾಗರ್ ಎಕ್ಸ್ ಪ್ರೆಸ್ (ಪ್ರತಿದಿನ)-ಅಸ್ಸಾಂ.

* ದೆಹಲಿ-ಶಾಮ್ಲಿ ಪ್ಯಾಸೇಂಜರ್ (ಪ್ರತಿದಿನ)

ಸೇವಾ ಸರ್ವೀಸ್ ಎಕ್ಸ್ ಪ್ರೆಸ್ ವಿಶೇಷವೇನು?

ಭಾರತೀಯ ರೈಲ್ವೆ ಇಲಾಖೆಯಿಂದ ಲಭ್ಯ ಸಂಪನ್ಮೂಲ, ಸೌಲಭ್ಯ ಬಳಸಿಕೊಂಡು ದೇಶದ ಪ್ರಮುಖ ನಗರಗಳಿಂದ ಸಣ್ಣ ಪಟ್ಟಣಗಳಿಗೆ ಸಂಪರ್ಕ ಒದಗಿಸುವುದು ಸೇವಾ ಸರ್ವೀಸ್ ಎಕ್ಸ್ ಪ್ರೆಸ್ ಮುಖ್ಯ ಉದ್ದೇಶವಾಗಿದೆ. ಎಕ್ಸ್ ಪ್ರೆಸ್ ಬಗ್ಗೆ ಭಾರತೀಯ ರೈಲ್ವೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿವರಗಳನ್ನು ಹಂಚಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+